More

    ಉಸಿರು ನಿಲ್ಲುವ ಮುನ್ನ ಹೆಸರು ಉಳಿವ ಕೆಲಸ ಮಾಡಿ

    ಇಂಡಿ: ರೋಗಿಗಳಲ್ಲಿ ಆತ್ಮಸ್ಥೈರ್ಯ ಹಾಗೂ ಸಾರ್ವಜನಿಕರಲ್ಲಿ ವಿಶ್ವಾಸ ಮೂಡುವಂತೆ ಉಪಚರಿಸಿ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಮಹೇಂದ್ರ ಕಾಪ್ಸೆ ಹೇಳಿದರು.
    ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಬುಧವಾರ ರಾತ್ರಿ ದಿಢೀರ್ ಭೇಟಿ ನೀಡಿ ಆಸ್ಪತ್ರೆ ವ್ಯವಸ್ಥೆ ಪರಿಶೀಲಿಸಿ, ಆರೋಗ್ಯಾಧಿಕಾರಿ ಡಾ.ರಮೇಶ ರಾಠೋಡ ಹಾಗೂ ಸಿಬ್ಬಂದಿಗೆ ಸಲಹೆ ಸೂಚನೆ ನೀಡಿದರು.
    ಆಸ್ಪತ್ರೆ ಮುಖ್ಯದ್ವ್ವಾರದ ಮೇಲ್ಭಾಗದ ದೀಪ ಹತ್ತುತ್ತಿಲ್ಲ. ಆಸ್ಪತ್ರೆ ಎಲ್ಲಿದೆ ಎಂದು ಹುಡುಕಲು ಅಪರಿಚಿತರಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗುತ್ತ್ತಿದೆ. ಬೇಗ ದೀಪದ ವ್ಯವಸ್ಥೆ ಮಾಡಿ. ಆಸ್ಪತ್ರೆ ಒಳಾಂಗಣದಲ್ಲೂ ಎಲ್‌ಇಡಿ ಬಲ್ಬ್ ಅಳವಡಿಸಬೇಕು. ಶವಾಗಾರದ ಮುಂಭಾಗ ದೊಡ್ಡ ದಿಪ ಅಳವಡಿಸಿ ಎಂದು ವೈದ್ಯಾಧಿಕಾರಿಗಳಿಗೆ ಸೂಚಿಸಿದರು.
    ಕೋವಿಡ್-19 ರೋಗಿಗಳನ್ನು ಶಿಫ್ಟ್ ಮಾಡಲು ಆಂಬುಲೆನ್ಸ್ ತಯಾರಿಯಾಗಿದೆ. ಚಡಚಣದಿಂದ ಬಂದ ಆಂಬುಲೆನ್ಸ್ ತಡವಲಗಾ ಆರೋಗ್ಯ ಕೇಂದ್ರಕ್ಕೆ ಕೊಡಿ. ಸ್ಥಳೀಯ ಆರೋಗ್ಯ ಕೇಂದ್ರದ ನಗು-ಮಗು ಸರಿಯಾಗಿ ಕಾರ್ಯನಿರ್ವಹಿಸುತ್ತದೆಯೇ ಎಂದು ಪ್ರಶ್ನಿಸಿದರು. ತಾಲೂಕಿನಲ್ಲಿ ಇಲ್ಲಿವರೆಗೆ ಕೋವಿಡ್-19 ಕೇಂದ್ರಗಳು ಏಕೆ ಪ್ರಾರಂಭವಾಗಿಲ್ಲ ಎಂದು ಜಿಲ್ಲಾಧಿಕಾರಿಗಳು ಕೇಳುತ್ತಿದ್ದಾರೆ. ಕೂಡಲೇ ಕೋವಿಡ್-19 ಕೇಂದ್ರ ಪ್ರಾರಂಭಿಸಬೇಕು ಎಂದು ಸೂಚಿಸಿದರು.
    ಸಾರ್ವಜನಿಕ ಆಸ್ಪತ್ರೆ ಘನತೆ ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ. ಸಾರ್ವಜನಿಕ ಆಸ್ಪತ್ರೆಗೆ ಬರುವವರು ಬಡವರಾಗಿದ್ದು, ಬಡವರ ಸೇವೆ ಮಾಡಿದರೆ ದೇವರ ಸೇವೆ ಮಾಡಿದಂತಾಗುತ್ತದೆ ಎಂದು ಆಸ್ಪತ್ರೆ ಸಿಬ್ಬಂದಿಗೆ ಡಿಎಚ್‌ಒ ತಿಳಿಹೇಳಿದರು.
    ಡಾ.ರಮೇಶ ರಾಠೋಡ, ಡಾ. ರಾಜಶೇಖರ ಕೋಳೆಕರ್, ಡಾ.ಅನೀಲ ವಾಲಿ, ಡಾ.ಅಮಿತ್ ಕೋಳೆಕರ್, ಡಾ.ಜಗದೀಶ ಬಿರಾದಾರ, ಡಾ.ವಿಫುಲ್ ಕೋಳೆಕರ್, ಜಗದೀಶ ಬಿಸೆ, ಬಸವರಾಜ ಗವಳಿ, ವಿಜಯಲಕ್ಷ್ಮಿಬಿರಾದಾರ ಸೇರಿದಂತೆ ಅನೇಕ ಸಿಬ್ಬಂದಿ ಇದ್ದರು.

    ಆಕ್ಸಿಜನ್ ಕಡಿಮೆ ಇರುವುದರಿಂದ ಕೋವಿಡ್-19 ವಾರ್ಡ್‌ಗೆ ಮಾತ್ರ ಬಳಕೆಯಾಗಬೇಕು. ಪುರುಷರಿಗೊಂದು ಹಾಗೂ ಮಹಿಳೆಯರಿಗೊಂದು ವಾರ್ಡ್ ಮಾಡುವಂತೆ ಸೂಚಿಸಿದರು. ಈಗ 24 ಆಕ್ಸಿಜನ್ ಕೊಡಲಾಗಿದೆ. ಇನ್ನೂ 20 ಸಿಲಿಂಡರ್ ನಿಮ್ಮ ಆಸ್ಪತ್ರೆಗೆ ನೀಡುವಂತೆ ಜಿಲಾಧಿಕಾರಿಗಳಿಗೆ ಮನವಿ ಮಾಡುವುದಾಗಿ ಭರವಸೆ ನೀಡಿದರು.

    ಯಾವುದೇ ಅಧಿಕಾರ, ಹುದ್ದೆ ಶಾಶ್ವತವಲ್ಲ. ಒಳ್ಳೆಯ ಕಾರ್ಯ ಮಾಡಿ. ಉಸಿರು ಹೋದರೂ ಹೆಸರು ಇರುವಂತೆ ಕೆಲಸ ನಿರ್ವಹಿಸೋಣ. ಅದಕ್ಕೆ ನಿಮ್ಮೆಲ್ಲರ ಸಹಕಾರ ಅಗತ್ಯ.
    ಡಾ.ಮಹೇಂದ್ರ ಕಾಪ್ಸೆ, ಜಿಲ್ಲಾ ಆರೋಗ್ಯ ಅಧಿಕಾರಿ

    ಉಸಿರು ನಿಲ್ಲುವ ಮುನ್ನ ಹೆಸರು ಉಳಿವ ಕೆಲಸ ಮಾಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts