More

    ಸಾಹಿತ್ಯಕ್ಕೆ ಸಿಂಪಿ ಲಿಂಗಣ್ಣನವರ ಕೊಡುಗೆ ಅಪಾರ

    ಇಂಡಿ: ಸಿಂಪಿ ಲಿಂಗಣ್ಣನವರು ಪ್ರಾಥಮಿಕ ಶಾಲೆಯ ಶಿಕ್ಷಕರಾಗಿ ಅಂದಾಜು 15 ವರ್ಷ ಸೇವೆ ಸಲ್ಲಿಸಿ ಸದಾ ಚಿಂತನಶೀಲತೆ, ಕ್ರಿಯಾಶೀಲತೆ ವ್ಯಕ್ತಿತ್ವ, ವೈಚಾರಿಕ ಮನೋಧರ್ಮ ಹೊಂದಿದ್ದ ಅವರು, ಆಧುನಿಕ ಸೌಲಭ್ಯಗಳಿಲ್ಲದ ಹಳ್ಳಿಗಳಲ್ಲಿ ಹಳ್ಳಿಗರಾಗಿ ಜನರೊಂದಿಗೆ ಬೆರೆತು ಮಕ್ಕಳಿಗೆ ಜ್ಞಾನ ನೀಡಿದರು ಎಂದು ಬನಹಟ್ಟಿಯ ಸಾಹಿತಿ ಬಿ.ಆರ್. ಪೊಲೀಸ್ ಪಾಟೀಲ ಹೇಳಿದರು.

    ಪಟ್ಟಣದ ಭೀಮಾತರಂಗ ಆನ್‌ಲೈನ್ ಸಾಹಿತ್ಯಿಕ- ಸಾಂಸ್ಕೃತಿಕ ಜಗಲಿ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಶ್ರೀ ಸಿಂಪಿ ಲಿಂಗಣ್ಣ ಕುರಿತು ಆನ್‌ಲೈನ್ ಉಪನ್ಯಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿ, ಶಾಲೆಗಳಲ್ಲಿ ನಾಡಹಬ್ಬ, ಗಣೇಶೋತ್ಸವಗಳನ್ನು ಆಚರಿಸಿ ಪ್ರಸಿದ್ಧ ಸಾಹಿತಿಗಳಿಂದ ಭಾಷಣ ಮಾಡಿಸಿ ಜನರಲ್ಲಿ ರಾಷ್ಟ್ರೀಯ ಪ್ರಜ್ಞೆ ಮೂಡಿಸಿದರು ಎಂದರು.

    ಅಲ್ಲದೆ, ಜಾನಪದ ಸಾಹಿತ್ಯ, ಕಾವ್ಯ, ಪ್ರಬಂಧಗಳು, ಜೀವನ ಚರಿತ್ರೆ, ಸಣ್ಣ ಕಥೆ, ಕಾದಂಬರಿ, ಏಕಾಂಕ ನಾಟಕ, ಮಕ್ಕಳ ಹಾಗೂ ನವ್ಯ ಸಾಕ್ಷರ ಸಾಹಿತ್ಯ, ಅನುವಾದಿತ ಸಾಹಿತ್ಯ, ಅರವಿಂದರ ಸಾಹಿತ್ಯ ಹೀಗೆ ವಿಭಿನ್ನ ನೆಲೆಗಳ ಸಾಹಿತ್ಯದಲ್ಲಿ ಒಂದು ನೂರಕ್ಕೂ ಹೆಚ್ಚಿನ ಕೃತಿಗಳನ್ನು ಲಿಂಗಣ್ಣನವರು ನೀಡಿದ್ದು, ಜಿಲ್ಲೆಯ ಜಾನಪದ ದಿಗ್ಗಜರಾಗಿದ್ದರು ಎಂದರು.

    ರಾಘವೇಂದ್ರ ಕುಲಕರ್ಣಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಿಂಪಿ ಲಿಂಗಣ್ಣನವರು ನವೋದಯ ಕಾಲದ ಪ್ರಮುಖ ಸಾಹಿತಿಗಳು ಹಾಗೂ ಜಾನಪದ ತಜ್ಞರು, ಹಳ್ಳಿಯ ಸಮುದಾಯವನ್ನು ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಎತ್ತರಿಸಲು ಪ್ರಯತ್ನ ಪಟ್ಟವರು. ಶ್ರೇಷ್ಠ ಶಿಕ್ಷಕರು, ಮಧುರಚೆನ್ನರ ಒಡನಾಡಿಗಳು ಅರವಿಂದರ ಭಕ್ತರಾದ ಅವರ ಜೀವನಶೈಲಿ ಇಂದಿಗೂ ಪ್ರಸ್ತುತವಾಗಿದೆ ಎಂದು ಹೇಳಿದರು.

    ಸಿ.ಎಂ. ಬಂಡಗರ, ಗೀತಯೋಗಿ, ವೈ.ಜಿ. ಬಿರಾದಾರ ಮಾತನಾಡಿದರು. ಸಂಶೋಧಕ ಡಿ.ಎನ್. ಅಕ್ಕಿ, ಸುಜಾತಾ ಪೂಜಾರಿ, ಮಹೇಶ ಡೆಂಬ್ರೆ, ವೀರಣ್ಣ ದಸ್ತರೆಡ್ಡಿ, ಬಸವರಾಜ ಗೊರನಾಳ, ಎ.ಜಿ. ಚೌಧರಿ, ಸಂತೋಷ ಬಂಡೆ, ಶ್ರೀಧರ ಹಿಪ್ಪರಗಿ, ದತ್ತಾತ್ರೆಯ ನಾಯ್ಕೋಡಿ, ಸಂತೋಷ ನೆರಕಿ, ಈರಣ್ಣ ಕಂಬಾರ, ಸುಜಾತಾ ಬೀಳಗಿ, ಬಸವರಾಜ ಕಿರಣಗಿ, ಶ್ರೀಶೈಲ ಜಾಧವ, ರವಿ ಕಪಾಲಿ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts