More

    ಒಮಿಕ್ರಾನ್ ಭೀತಿಯ ನಡುವೆಯೂ ತೈಲ ಉತ್ಪಾದನೆ ಹೆಚ್ಚಳ

    ಫ್ರಾಂಕ್​ಫ್ರಟ್/ನವದೆಹಲಿ: ಜಗತ್ತಿನಾದ್ಯಂತ ಒಮಿಕ್ರಾನ್ ಸೋಂಕು ಕ್ಷಿಪ್ರವಾಗಿ ಹರಡುತ್ತ ಆತಂಕ ಸೃಷ್ಟಿಸಿದೆ. ಆದರೂ, ಜಾಗತಿಕ ಅರ್ಥವ್ಯವಸ್ಥೆ ಚೇತರಿಸುವುದೆಂಬ ಆಶಾವಾದದೊಂದಿಗೆ ಒಪೆಕ್ ಮತ್ತು ಮಿತ್ರ ರಾಷ್ಟ್ರಗಳು ತೈಲ ಉತ್ಪಾದನೆಯನ್ನು ನಿಯತವಾಗಿ ಏರಿಸಲು ಮಂಗಳವಾರದ ಸಭೆಯಲ್ಲಿ ತೀರ್ಮಾನ ತೆಗೆದುಕೊಂಡಿವೆ. ಸೌದಿ ಅರೇಬಿಯಾ ನೇತೃತ್ವದ 23 ಸದಸ್ಯ ರಾಷ್ಟ್ರಗಳ ಒಪೆಕ್ ಮತ್ತು ರಷ್ಯಾಗಳು ಫೆಬ್ರವರಿ ತಿಂಗಳಿಂದ ದಿನಕ್ಕೆ 4 ಲಕ್ಷ ಬ್ಯಾರೆಲ್ ತೈಲ ಉತ್ಪಾದಿಸಲು ನಿರ್ಧರಿಸಿವೆ.

    ಕೋವಿಡ್ ಸಂಕಷ್ಟದ ಬಳಿಕ ಲಾಕ್​ಡೌನ್ ತೆರವುಗೊಳಿಸಿದ ವೇಳೆ ತೈಲ ಉತ್ಪಾದನೆ ಹೆಚ್ಚಿಸುವಂತೆ ಬಳಕೆದಾರ ರಾಷ್ಟ್ರಗಳು ಮನವಿ ಮಾಡಿದಾಗ ಒಪೆಕ್ ಮತ್ತು ಮಿತ್ರ ರಾಷ್ಟ್ರಗಳು ಅದನ್ನು ತಿರಸ್ಕರಿಸಿದ್ದವು. ಕಳೆದ ವರ್ಷ ನವೆಂಬರ್​ನಲ್ಲಿ ಅಮೆರಿಕ, ಭಾರತ ಸೇರಿ ಬಳಕೆದಾರ ರಾಷ್ಟ್ರಗಳು ಇದಕ್ಕೆ ಪ್ರತಿಯಾಗಿ ತಮ್ಮಲ್ಲಿರುವ ತುರ್ತಪರಿಸ್ಥಿತಿ ಬಳಕೆಯ ದಾಸ್ತಾನನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ ತೈಲದರ ಏರಿಕೆ ತಡೆಯಲು ಕ್ರಮ ತೆಗೆದುಕೊಂಡಿದ್ದವು.

    ಇದೇ ವೇಳೆ, ಭಾರತದ ಮಲ್ಟಿ ಕಮಾಡಿಟಿ ಎಕ್ಸ್​ಚೇಂಜ್​ನಲ್ಲಿ ಕಚ್ಚಾ ತೈಲ ಫ್ಯೂಚರ್ ದರ ಪ್ರತಿ ಬ್ಯಾರೆಲ್​ಗೆ 20 ರೂಪಾಯಿ ಏರಿ 5,697 ರೂಪಾಯಿ ಆಗಿದೆ. ಜನವರಿಯಲ್ಲಿ ವಿಲೇವಾರಿ ಆಗಬೆಕಾದ ಕಚ್ಚಾ ತೈಲ 8,108 ಸ್ಲಾಟ್​ಗಳಲ್ಲಿ 20 ರೂಪಾಯಿ ಏರಿದೆ. ಜಾಗತಿಕವಾಗಿ ವೆಸ್ಟ್ ಟೆಕ್ಸಾಸ್ ಇಂಟರ್​ವಿುೕಡಿಯೇಟ್ ಕಚ್ಚಾ ತೈಲ ಪ್ರತಿ ಬ್ಯಾರೆಲ್ ದರ 76.33 ಡಾಲರ್ ಆಗಿತ್ತು. ನ್ಯೂಯಾರ್ಕ್​ನಲ್ಲಿ ಬ್ರೆಂಟ್ ಕಚ್ಚಾ ತೈಲ ದರ ಪ್ರತಿ ಬ್ಯಾರೆಲ್​ಗೆ 79.23 ಡಾಲರ್ ಆಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts