More

    ಪುಸ್ತಕ ಓದಿನಿಂದ ಜ್ಞಾನ ಭಂಡಾರ ಹೆಚ್ಚಳ

    ಹಿರೇಕೆರೂರ: ಇಂದು ಪುಸ್ತಕ ಓದುವ ಹವ್ಯಾಸ ಕಡಿಮೆಯಾಗುತ್ತಿದೆ. ಇಂದಿನ ಯುವ ಪೀಳಿಗೆ ಗ್ರಂಥಾಲಯದ ಸದುಪಯೋಗ ಪಡೆದುಕೊಂಡು ಜ್ಞಾನ ಭಂಡಾರವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಶಾಖಾ ಗ್ರಂಥಾಲಯ ಪ್ರಭಾರಿ ವಿಜಯಕುಮಾರ ನಲವಾಲದ ಹೇಳಿದರು.

    ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಕಾರ್ಯಕ್ರಮದ ನಿಮಿತ್ತ ಜಿಲ್ಲಾ ಸಾರ್ವಜನಿಕ ಕೇಂದ್ರ ಗ್ರಂಥಾಲಯ ಇಲಾಖೆ ವತಿಯಿಂದ ಪಟ್ಟಣದ ಸಾರ್ವಜನಿಕ ಶಾಖಾ ಗ್ರಂಥಾಲಯದಲ್ಲಿ ಗುರುವಾರ ಏರ್ಪಡಿಸಿದ್ದ ಪುಸ್ತಕ ಪ್ರದರ್ಶನ, ಸದಸ್ಯತ್ವ ಆಂದೋಲನ, ಉಚಿತವಾಗಿ ಮನೆಯಲ್ಲಿ ಕುಳಿತು ಪುಸ್ತಕ ಓದಿಗಾಗಿ ಡಿಜಿಟಲ್ ಗ್ರಂಥಾಲಯ ಆಪ್ ಬಗ್ಗೆ ಮಾಹಿತಿ ನೀಡುವ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

    ಇಂದು ಎಲ್ಲರೂ ಮೊಬೈಲ್​ಫೋನ್, ಟಿವಿ ದಾಸರಾಗಿದ್ದು, ಅತ್ಯಂತ ಮಹತ್ವವುಳ್ಳ ಪುಸ್ತಕ, ಪತ್ರಿಕೆ, ವಾರ ಪತ್ರಿಕೆ, ಕಾದಂಬರಿ, ನಾಡಿನ ಭವ್ಯ ಪರಂಪರೆ ಹೀಗೆ ಅಗತ್ಯ ಮಾಹಿತಿಯುಳ್ಳ, ಹೆಚ್ಚಿನ ಜ್ಞಾನ ಸಂಪಾದನೆಯ ಪುಸ್ತಕಗಳನ್ನು ಓದುತ್ತಿಲ್ಲ. ಇದರಿಂದ ಸಾಮಾನ್ಯ ಜ್ಞಾನ ಮರೀಚಿಕೆಯಾಗುತ್ತಿದೆ. ಇದು ಮುಂದಿನ ಪೀಳಿಗೆಗೆ ಅತ್ಯಂತ ಮಾರಕವಾಗಿ ಪರಿಣಮಿಸಲಿದೆ. ಸಾರ್ವಜನಿಕ ಗ್ರಂಥಾಲಯದಲ್ಲಿ ಅತ್ಯಂತ ಉಪಯುಕ್ತ, ಜ್ಞಾನ ಭಂಡಾರವನ್ನು ವೃದ್ಧಿಸಿಕೊಳ್ಳುವ, ಪ್ರಪಂಚದ ಮಾಹಿತಿ ಇರುವ ಮಹತ್ವದ ಪುಸ್ತಕಗಳಿವೆ. ಸಾರ್ವಜನಿಕರು ಸದ್ಬಳಕೆ ಮಾಡಿಕೊಳ್ಳಬೇಕು. ಜತೆಗೆ ತಮ್ಮ ಮಕ್ಕಳಿಗೆ ಪಠ್ಯದೊಂದಿಗೆ ಪಠ್ಯೇತರ ಪುಸ್ತಕಗಳನ್ನು ಓದಲು ತಿಳಿಸಬೇಕು ಎಂದರು.

    ಸಹಾಯಕ ಗ್ರಂಥಾಲಯ ಪರಿಪಾಲಕ ಭಾಷಾ ರಟ್ಟಿಹಳ್ಳಿ, ಅಶೋಕ, ವಿಶ್ವನಾಥ ಕರಡಿ, ಚಂದ್ರಶೇಖರ ಹಾವನೂರು ಹಾಗೂ ಓದುಗರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts