More

    ಸಂಗೀತದಿಂದ ಏಕಾಗ್ರತೆ ಹೆಚ್ಚಳ

    ಕಳಸ: ಸಂಗೀತದಿಂದ ಏಕಾಗ್ರತೆ ಬೆಳೆಯುತ್ತದೆ. ಕೆಟ್ಟ ಯೋಚನೆ ದೂರ ಮಾಡಿ ಮನಸ್ಸನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವಂಥ ಶಕ್ತಿ ಸಂಗೀತಕ್ಕಿದೆ ಎಂದು ಕೆಪಿಎಸ್ ಪದವಿಪೂರ್ವ ಕಾಲೇಜು ಪ್ರಾಚಾರ್ಯ ಎ.ಡಿ.ಅನಂತಪದ್ಮನಾಭ ಹೇಳಿದರು.

    ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನಿಂದ ಆಯೋಜಿಸಿದ್ದ ಭಾವಗೀತೆ ತರಬೇತಿ ಶಿಬಿರದ ಭಾನುವಾರದ ಸಮಾರೋಪದಲ್ಲಿ ಮಾತನಾಡಿ, ಮಕ್ಕಳಿಗೆ ಸಂಗೀತದ ಜತೆ ಸಾಹಿತ್ಯವನ್ನೂ ಮನಸ್ಸಿಗೆ ತುಂಬುವಂಥ ಕಾರ್ಯಕ್ರಮ ಇದಾಗಿದೆ ಎಂದರು.
    ತಾಪಂ ಮಾಜಿ ಸದಸ್ಯ ಮಹಮ್ಮದ್ ರಫೀಕ್ ಮಾತನಾಡಿ, ಸಂಗೀತ ಕಲಿಕೆಯಿಂದ ಮಕ್ಕಳು ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳಬಹುದು. ಶಿಬಿರದಲ್ಲಿ ಕಲಿತ ಸಂಗೀತವನ್ನು ಮುಂದುವರಿಸಿಕೊಂಡು ಹೋಗಬೇಕು ಎಂದರು.
    ಕಳಸ ತಾಲೂಕಿನ ವಿವಿಧ ಶಾಲೆಯ 140 ವಿದ್ಯಾರ್ಥಿಗಳು ಶಿಬಿರದಲ್ಲಿ ಪಾಲ್ಗೊಂಡಿದ್ದರು. ಎರಡು ದಿನಗಳ ನಡೆದ ಕಾರ್ಯಕ್ರಮದಲ್ಲಿ ತಾಲೂಕು ಕಸಾಪ ಅಧ್ಯಕ್ಷ ಅ.ರಾ.ಸತೀಶ್ಚಂದ್ರ, ದತ್ತಿ ದಾನಿ ಪಿ.ಇ.ಅಬ್ದುಲ್ ಕರೀಂ, ಕಸಾಪ ನಿಕಟಪೂರ್ವ ಅಧ್ಯಕ್ಷ ಕೆ.ವಿ.ನರೇಂದ್ರ, ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಎಸ್.ಎಸ್.ವೆಂಕಟೇಶ್, ಕೆಪಿಎಸ್ ಉಪಪ್ರಾಚಾರ್ಯ ಜಿ.ಶಿವಕುಮಾರಸ್ವಾಮಿ, ಎಚ್.ಸಿ.ಅಣ್ಣಯ್ಯ, ಅ.ರಾ.ರಾಧಾಕೃಷ್ಣ, ಸುಜಯಾ ಸದಾನಂದ, ಕಿರಣ್ ಶೆಟ್ಟಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts