More

    ರೈಲು ನಿಲ್ದಾಣಗಳಲ್ಲಿ ಭದ್ರತೆ ಹೆಚ್ಚಳ

    ಹುಬ್ಬಳ್ಳಿ: ವಿಡಿಯೋ ಸರ್ವಿಲಿಯನ್ಸ್ ಸಿಸ್ಟಮ್ (ವಿಎಸ್​ಎಸ್-ತೀವ್ರ ನಿಗಾ ವ್ಯವಸ್ಥೆ) ಮೂಲಕ ನೈಋತ್ಯ ರೈಲ್ವೆ ವಲಯ ತನ್ನ ವ್ಯಾಪ್ತಿಯ ನಿಲ್ದಾಣಗಳ ಭದ್ರತೆಯನ್ನು ಹೆಚ್ಚಿಸಿದೆ.

    ನಿಲ್ದಾಣಗಳಲ್ಲಿ ಭದ್ರತೆ ಬಲಪಡಿಸಲು ಇಂಟರ್​ನೆಟ್ ಪ್ರೋಟೊಕಾಲ್ ಆಧಾರಿತ ವಿಡಿಯೋ ಸರ್ವಿಲಿಯನ್ಸ್ ಸಿಸ್ಟಮ್ ಅಳವಡಿಸಲು ರೈಲ್ವೆ ಸಚಿವಾಲಯ ಯೋಜಿಸಿತ್ತು. ಈ ಹಿನ್ನೆಲೆಯಲ್ಲಿ ನೈಋತ್ಯ ರೈಲ್ವೆ ವಲಯ ತನ್ನ ವ್ಯಾಪ್ತಿಯ ನಿಲ್ದಾಣಗಳ ಪ್ರಯಾಣಿಕರು ಕಾಯುವ ಸ್ಥಳ, ಪಾದಚಾರಿ ಮೇಲ್ಸೇತುವೆ, ಟಿಕೆಟ್ ಕಾಯ್ದಿರಿಸುವಿಕೆ ಸ್ಥಳ, ರ್ಪಾಂಗ್ ಪ್ರದೇಶ ಹಾಗೂ ಬುಕ್ಕಿಂಗ್ ಕಚೇರಿಯಲ್ಲಿ ವಿಎಸ್​ಎಸ್ ಸೌಲಭ್ಯ ಅಳವಡಿಸಿದೆ.

    ನಿರ್ಭಯ ಅನುದಾನದಡಿಯಲ್ಲಿ ದೇಶದ 983 ನಿಲ್ದಾಣಗಳಲ್ಲಿ ವಿಎಸ್​ಎಸ್ ಸೌಲಭ್ಯ ಅಳವಡಿಸಲು ರೈಲ್ವೆ ಮಂಡಳಿ ಅನುಮೋದನೆ ನೀಡಿದೆ. ನೈಋತ್ಯ ರೈಲ್ವೆ ವಲಯದ ವ್ಯಾಪ್ತಿಯ 11 ನಿಲ್ದಾಣಗಳಲ್ಲಿ ಈ ಸೌಲಭ್ಯ ಅಳವಡಿಸಲಾಗಿದೆ. 4ಕೆ ರೆಸ್ಯೂಲೇಶನ್ ಸಾಮರ್ಥ್ಯದ ಎಚ್​ಡಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ನಿಲ್ದಾಣಗಳಲ್ಲಿನ ಚಲನವಲನಗಳನ್ನು ವಿಡಿಯೋ ರಿಕಾರ್ಡ್ ಮಾಡುವ ಮತ್ತು ಸಂಗ್ರಹಿಸುವ ಸೌಲಭ್ಯವನ್ನೂ ಒದಗಿಸಲಾಗಿದೆ. ನಿಲ್ದಾಣಗಳಲ್ಲಿ 8 ಎಂಬಿಪಿಎಸ್ ಬ್ಯಾಂಡ್​ವಿಡ್ ್ತ ವಿಭಾಗೀಯ ಭದ್ರತಾ ಕಂಟ್ರೋಲ್ ರೂಮ್ಲ್ಲಿ 50 ಎಂಬಿಪಿಎಸ್ ಬ್ಯಾಂಡ್​ವಿಡ್ ್ತ ಹಾಗೂ ವಲಯ ಸೆಕ್ಯೂರಿಟಿ ಕಂಟ್ರೋಲ್ ರೂಮ್ಲ್ಲಿ 50 ಎಂಬಿಪಿಎಸ್ ಬ್ಯಾಂಡ್​ವಿಡ್ ್ತ ಸೌಲಭ್ಯ ಒದಗಿಸಲಾಗಿದೆ.

    ಬೆಂಗಳೂರು ಕಂಟೋನ್ಮೆಂಟ್​ನಲ್ಲಿ 27 ಕ್ಯಾಮರಾ, ಬಂಗಾರಪೇಟೆಯಲ್ಲಿ 36, ಬೆಳಗಾವಿಯಲ್ಲಿ 40, ಬಳ್ಳಾರಿಯಲ್ಲಿ 37, ಹಾಸನದಲ್ಲಿ 35, ಹೊಸಪೇಟೆಯಲ್ಲಿ 22, ಹುಬ್ಬಳ್ಳಿಯಲ್ಲಿ 19, ಕೃಷ್ಣರಾಜಪುರಂನಲ್ಲಿ 30, ಶಿವಮೊಗ್ಗದಲ್ಲಿ 29, ಎಸ್​ಎಸ್​ಪಿ ನಿಲಯಂನಲ್ಲಿ 25 ಮತ್ತು ವಾಸ್ಕೊ ಡಿ ಗಾಮಾ ನಿಲ್ದಾಣದಲ್ಲಿ 40 ಕ್ಯಾಮರಾಗಳುಳ್ಳ ವಿಎಸ್​ಎಸ್ ಸೌಲಭ್ಯ ಅಳವಡಿಸಲಾಗಿದೆ.

    ವಿಎಸ್​ಎಸ್ ಸೌಲಭ್ಯವನ್ನು ದಿನದ 24 ತಾಸೂ ವೀಕ್ಷಿಸಲಾಗುತ್ತದೆ. ತುರ್ತು ಕಾರ್ಯಾಚರಣೆಗೆ ಕಂಟ್ರೋಲ್ ರೂಂನಲ್ಲಿ ಭದ್ರತಾ ಸಿಬ್ಬಂದಿ ಸದಾ ಇರುತ್ತಾರೆ. ನಿಲ್ದಾಣಗಳಿಂದ ದೂರು ಬಂದಲ್ಲಿ ಅಥವಾ ಅನಿರೀಕ್ಷಿತ ಘಟನೆಗಳು ಸಂಭವಿಸಿದಲ್ಲಿ ತನಿಖೆಗೆ ಅನುಕೂಲವಾಗಲೆಂದು ಒಂದು ತಿಂಗಳವರೆಗೆ ವಿಡಿಯೋ ಸಾಕ್ಷಿಗಳನ್ನು ಕಾಯ್ದಿರಿಸುವ ಸೌಲಭ್ಯವೂ ಇಲ್ಲಿದೆ.

    ನೈಋತ್ಯ ವಲಯ ವ್ಯಾಪ್ತಿಯ 11 ರೈಲ್ವೆ ನಿಲ್ದಾಣಗಳಲ್ಲಿ ಅಳವಡಿಸಿರುವ ವಿಎಸ್​ಎಸ್ ಸೌಲಭ್ಯಗಳನ್ನು ನಗರದ ರೈಲ್ ಸೌಧದಲ್ಲಿ ಗುರುವಾರ ಉದ್ಘಾಟಿಸಿ ಮಾತನಾಡಿದ ವಲಯದ ಪ್ರಧಾನ ವ್ಯವಸ್ಥಾಪಕ ಅಜಯಕುಮಾರ ಸಿಂಗ್, ವಿಜಯಪುರ, ಗದಗ, ದಾವಣಗೆರೆ, ಬಿರೂರ, ಬಾಣಸವಾಡಿ ಮತ್ತು ಕೆಂಗೇರಿ ನಿಲ್ದಾಣಗಳಲ್ಲಿಯೂ ಮಾರ್ಚ್​ವೊಳಗಾಗಿ ಈ ಸೌಲಭ್ಯ ಅಳವಡಿಸಲಾಗುವುದು ಎಂದು ಹೇಳಿದರು.

    ಹಿರಿಯ ಅಧಿಕಾರಿಗಳಾದ ಪಿ.ವಿ. ರಾಜಶೇಖರ, ಆರ್.ಎಸ್. ಚವ್ಹಾಣ, ಅಲೋಕ ಕುಮಾರ, ಅನಿಲ ಪವಿತ್ರನ್, ವಿಲಾಸ ಗುಂಡಾ, ರೂಪಾ ಶ್ರೀನಿವಾಸನ್, ಚಂದ್ರಕಿಶೋರ ಪ್ರಸಾದ ಹಾಗೂ ಇತರರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts