More

    ಸ್ಯಾಮ್ಸನ್​ ಶತಕ, ಅರ್ಷದೀಪ್​ ಬೌಲಿಂಗ್​ ಅಬ್ಬರ: ದ. ಆಫ್ರಿಕಾ ವಿರುದ್ಧ ಏಕದಿನ ಸರಣಿ ಗೆದ್ದ ಭಾರತ

    ಪಾರ್ಲ್​: ಇಲ್ಲಿನ ಬೋಲ್ಯಾಂಡ್​ ಪಾರ್ಕ್​ ಕ್ರೀಡಾಂಗಣದಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ ಸಂಜು ಸ್ಯಾಮ್ಸನ್​ ಆಕರ್ಷಕ ಶತಕ ಹಾಗೂ ಅರ್ಷದೀಪ್​ ಸಿಂಗ್​ ಮಿಂಚಿನ ಬೌಲಿಂಗ್​ ದಾಳಿಯ ನೆರವಿನಿಂದ ಟೀಮ್​ ಇಂಡಿಯಾ ಅದ್ಭುತ ಜಯ ದಾಖಲಿಸುವ ಮೂಲಕ 2-1 ಅಂತರದಲ್ಲಿ ಏಕದಿನ ಸರಣಿಯನ್ನು ವಶಪಡಿಸಿಕೊಂಡಿತು.

    ಟಾಸ್​ ಸೋತು ಬ್ಯಾಟಿಂಗ್​ ಆರಂಭಿಸಿದ ಟೀಮ್​ ಇಂಡಿಯಾ ಸಂಜು ಸ್ಯಾಮ್ಸನ್​ (108 ರನ್​, 114 ಎಸೆತ, 6 ಬೌಂಡರಿ, 3 ಸಿಕ್ಸರ್​) ಅಮೋಘ ಶತಕ ಮತ್ತು ತಿಲಕ್​ ವರ್ಮಾ (52 ರನ್​, 77 ಎಸೆತ, 5 ಬೌಂಡರಿ 1 ಸಿಕ್ಸರ್​) ಅರ್ಧಶತಕದ ನೆರವಿನಿಂದ ನಿಗದಿತ 50 ಓವರ್​ಗಳಲ್ಲಿ 8 ವಿಕೆಟ್​ ನಷ್ಟಕ್ಕೆ 296 ರನ್​ ಕಲೆಹಾಕಿತು.

    ದಕ್ಷಿಣ ಆಫ್ರಿಕಾ ಪರ ಬಿ ಹೆಂಡ್ರಿಕ್ಸ್​ 3 ವಿಕೆಟ್​ ಪಡೆದರೆ, ನಂಡ್ರೆ ಬರ್ಗರ್​ 2 ವಿಕೆಟ್​ ಕಬಳಿಸಿದರು. ಉಳಿದಂತೆ ವಿಲಿಯಮ್ಸ್​, ವಿಯಾನ್​ ಮುಲ್ಡರ್​ ಹಾಗೂ ಕೇಶವ್​ ಮಹರಾಜ್​ ತಲಾ ಒಂದೊಂದು ವಿಕೆಟ್​ ತೃಪ್ತಿಪಟ್ಟುಕೊಂಡರು.

    ಟೀಮ್​ ಇಂಡಿಯಾ ನೀಡಿದ್ದ 297 ರನ್​ಗಳ ಗುರಿ ಬೆನ್ನತ್ತಿದ ಹರಿಣ ಪಡೆ 45.5 ಓವರ್​ಗಳಲ್ಲಿ ತನ್ನೆಲ್ಲ ವಿಕೆಟ್​ ಕಳೆದುಕೊಳ್ಳುವ ಮೂಲಕ ಕೇವಲ 218 ರನ್​ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ 78 ರನ್​ಗಳ ಅಂತರದಲ್ಲಿ ಸೋಲನ್ನು ಅನುಭವಿಸುವ ಮೂಲಕ ಸರಣಿಯನ್ನು ಕೈಚೆಲ್ಲಿತು.

    ಭಾರತದ ಪರ ಮಿಂಚಿನ ಬೌಲಿಂಗ್​ ದಾಳಿ ಪ್ರದರ್ಶಿಸಿದ ಅರ್ಷದೀಪ್​ ಸಿಂಗ್​ ಪ್ರಮುಖ 4 ವಿಕೆಟ್​ ಕಬಳಿಸಿದರು. ವಾಷಿಂಗ್ಟನ್​ ಸುಂದರ್ ಮತ್ತು ಅವೇಶ್​ ಖಾನ್​ ತಲಾ​ 2 ವಿಕೆಟ್​ ಪಡೆದರೆ, ಮುಕೇಶ್​ ಕುಮಾರ್​,​ ಮತ್ತು ಅಕ್ಷರ್​ ಪಟೇಲ್​ ತಲಾ ಒಂದೊಂದು ವಿಕೆಟ್​ ಪಡೆದರು. (ಏಜೆನ್ಸೀಸ್)

    ಧೋನಿ ಸರ್​ ಕಪ್​ ಗೆಲ್ಲಲು RCBಗೆ ಸಹಾಯ ಮಾಡಿ: ಯುವಕನ ಮನವಿಗೆ ಮಾಹಿ ಕೊಟ್ಟ ಉತ್ತರ ವೈರಲ್​

    ಏನಾಗುತ್ತಿದೆ RCB ಕ್ಯಾಂಪ್​ ಒಳಗೆ? ಭಾರಿ ಸಂಶಯ ಹುಟ್ಟುಹಾಕಿದ ಸಿರಾಜ್ ಇನ್​ಸ್ಟಾ ಸ್ಟೋರಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts