More

    ಪಕ್ಷೇತರನಾಗಿ ನಾಮಪತ್ರ ಸಲ್ಲಿಸಿದ ಸಾವಿರ ಕೋಟಿ ರೂ. ಒಡೆಯ; ಇವರ ಬಳಿ ಓಡಾಡಲು ಸ್ವಂತ ಕಾರಿಲ್ಲ!

    ಚಿಕ್ಕಬಳ್ಳಾಪುರ: ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನವಾಗಿತ್ತು. ನಾಯಕರೆಲ್ಲ ಭರ್ಜರಿ ರ್ಯಾಲಿ, ರೋಡ್​ ಶೋ ನಡೆಸಿ ನಾಮಪತ್ರ ಸಲ್ಲಿಸಿದ್ದಾರೆ. ಈ ಬಾರಿ ಕೋಟ್ಯಾಧೀಶ ರಾಜಕಾರಣಿಗಳು ನಾಮಪತ್ರ ಸಲ್ಲಿಸುವ ಮೂಲಕ ರಾಜಕೀಯದ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

    ಇದೀಗ ಪಕ್ಷೇತರ ಅಭ್ಯರ್ಥಿಯಾಗಿ ಸಾವಿರ ಕೊಟಿ ರೂ. ಒಡೆಯ ಕೆ.ಎಚ್​. ಪುಟ್ಟಸ್ವಾಮಿಗೌಡ ನಾಮಪತ್ರ ಸಲ್ಲಿಸಿದ್ದಾರೆ. ಅವರು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೇ ಇದೇ ಮೊದಲ ಬಾರಿಗೆ ಸಾವಿರ ಕೊಟಿ ರೂಪಾಯಿ ಆಸ್ತಿ ಹೊಂದಿರುವ ಅಭ್ಯರ್ಥಿಯೊಬ್ಬರು ನಾಮಪತ್ರ ಸಲ್ಲಿಸಿರುವುದು.

    ಇದನ್ನೂ ಓದಿ: ಕದನ ಕಣದಲ್ಲಿ ತೊಡೆತಟ್ಟಿದ ಕೋಟಿವೀರರು; ಇಲ್ಲಿದೆ ಶತಕೋಟ್ಯಧೀಶ ರಾಜಕಾರಣಿಗಳ ಒಟ್ಟು ಆಸ್ತಿ ವಿವರ…

    ನಾಮಪತ್ರ ಸಲ್ಲಿಕೆಗೂ ಮುನ್ನ ಕೆ.ಎಚ್​. ಪುಟ್ಟಸ್ವಾಮಿಗೌಡ ತಮ್ಮ ಬೆಂಬಲಿಗರು ಹಾಗೂ ಅಭಿಮಾನಿಗಳೊಂದಿಗೆ ಸೇರಿ ಗೌರಿಬಿದನೂರು ನಗರದ ಪ್ರಮುಖ ರಸ್ತೆಯಲ್ಲಿ ಬೃಹತ್ ರೋಡ್ ಶೋ ನಡೆಸಿದ್ದಾರೆ. ಬಳಿಕ ತಾಲೂಕು ಕಚೇರಿಯಲ್ಲಿ ಚುನಾವಣಾಧಿಕಾರಿಗಳಿಗೆ ಉಮೇದುವಾರಿಕೆ ಸಲ್ಲಿಸಿದ್ದಾರೆ.

    ಸಾವಿರ ಕೋಟಿ ರೂಪಾಯಿ ಒಡೆಯ!

    ಸಾವಿರ ಕೋಟಿ ರೂ. ಒಡೆಯ ಕೆ.ಎಚ್​. ಪುಟ್ಟಸ್ವಾಮಿಗೌಡ ನಾಮಪತ್ರ ಸಲ್ಲಿಸುವ ವೇಳೆ ತನ್ನಲ್ಲಿ ಯಾವುದೇ ಕಾರು ಇಲ್ಲ ಎಂದು ಉಲ್ಲೇಖಿಸಿದ್ದಾರೆ. ಆಸ್ತಿ ವಿವರದ ಪ್ರಕಾರ ಪುಟ್ಟಸ್ವಾಮಿಗೌಡ ಬಳಿ 9.10 ಲಕ್ಷ ರೂ. ಬೆಲೆಯ ಟ್ರ್ಯಾಕ್ಟರ್ ಹಾಗೂ ಇಬ್ಬರು ಮಕ್ಕಳ ಬಳಿ ಮೂರು ದ್ವಿಚಕ್ರ ವಾಹನ ಇದೆ. ಉಳಿದಂತೆ ಯಾವುದೇ ವಾಹನ ಇಲ್ಲ ಎಂದು ತಿಳಿಸಿದ್ದಾರೆ.

    ಇದನ್ನೂ ಓದಿ: ಭಾರತೀಯ ಸೈನಿಕರಿದ್ದ ಸೇನಾ ವಾಹನಕ್ಕೆ ದಿಢೀರ್ ಬೆಂಕಿ

    926.28 ಕೋಟಿ ರೂ. ಸ್ಥಿರಾಸ್ತಿ!

    ಕೆ.ಎಚ್​. ಪುಟ್ಟಸ್ವಾಮಿಗೌಡ 926.28 ಕೋಟಿ ರೂ. ಸ್ಥಿರಾಸ್ತಿ ಹೊಂದಿದ್ದಾರೆ. ಪತ್ನಿ ಹೆಸರಿನಲ್ಲಿ 38.63 ಕೋಟಿ ರೂ. ಹಾಗೂ ಮಕ್ಕಳಿಬ್ಬರ ಹೆಸರಿನಲ್ಲಿ 20.67 ಕೋಟಿ ರೂ ಮತ್ತು 4.44 ಕೋಟಿ ರೂ. ಚರಾಸ್ತಿ ಇದೆ ಎಂದು ನಾಮಪತ್ರ ಸಲ್ಲಿಸುವ ವೇಳೆ ಉಲ್ಲೇಖಿಸಿದ್ದಾರೆ. ವಿವಿಧ ಬ್ಯಾಂಕ್ ಹಾಗೂ ವ್ಯಕ್ತಿಗಳ ಬಳಿ ಕೆ.ಎಚ್​. ಪುಟ್ಟಸ್ವಾಮಿಗೌಡ 6.57 ಕೋಟಿ ರೂ. ಸಾಲ ಪಡೆದುಕೊಂಡಿದ್ದಾರೆ. ಪತ್ನಿ ಹೆಸರಿನಲ್ಲಿ 1.54 ಕೋಟಿ ರೂ., ಮಕ್ಕಳಿಬ್ಬರ ಹೆಸರಿನಲ್ಲಿ ತಲಾ 2.44 ಕೋಟಿ ರೂ. ಹಾಗೂ 76.62 ಲಕ್ಷ ಸಾಲ ಹೊಂದಿದ್ದಾರೆ.

    ಕೆ.ಎಚ್​. ಪುಟ್ಟಸ್ವಾಮಿಗೌಡ 50 ಲಕ್ಷ ರೂ. ಮೌಲ್ಯದ ಸ್ಥಿರಾಸ್ತಿ ಹಾಗೂ 221.07 ಕೋಟಿ ರೂ. ಮೌಲ್ಯದ ಸ್ವಯಾರ್ಜಿತ ಆಸ್ತಿ ಹೊಂದಿದ್ದಾರೆ. ಮಕ್ಕಳಿಬ್ಬರ ಹೆಸರಿನಲ್ಲಿ 1.65 ಕೋಟಿ ರೂ. ಹಾಗೂ 45.84 ಕೋಟಿ ರೂ. ಮೌಲ್ಯದ ಸ್ಯಾರ್ಜಿತ ಸ್ಥಿರಾಸ್ತಿ ಇದೆ ಎಂದು ಘೋಷಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts