More

    ಶಾಲೆಗಳಲ್ಲಿ ಹೆಚ್ಚುತ್ತಿದೆ ಕರೊನಾ ಸೋಂಕು

    ಹಾವೇರಿ: ವಾರಾಂತ್ಯ ಕರ್ಫ್ಯೂ ರದ್ದುಗೊಳಿಸುತ್ತಿದ್ದಂತೆ ಜಿಲ್ಲೆಯ ಶಾಲೆಗಳಲ್ಲಿ ಕರೊನಾ ಸೋಂಕು ಸ್ಪೋಟಗೊಳ್ಳುತ್ತಿದೆ. ಸವಣೂರು ತಾಲೂಕಿನ ಕಾರಡಗಿ ಶಾಲೆಯನ್ನು 3 ದಿನ ಬಂದ್ ಮಾಡಲಾಗಿದೆ.

    ಸವಣೂರ ತಾಲೂಕಿನ ಕಾರಡಗಿ ವೀರಭದ್ರೇಶ್ವರ ಪ್ರೌಢಶಾಲೆಯ 28 ವಿದ್ಯಾರ್ಥಿಗಳಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ಜಿಲ್ಲಾಧಿಕಾರಿ ಸೂಚನೆಯ ಮೇರೆಗೆ ಶಾಲೆಗೆ 3 ದಿನ ರಜೆ ನೀಡಲಾಗಿದೆ.

    ರಾಣೆಬೆನ್ನೂರ ತಾಲೂಕಿನ ಹಳೇಹೊನ್ನತ್ತಿ ಸರ್ಕಾರಿ ಪ್ರಾಥಮಿಕ ಶಾಲೆಯ 11 ವಿದ್ಯಾರ್ಥಿಗಳು, ಒಬ್ಬ ಶಿಕ್ಷಕ ಹಾಗೂ ಅಡುಗೆ ಸಹಾಯಕಿಗೆ ಪಾಸಿಟಿವ್ ದೃಢಪಟ್ಟಿದೆ. ಆದ್ದರಿಂದ ಎಲ್ಲ ಮಕ್ಕಳನ್ನು ಹೋಂ ಕ್ವಾರಂಟೈನ್​ನಲ್ಲಿರಿಸಲಾಗಿದೆ. ಮನೆಗಳಿಗೆ ತೆರಳಿ ಆರೋಗ್ಯ ಇಲಾಖೆ ಸಿಬ್ಬಂದಿ ವಿದ್ಯಾರ್ಥಿಗಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದ್ದಾರೆ. ಶಿಕ್ಷಣ ಇಲಾಖೆ ಅಧಿಕಾರಿಗಳು ಮಕ್ಕಳ ಆರೋಗ್ಯ ವಿಚಾರಿಸಿದ್ದಾರೆ. ಸದ್ಯ ಯಾವ ಮಕ್ಕಳಿಗೂ ತೊಂದರೆಯಿಲ್ಲ ಎಂದು ಬಿಇಒ ಗುರುಪ್ರಸಾದ ತಿಳಿಸಿದ್ದಾರೆ.

    ಶಾಸಕ ಪೂಜಾರಗೆ ಪಾಸಿಟಿವ್: ರಾಣೆಬೆನ್ನೂರ ವಿಧಾನಸಭೆ ಕ್ಷೇತ್ರದ ಶಾಸಕ ಅರುಣಕುಮಾರ ಪೂಜಾರ ಅವರಿಗೆ ಭಾನುವಾರ ಕರೊನಾ ದೃಢಪಟ್ಟಿದೆ. ಇತ್ತೀಚೆಗೆ ಶಾಸಕರ ಸಂಪರ್ಕದಲ್ಲಿದ್ದವರು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುವಂತೆ ಶಾಸಕರ ಕಚೇರಿ ಸಿಬ್ಬಂದಿ ತಿಳಿಸಿದ್ದಾರೆ.

    ಸವಣೂರ ತಾಲೂಕಿನ ಕಾರಡಗಿಯ ವೀರಭದ್ರೇಶ್ವರ ಪ್ರೌಢಶಾಲೆಯ 28 ವಿದ್ಯಾರ್ಥಿಗಳಿಗೆ ಶನಿವಾರ ಕೋವಿಡ್ ದೃಢಪಟ್ಟಿದೆ. ಜಿಲ್ಲಾಧಿಕಾರಿ ಸೂಚನೆಯ ಮೇರೆಗೆ ತಾಲೂಕು ಆಡಳಿತದ ನಿರ್ದೇಶನದಂತೆ ಆ ಶಾಲೆಗೆ 3 ದಿನಗಳ ಬಿಡುವು ನೀಡಿ, ಕೋವಿಡ್ ಮಾರ್ಗಸೂಚಿ ಪ್ರಕಾರ ಸ್ವಚ್ಛತೆ ನಿಯಮ ಪಾಲಿಸಲಾಗುತ್ತಿದೆ.

    | ಎಸ್.ಎಸ್. ಅಡಿಗ, ಪ್ರಭಾರ ಡಿಡಿಪಿಐ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts