More

    ಇಂಗ್ಲೆಂಡ್ ದಾಳಿಗೆ ದಿಢೀರ್ ಕುಸಿದ ಭಾರತ ಮಹಿಳಾ ತಂಡ

    ಬ್ರಿಸ್ಟಲ್: ಆರಂಭಿಕ ಆಟಗಾರ್ತಿಯರಾದ ಶೆಫಾಲಿ ವರ್ಮ (96ರನ್, 152 ಎಸೆತ, 13 ಬೌಂಡರಿ, 2 ಸಿಕ್ಸರ್) ಹಾಗೂ ಸ್ಮೃತಿ ಮಂದನಾ (78ರನ್, 155ಎಸೆತ, 14 ಬೌಂಡರಿ) ಜೋಡಿಯ ಉತ್ತಮ ಆರಂಭದ ನಡುವೆಯೂ ಭಾರತ ಮಹಿಳಾ ತಂಡ ಏಕೈಕ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಎದುರು ದಿಢೀರ್ ಕುಸಿತ ಕಂಡಿತು. ಕೌಂಟಿ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ 6 ವಿಕೆಟ್‌ಗೆ 269 ರನ್‌ಗಳಿಂದ 2ನೇ ದಿನದಾಟ ಆರಂಭಿಸಿದ ಇಂಗ್ಲೆಂಡ್ 9 ವಿಕೆಟ್‌ಗೆ 396 ರನ್‌ಗಳಿಸಿ ಮೊದಲ ಇನಿಂಗ್ಸ್‌ಗೆ ಡಿಕ್ಲೇರ್ ಘೋಷಿಸಿತು.

    ಇದನ್ನೂ ಓದಿ: ಟೆಸ್ಟ್ ವಿಶ್ವಕಪ್ ಫೈನಲ್‌ಗೆ ಮುನ್ನಾದಿನವೇ ಆಡುವ 11ರ ಬಳಗ ಪ್ರಕಟಿಸಿದ ಟೀಮ್ ಇಂಡಿಯಾ

    ಬಳಿಕ ಮೊದಲ ಸರದಿ ಬ್ಯಾಟಿಂಗ್ ಆರಂಭಿಸಿದ ಭಾರತಕ್ಕೆ ಸ್ಮೃತಿ ಮಂದನಾ -ಶೆಫಾಲಿ ವರ್ಮ ಜೋಡಿ ಉತ್ತಮ ಆರಂಭ ನೀಡಿತು. ಈ ಜೋಡಿ ಮುರಿಯದ ಮೊದಲ ವಿಕೆಟ್‌ಗೆ 167 ರನ್ ಪೇರಿಸಿತು. ಶೆಫಾಲಿ ಶತಕದಂಚಿನಲ್ಲಿ ಎಡವಿದರೆ, ಇದರ ಬೆನ್ನಲ್ಲೇ ಸ್ಮೃತಿ, ಶಿಖಾ ಪಾಂಡೆ (0), ಮಿಥಾಲಿ ರಾಜ್ (2) ಹಾಗೂ ಪೂನಂ ರಾವತ್ (2) ನಿರಾಸೆ ಅನುಭವಿಸಿದರು. ಕೇವಲ 4 ರನ್‌ಗಳ ಅಂತರದಲ್ಲಿ ಭಾರತ 4 ವಿಕೆಟ್ ಕೈಚೆಲ್ಲಿತು. ಮೊದಲ ದಿನದಾಟದ ಅಂತ್ಯಕ್ಕೆ 5 ವಿಕೆಟ್‌ಗೆ 187 ರನ್ ಪೇರಿಸಿದ್ದು, ಇನಿಂಗ್ಸ್ ಮುನ್ನಡೆ ಸಾಧಿಸಲು ಇನ್ನು 209 ರನ್ ಪೇರಿಸಬೇಕಿದೆ.

    ಇಂಗ್ಲೆಂಡ್: 9 ವಿಕೆಟ್‌ಗೆ 396 ಡಿಕ್ಲೇರ್ (ಸೋಫಿಯಾ ಡಂಕ್ಲೆ 74*, ಅನ್ಯಾ ಶ್ರುಬ್ಸೊಲೆ 47, ಸ್ನೇಹಾ ರಾಣಾ 131ಕ್ಕೆ 4, ದೀಪ್ತಿ ಶರ್ಮ 65ಕ್ಕೆ 3), ಭಾರತ: 60 ಓವರ್‌ಗಳಲ್ಲಿ 5 ವಿಕೆಟ್‌ಗೆ 187 (ಶೆಫಾಲಿ 96, ಸ್ಮೃತಿ 78, ಹೀದರ್ ನೈಟ್ 1ಕ್ಕೆ 2, ಕೇಟ್ ಕ್ರಾಸ್ 40ಕ್ಕೆ 1).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts