More

    ವಿಜ್ಞಾನ ಜ್ಯೋತಿ ಯೋಜನೆಯಿಂದ ಅಭಿರುಚಿ ಹೆಚ್ಚಳ

    ಬಾಳೆಹೊನ್ನೂರು: ಕೇಂದ್ರ ಸರ್ಕಾರದ ವಿಜ್ಞಾನ ಜ್ಯೋತಿ ಯೋಜನೆ 9ರಿಂದ 12ನೇ ತರಗತಿ ಬಾಲಕಿಯರಲ್ಲಿ ವೈಜ್ಞಾನಿಕ ಅಭಿರುಚಿ ಜಾಗೃತಗೊಳಿಸುವ ಮಹತ್ವದ ಯೋಜನೆ ಎಂದು ನವೋದಯ ವಿದ್ಯಾಲಯದ ಪ್ರಾಚಾರ್ಯ ಆರ್.ಪ್ರೇಮ್‌ಕುಮಾರ್ ಹೇಳಿದರು.

    ಸೀಗೋಡು ಜವಾಹರ್ ವಿದ್ಯಾಲಯದಲ್ಲಿ ಗುರುವಾರ ಆಯೋಜಿಸಿದ್ದ ವಿಜ್ಞಾನ ಕಾರ್ಯಾಗಾರದಲ್ಲಿ ಮಾತನಾಡಿ, ಜವಾಹರ ನವೋದಯ ವಿದ್ಯಾಲಯದಲ್ಲಿ ವ್ಯವಸ್ಥಿತವಾಗಿ ಯೋಜನೆ ಅನುಷ್ಠಾನಗೊಂಡಿದೆ. ಯೋಜನೆಯಡಿ ನವದೆಹಲಿಯ ನವೋದಯ ವಿದ್ಯಾಲಯ ಸಮಿತಿ ಹಾಗೂ ಬೆಂಗಳೂರಿನ ವಿಜ್ಞಾನ ಉತ್ಸವ್ ಜಂಟಿಯಾಗಿ ಎರಡು ದಿನಗಳ ಕಾಲ ವಿಜ್ಞಾನ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದರು.
    ಬಾಲಕಿಯರನ್ನು ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್ ಹಾಗೂ ಗಣಿತ ಕ್ಷೇತ್ರಗಳಲ್ಲಿ ಸಶಕ್ತಗೊಳಿಸುವ ಮೂಲಕ ಅವರನ್ನು ವಿಜ್ಞಾನದ ಮುಖ್ಯವಾಹಿನಿಗೆ ಕರೆತರುವುದು ವಿಜ್ಞಾನ ಜ್ಯೋತಿಯ ಮುಖ್ಯ ಗುರಿ ಎಂದರು.
    ವಿಜ್ಞಾನ ಉತ್ಸವ್ ಸಂಸ್ಥೆ ನಿರ್ದೇಶಕ ಶಶಾಂಕ್ ಕರನಮ್ ಮತ್ತು ತಂಡದವರು ವಿಜ್ಞಾನಕ್ಕೆ ಸಂಬಂಧಿಸಿದ ವಿವಿಧ ಪ್ರಯೋಗಗಳನ್ನು ನಡೆಸಿ ಮಕ್ಕಳಿಗೆ ಮಾಹಿತಿ ನೀಡಿದರು.
    ವಿದ್ಯಾಲಯದ ಉಪ ಪ್ರಾಚಾರ್ಯೆ ಜೆ.ಶ್ರೀಕಲಾ, ವಿಜ್ಞಾನ ಜ್ಯೋತಿ ಯೋಜನೆ ಪ್ರಭಾರ ಜೀವಶಾಸ್ತ್ರ ಉಪನ್ಯಾಸಕ ಎ.ರವಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts