More

    ಹೋಂ ಕ್ವಾರಂಟೈನ್​​ನಲ್ಲಿ ನಟ ಮಹೇಶ್​ ಬಾಬು

    ಹೈದರಾಬಾದ್ : ತಮ್ಮ ಪರ್ಸನಲ್ ಸ್ಟೈಲಿಸ್ಟ್​​ಗೆ ಕರೊನಾ ಪಾಸಿಟೀವ್ ಬಂದಿರುವ ಹಿನ್ನೆಲೆಯಲ್ಲಿ ತೆಲುಗು ನಟ ಮಹೇಶ್​ ಬಾಬು ಅವರು ಹೋಂ ಕ್ವಾರಂಟೈನ್​ಗೆ ಒಳಗಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳ ‘ಸ್ಟೇಸೇಫ್​​ಮಹೇಶ್​ಅನ್ನ’ ಎಂಬ ಹ್ಯಾಷ್​ಟ್ಯಾಗ್ ಟ್ವಿಟರ್​​ನಲ್ಲಿ ಟ್ರೆಂಡ್ ಆಗುತ್ತಿದೆ.

    ‘ಸರಿಲೇಲು ನೀಕೆವ್ವರು’ ಖ್ಯಾತಿಯ ಮಹೇಶ್​ ಬಾಬು, ಏಪ್ರಿಲ್ 15 ರಿಂದ ಹೈದರಾಬಾದ್​​ನ ಶಂಕರಪಲ್ಲಿಯಲ್ಲಿ ಆರಂಭವಾಗಿದ್ದ ತಮ್ಮ ‘ಸರಕಾರು ವಾರಿ ಪಾಟ’ ಚಿತ್ರದ ಚಿತ್ರೀಕರಣದಲ್ಲಿ ತೊಡಗಿದ್ದರು. ಇತ್ತೀಚೆಗೆ ಆ ಚಿತ್ರತಂಡದ ಆರು ಜನರಿಗೆ ಕರೊನಾ ಪಾಸಿಟೀವ್ ಬಂದಿದ್ದು, ಚಿತ್ರೀಕರಣವನ್ನು ಸ್ಥಗಿತಗೊಳಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ. ಬಾಬು ಅವರ ಪರ್ಸನಲ್ ಸ್ಟೈಲಿಸ್ಟ್​ಗೆ ಕರೊನಾ ಸೋಂಕು ದೃಢಪಟ್ಟಿದೆ. ಅವರ ನಿಕಟ ಸಂಪರ್ಕ ಹೊಂದಿದ್ದರಿಂದ ಮುನ್ನೆಚ್ಚರಿಕೆಯಾಗಿ, ಬಾಬು ತಮ್ಮ ಹೈದರಾಬಾದ್​ನ ನಿವಾಸದಲ್ಲಿ ಸೆಲ್ಫ್​ ಐಸೋಲೇಟ್​ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್)

    ಕರೊನಾ ರೋಗಿಗಳ ಕ್ವಾರಂಟೈನ್​​ ಸೌಲಭ್ಯಕ್ಕೆ ಕ್ರೀಡಾಂಗಣ ಸಜ್ಜು !

    ಕೋವಿಶೀಲ್ಡ್​ : ರಾಜ್ಯ ಸರ್ಕಾರಗಳಿಗೆ ಪ್ರತಿ ಡೋಸ್​ಗೆ 400 ರೂ., ಖಾಸಗಿ ಆಸ್ಪತ್ರೆಗಳಲ್ಲಿ ಇನ್ನೂ ದುಬಾರಿ !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts