More

    ಅಂಚೆ ನೌಕರರಿಗೆ ಪಿಂಚಣಿ ಸೌಲಭ್ಯ ಕಲ್ಪಿಸಿ

    ಸೇಡಂ: ಗ್ರಾಮೀಣ ಭಾಗದಲ್ಲಿ ೮ ಗಂಟೆ ಕೆಲಸ ನೀಡಬೇಕು, ಎಲ್ಲ ಅಂಚೆ ನೌಕರರಿಗೆ ಪಿಂಚಣಿ ಸೌಲಭ್ಯ ಕಲ್ಪಿಸಬೇಕು ಎಂಬುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ರೈಲ್ವೆ ನಿಲ್ದಾಣದ ಮುಂಭಾಗದಲ್ಲಿನ ಪ್ರಧಾನ ಅಂಚೆ ಕಚೇರಿ ಮುಂದೆ ರಾಷ್ಟ್ರೀಯ ಗ್ರಾಮೀಣ ಅಂಚೆ ಸೇವಕರ ಸಂಘದಿಂದ ಬುಧವಾರದಿಂದ ನಡೆಯುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ ಶುಕ್ರವಾರ ಮೂರನೇ ದಿನಕ್ಕೆ ಪದಾರ್ಪಣೆ ಮಾಡಿದೆ.

    ಸಂಘದ ರಾಜ್ಯಾಧ್ಯಕ್ಷ ಮೋಹನರೆಡ್ಡಿ ದೇಸಾಯಿ ಮಾತನಾಡಿ, ಗ್ರಾಮೀಣ ಭಾಗಕ್ಕೆ ಅಂಚೆ ಸೇವೆ ಕಲ್ಪಿಸುವಲ್ಲಿ ಸೇವಕರು ಪ್ರಮುಖ ಪಾತ್ರ ವಹಿಸುತ್ತಾರೆ. ಹೀಗಾಗಿ ನಮಗೆ ೮ ಗಂಟೆ ಕೆಲಸ ಕೊಡಬೇಕು. ಪಿಂಚಣಿ ಸೇರಿ ಎಲ್ಲ ಸೌಲಭ್ಯ ನೀಡಬೇಕು. ಸೇವಾ ಹಿರಿತನದ ಆಧಾರದ ಮೇಲೆ ೧೨, ೨೪, ೩೬ ವರ್ಷ ಸೇವೆ ಸಲ್ಲಿಸಿದ ಸೇವಕರಿಗೆ ವಿಶೇಷ ಇನ್‌ಕ್ರಿಮೆಂಟ್ ನೀಡಬೇಕು. ಅವೈಜ್ಞಾನಿಕ ಗುರಿ ನೀಡುವುದನ್ನು ನಿಲ್ಲಿಸಬೇಕು. ಗುಂಪು ವಿಮೆಯನ್ನು ೫ ಲಕ್ಷ ರೂ.ಗೆ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.

    ಗ್ರಾಮೀಣ ಭಾಗದ ಸೇವಕರು ಕಳೆದ ಎರಡು ದಿನಗಳಲ್ಲಿ ಸೇವೆ ಸ್ಥಗಿತಗೊಳಿಸಿ ಮುಷ್ಕರದಲ್ಲಿ ಪಾಲ್ಗೊಂಡಿದ್ದಾರೆ. ನಮ್ಮ ಬೇಡಿಕೆ ಈಡೇರುವವೆರೆಗೂ ಹೋರಾಟ ಹಿಂಪಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.

    ಸಂಘದ ವಿಭಾಗೀಯ ಅಧ್ಯಕ್ಷ ಪ್ರಭುಲಿಂಗಯ್ಯ, ಕೋಶಾಧ್ಯಕ್ಷ ಅಫ್ಜಲ್‌ಖಾನ್, ಸಹ ಕಾರ್ಯದರ್ಶಿ ಮಹೇಶ ಚಿತ್ತಾಪುರ, ಪ್ರಮುಖರಾದ ಶಿವರಾಯ ಮಳಖೇಡ, ಭಾಗಣ್ಣ ಚಿತ್ತಾಪುರ, ಮೇಘಾ, ವಿಜಯಶ್ರೀ, ಅನೀಲ್ ಚವ್ಹಾಣ್, ಮಾಣಿಕಪ್ರಭು, ಸಿದ್ದಯ್ಯಸ್ವಾಮಿ, ಸುನಂದಾ, ಲಕ್ಷ್ಮೀ, ಅಯ್ಯೂಬ್, ನಾಗರಾಜ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts