More

    ಸೋಂಕು ತಡೆಗೆ ಸಂಘ-ಸಂಸ್ಥೆಗಳು ನೆರವಿಗೆ ಬರಲಿ

    ಇಂಡಿ: ಸರ್ಕಾರದ ಜತೆಗೆ ಸಂಘ- ಸಂಸ್ಥೆಗಳೂ ನೆರವು ನೀಡಲು ಮುಂದಾಗಬೇಕೆಂದು ವಿಧಾನ ಪರಿಷತ್ ಸದಸ್ಯ, ನಿರಾಣಿ ಫೌಂಡೇಷನ್​ ನಿರ್ದೇಶಕ ಹನುಮಂತ ನಿರಾಣಿ ಹೇಳಿದರು.

    ತಾಲೂಕು ಪಂಚಾಯಿತಿ ಕಾರ್ಯಾಲಯದಲ್ಲಿ ಸೇವಾಭಾರತಿ ಟ್ರಸ್ಟ್ ಹಾಗೂ ಎಂಆರ್‌ಎನ್(ನಿರಾಣಿ) ಫೌಂಡೇಷನ್​ ಸಹಯೋಗದಲ್ಲಿ ಕರೊನಾ ಮುಕ್ತವಾಗಿಸಲು ಇಂಡಿ ತಾಲೂಕಿನ ಎಲ್ಲ ಗ್ರಾಮಗಳಿಗೆ ಸೋಂಕು ನಿಯಂತ್ರಣಕ್ಕಾಗಿ 35 ಕ್ಯಾನ್ ಸೋಡಿಯಂ ಹೈಪೊಕ್ಲೋರೈಡ್ ಸೋಮವಾರ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸುನೀಲ್‌ಮದ್ದಿನ್ ಅವರಿಗೆ ವಿತರಿಸಿ ಅವರು ಮಾತನಾಡಿದರು.

    ಇಡೀ ಮಾನವ ಕುಲವನ್ನೆ ತಲ್ಲಣಗೊಳಿಸಿದ ಕೋವಿಡ್-19 ನಿಯಂತ್ರಣಕ್ಕಾಗಿ ನಿರಾಣಿ ೌಂಡೇಷನ್ ವತಿಯಿಂದ ವಿವಿಧ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.

    ಈಗಾಗಲೇ ನಿರಾಣಿ ೌಂಡೇಷನ್ ವತಿಯಿಂದ ಬಾಗಲಕೋಟೆ ಜಿಲ್ಲೆಯಲ್ಲಿ 5 ಆಂಬುಲೆನ್ಸ್ ಹಾಗೂ 4 ಇತರ ವಾಹನದ ವ್ಯವಸ್ಥೆ ಕಲ್ಪಿಸಲಾಗಿದೆ. ಬೆಳಗಾವಿ, ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗಳ ಪ್ರತಿ ಗ್ರಾಮಗಳಿಗೂ ಈ ಸೋಡಿಯಂ ಹೈಪೊಕ್ಲೋರೈಡನ್ನು ವಿತರಿಸಲಾಗಿದೆ. ಇದನ್ನು ಸಿಂಪಡಿಸುವುದರಿಂದ ಗ್ರಾಮೀಣ ಭಾಗದಲ್ಲಿ ಕರೊನಾ ನಿಯಂತ್ರಣಕ್ಕೆ ಬರಲಿದೆ ಎಂದರು.

    ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಕಾಸುಗೌಡ ಬಿರಾದಾರ ಮಾತನಾಡಿ, ನಿರಾಣಿ ೌಂಡೇಷನ್ ವತಿಯಿಂದ ಇಂಡಿ ತಾಲೂಕಿನ ಎಲ್ಲ ಗ್ರಾಪಂಗಳು, ಪುರಸಭೆಗಳಿಗೆ ವಿತರಿಸಲು 35 ಕ್ಯಾನ್ ಸೋಡಿಯಂ ಹೈಪೊಕ್ಲೋರೈಡನ್ನು ನೀಡಿದ್ದು ಶ್ಲಾಘನೀಯ ಕಾರ್ಯವಾಗಿದೆ ಎಂದರು.

    ಮುಖಂಡರಾದ ರವಿಕಾಂತ ಬಗಲಿ, ಶ್ರೀಶೈಲಗೌಡ ಬಿರಾದಾರ, ಬಿಜೆಪಿ ಇಂಡಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಿವುಡೆ, ಸುರೇಶ ಬಿರಾದಾರ, ಬುದ್ದುಗೌಡ ಪಾಟೀಲ, ಅನೀಲಗೌಡ ಬಿರಾದಾರ, ಶೀಲವಂತ ಉಮರಾಣಿ, ತಹಸೀಲ್ದಾರ್ ಚಿದಂಬರ ಕುಲಕರ್ಣಿ, ಇಒ ಸುನೀಲ್ ಮದ್ದಿನ್, ಶಿವಯೋಗಿ ರೂಗಿಮಠ, ರಾಮಸಿಂಗ ಕನ್ನೊಳ್ಳಿ, ಸುನಂದಾ ಮದರಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts