More

    ಭಾರತ ಹಾಗೂ ಆಸ್ಟ್ರೇಲಿಯಾ ಸರಣಿಗೆ ಬರಲಿದೆ ಎಕ್ಸ್‌ಟ್ರಾ ಇನಿಂಗ್ಸ್…..!

    ಮುಂಬೈ: ಬಹುನಿರೀಕ್ಷಿತ ಎಕ್ಸ್‌ಟ್ರಾ ಇನಿಂಗ್ಸ್ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಸರಣಿಗೆ ದಿನಗಣನೆ ಆರಂಭಗೊಂಡಿದೆ. ಈಗಾಗಲೇ ಉಭಯ ತಂಡಗಳು ಕಠಿಣ ಅಭ್ಯಾಸದಲ್ಲೂ ತೊಡಗಿವೆ. ಕರೊನಾ ಕಾಲದಲ್ಲಿ ಭಾರತದ ಪಾಲಿಗೆ ಇದು ಮೊದಲ ಸರಣಿ ಇದಾಗಿದೆ. ಈ ಸರಣಿಗೆ ನೇರ ಪ್ರಸಾರದ ಹಕ್ಕುಹೊಂದಿರುವ ಸೋನಿ ಪಿಶ್ಚರ್ಸ್‌ ಸ್ಪೋರ್ಟ್ಸ್ ನೆಟ್‌ವರ್ಕ್ (ಎಸ್‌ಪಿಎಸ್‌ಎನ್) ಅಂತಾರಾಷ್ಟ್ರೀಯ ಮಾಜಿ ಆಟಗಾರರೊಳಗೊಂಡ ‘ಎಕ್ಸ್‌ಟ್ರಾ ಇನಿಂಗ್ಸ್’ ಪುನರಾರಂಭಿಸುತ್ತಿದೆ. ಇದಕ್ಕೂ ಮೊದಲು ನಡೆದ ಕೆಲ ಸರಣಿಗೆ ಎಕ್ಸ್‌ಟ್ರಾ ಇನಿಂಗ್ಸ್‌ಗೆ ಬ್ರೇಕ್ ಹಾಕಲಾಗಿತ್ತು.

    ಮಾಜಿ ಕ್ರಿಕೆಟಿಗರಾದ ಗ್ಲೆನ್ ಮೆಕ್‌ಗ್ರಾತ್, ವೀರೇಂದ್ರ ಸೆಹ್ವಾಗ್, ಅಜಯ್ ಜಡೇಜಾ, ನಿಕ್ ನೈಟ್, ಸಂಜಯ್ ಮಂಜ್ರೇಕರ್, ಜಹೀರ್ ಖಾನ್, ಮೊಹಮದ್ ಕ್ೈ, ಹರ್ಷ ಬೋಗ್ಲೆ, ವಿವೇಕ್ ರಾಜ್ದಾನ್, ಅಜಿತ್ ಅಗರ್ಕರ್ ಹಾಗೂ ವಿಜಯ್ ದಹಿಯಾ ಒಳಗೊಂಡ ವೀಕ್ಷಕರ ವಿವರಣೆಗಾರರ ತಂಡ ಎಕ್ಸ್‌ಟ್ರಾ ಇನಿಂಗ್ಸ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಕೊರನಾ ಕಾಲದಲ್ಲಿ ಇಂಗ್ಲೆಂಡ್‌ನಲ್ಲಿ ಮೊದಲಿಗೆ ಆರಂಭಗೊಂಡ ಸರಣಿಗಳಲ್ಲಿ ಎಕ್ಸ್‌ಟ್ರಾ ಇನಿಂಗ್ಸ್‌ಗೆ ಕಡಿವಾಣ ಹಾಕಲಾಗಿತ್ತು. ಇಂಗ್ಲೀಷ್ ಹಾಗೂ ಹಿಂದಿ ಎರಡೂ ಭಾಷೆಗಳಲ್ಲೂ ಎಕ್ಸ್‌ಟ್ರಾ ಇನಿಂಗ್ಸ್ ಕಾರ್ಯಕ್ರಮ ನಡೆಯಲಿದೆ.

    ಯುಎಇಯಲ್ಲಿ 13ನೇ ಐಪಿಎಲ್ ಮುಕ್ತಾಯಗೊಂಡ ಬೆನ್ನಲ್ಲೇ ಭಾರತ ತಂಡ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದೆ. ಪ್ರವಾಸದ ವೇಳೆ ಭಾರತ ತಲಾ 3 ಏಕದಿನ, ಟಿ20 ಹಾಗೂ 4 ಟೆಸ್ಟ್ ಪಂದ್ಯಗಳ ಸರಣಿ ನಡೆಯಲಿವೆ. ನವೆಂಬರ್ 17 ರಿಂದ ಏಕದಿನ ಸರಣಿ ಆರಂಭಗೊಳ್ಳಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts