More

    ನದಿಯಲ್ಲಿ ಅನಾಥವಾಗಿ ತೇಲುತ್ತಿದ್ದ ಪ್ಲಾಸ್ಟಿಕ್ ಚೀಲವನ್ನು ತೆರೆದವರಿಗೆ ಕಾದಿತ್ತು ಬಿಗ್​ ಶಾಕ್​!​

    ಮ್ಯಾಡ್ರಿಡ್​​​: ನದಿಯೊಂದರಲ್ಲಿ ಅನಾಥವಾಗಿ ತೇಲುತ್ತಿದ್ದ ಮೂಟೆ ಕಟ್ಟಿದ ಪ್ಲಾಸ್ಟಿಕ್​ ಚೀಲವೊಂದರ ಮೇಲೆ ಅನುಮಾನಗೊಂಡು ಅದನ್ನು ತೆರೆದವರು ಅಕ್ಷರಶಃ ಶಾಕ್​ಗೆ ಒಳಗಾದಂತಹ ಘಟನೆ ದೂರದ ಸ್ಪೇನ್​ನಲ್ಲಿ ನಡೆದಿದೆ.

    ಕಳೆದ ಜೂನ್​ 30ರಂದು ದಕ್ಷಿಣ ಸ್ಪ್ಯಾನಿಶ್​ ಪ್ರದೇಶ ಅಂಡಾಲುಸಿಯಾದ ಸೆವಿಲ್ಲೆ ಪ್ರಾಂತ್ಯದ ದಕ್ಷಿಣ ಸ್ಪ್ಯಾನಿಷ್ ಪ್ರದೇಶ ಗಿಲ್​ ಗೊಮೇಜ್​ ಡಿ ಅರಹಾಲ್​ ಏರಿಯಾದಲ್ಲಿ ಇಬ್ಬರು ಬೈಕ್​ ಸವಾರರಿಗೆ ಪ್ಲಾಸ್ಟಿಕ್​ ಚೀಲದ ಮೂಟೆಗಳು ಪತ್ತೆಯಾಗುತ್ತವೆ. ಒಂದು ಮೂಟೆಯಲ್ಲಿ ಯಾವುದೋ ಪ್ರಾಣಿಯ ಮೂಗು ಹೊರಬಂದಿರುವುದನ್ನು ನೋಡಿದ ಸವಾರರು ಎಲ್​ ಅಂಪರೋ ಡೆಲ್​ ಸರ್​ನ ಪ್ರಾಣಿ ದಯಾ ಸಂಘದ ಅಧ್ಯಕ್ಷೆ ಒಲ್ಗಾ ಡಯಾನಾ ಅವರಿಗೆ ಮಾಹಿತಿ ನೀಡುತ್ತಾರೆ.

    ಇದನ್ನೂ ಓದಿ: ನಿಮ್ಮನ್ನ ಸ್ಕ್ರೀನ್​ ಮೇಲೆ ನೋಡೋದು ಯಾವಾಗ? ಈ ಪ್ರಶ್ನೆಗೆ ಏನಂದ್ರು ರಾಧಿಕಾ?

    ವಿಷಯ ತಿಳಿದು ತಮ್ಮ ಕಾರಿನ ಮೂಲಕ ಡಯಾನಾ ಅವರು ಸವಾರರು ಹೇಳಿದ ಜಾಗಕ್ಕೆ ತೆರಳುತ್ತಾರೆ. ಈ ಬಗ್ಗೆ ಮಾತನಾಡಿರುವ ಅವರು, ಸ್ಥಳಕ್ಕೆ ಹೋದಾಗ ಅನಾಥವಾಗಿ ಬಿದ್ದಿದ್ದ ಗೋಣಿ ಚೀಲಗಳಲ್ಲಿ ಒಂದರಲ್ಲಿ ಮೂಗೊಂದು ಹೊರ ಬಂದಿರುವುದನ್ನು ಗಮನಿಸಿದೆ. ಮೂಟೆಯನ್ನು ತೆರೆಯುತ್ತಿದ್ದಂತೆ ಶ್ವಾನವೊಂದು ಓಡಿ ಹೋಯಿತು. ಅದಾದ ಕೆಲವೇ ಕ್ಷಣಗಳಲ್ಲಿ ನಾಯಿ ಮರಳಿ ಬಂತು ಎಂದಿದ್ದಾರೆ.

    ನದಿಯಲ್ಲಿ ಅನಾಥವಾಗಿ ತೇಲುತ್ತಿದ್ದ ಪ್ಲಾಸ್ಟಿಕ್ ಚೀಲವನ್ನು ತೆರೆದವರಿಗೆ ಕಾದಿತ್ತು ಬಿಗ್​ ಶಾಕ್​!​

    ಸಂಘದ ಸ್ವಯಂ ಸೇವಕರಿಗೆ ಸ್ಥಳದಲ್ಲಿ ಮೈಕ್ರೋಚಿಪ್​ ಅಳವಡಿಸಿದ ಹಾಗೂ ಒಂದೇ ವ್ಯಕ್ತಿಗೆ ಸೇರಿದ ಮೂರು ಶ್ವಾನಗಳು ಪತ್ತೆಯಾದ ತಕ್ಷಣವೇ ಪೊಲೀಸರಿಗೆ ಮಾಹಿತಿ ಮುಟ್ಟಿಸುತ್ತಾರೆ. ಸ್ಥಳಕ್ಕೆ ಬಂದು ಪರಿಶೀಲಿಸಿದ ಪೊಲೀಸರು, ಮೂರು ಶ್ವಾನಗಳಿಗೂ ಚೆನ್ನಾಗಿ ಥಳಿಸಲಾಗಿದೆ ಎಂದು ಗೊತ್ತಾಗುತ್ತದೆ. ಥಳಿಸಿ ಗೋಣಿ ಚೀಲದಲ್ಲಿ ಹಾಕಿ ಹಗ್ಗದಿಂದ ಕಟ್ಟಲಾಗಿದೆ. ಬಳಿಕ ಎಲ್ಲ ನಾಯಿಗಳನ್ನು ನದಿಗೆ ಎಸೆಯಲಾಗಿದೆ. ಆದರೆ, ಒಂದು ಶ್ವಾನ ಮಾತ್ರ ಗೋಣಿ ಚೀಲದಿಂದ ಹೇಗೋ ಮೂಗು ಹೊರ ಚಾಚಿ ಉಸಿರಾಡುವ ಮೂಲಕ ತೇಲುತ್ತಿದ್ದ ಚೀಲದಲ್ಲೇ ಬದುಕುಳಿದಿದೆ. ಉಳಿದ ಎರಡು ಶ್ವಾನಗಳು ಉಸಿರುಗಟ್ಟಿ ಸಾವಿಗೀಡಾಗಿವೆ ಎಂದು ತಿಳಿಸಿದರು.

    ಬದುಕುಳಿದ ಹಾಗೂ ಗಾಯಗೊಂಡ ಶ್ವಾನವನ್ನು ಪ್ರಾಣಿ ದಯಾ ಸಂಘದವರು ರಕ್ಷಿಸಿ ತಮ್ಮೊಂದಿಗೆ ಕರೆದೊಯ್ದಿದ್ದಾರೆ. ಇನ್ನು ಅರಾಹಲ್ ಪಟ್ಟಣದಲ್ಲಿ ವಾಸಿಸುವ 60 ವರ್ಷದ ವ್ಯಕ್ತಿಯ ವಿರುದ್ಧ ಆರೋಪ ಕೇಳಿಬರುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಶ್ವಾನದ ಮಾಲೀಕನ ಹೆಸರನ್ನು ಬಹಿರಂಗಪಡಿಸಿಲ್ಲ. ಆದರೆ, ಪೊಲೀಸ್​ ತನಿಖಾ ಭಾಗವಾಗಿ ಹೇಳಿಕೆ ನೀಡುವಂತೆ ಕೇಳಲಾಗಿದ್ದು, ವಿಚಾರಣೆ ನಡೆಯುತ್ತಿದೆ.

    ನದಿಯಲ್ಲಿ ಅನಾಥವಾಗಿ ತೇಲುತ್ತಿದ್ದ ಪ್ಲಾಸ್ಟಿಕ್ ಚೀಲವನ್ನು ತೆರೆದವರಿಗೆ ಕಾದಿತ್ತು ಬಿಗ್​ ಶಾಕ್​!​

    ಇದನ್ನೂ ಓದಿ: VIDEO| ಬಾಲಮಂದಿರದಿಂದ ಬಾಲಕಿಯರು ಪರಾರಿಯಾದ ದೃಶ್ಯ ಸಿಸಿಟಿವಿಯಲ್ಲಿ ಸೆರೆ!

    ಶ್ವಾನದ ಹೆಸರನ್ನು ಗಾಬಿ ಎಂದು ಗುರುತಿಸಲಾಗಿದ್ದು, ಅದಕ್ಕೆ ಪ್ಯಾರಾಸೈಟ್​ ಹಾಗೂ ಓಲ್ಗಾ ಸೋಂಕು ತಗುಲಿಸಲಾಗಿದೆ. ಸದ್ಯ ಗುಣಮುಖವಾಗುತ್ತಿದ್ದರೂ ಮಾನವನಲ್ಲಿ ಭಯ ಹುಟ್ಟಿಸಿರುವುದರಿಂದ ಅದರಿಂದ ದೂರ ಉಳಿಯುವಂತಾಗಿದೆ. ಗುಣಮುಖವಾದ ಬಳಿಕ ಅದನ್ನು ಅದರ ಸಂಗಡಿಗರ ಜತೆ ಸೇರಿಸುವ ಕೆಲಸಕ್ಕೆ ಪ್ರಾಣಿ ದಯಾ ಸಂಘ ನೋಡಿಕೊಳ್ಳುತ್ತಿದೆ. (ಏಜೆನ್ಸೀಸ್​)

    ಆಸ್ಪತ್ರೆಗಳಿಗೆ ಅಲೆದರೂ ಚಿಕಿತ್ಸೆ ಸಿಗದೆ ಮಗು ಸಾವು; ಸಿಎಂ ಮನೆ ಬಳಿ ತಂದೆ ಹೋರಾಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts