More

    ಇಂಚಗೇರಿ ಮಠ ಇಷ್ಟಾರ್ಥ ಸಿದ್ಧಿಯ ಕೇಂದ್ರ

    ಉಪ್ಪಿನಬೆಟಗೇರಿ: ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಶ್ರೀ ಕ್ಷೇತ್ರ ಇಂಚಗೇರಿ ಮಠವು ಆಧ್ಯಾತ್ಮಿಕ ಕೇಂದ್ರವಾಗಿದ್ದು, ಅಲ್ಲಿರುವ ಗದ್ದುಗೆಗಳಿಗೆ ಭಕ್ತಿಯಿಂದ ಬೇಡಿಕೊಂಡರೆ ಇಷ್ಟಾರ್ಥ ಸಿದ್ಧಿಯಾಗುತ್ತದೆ ಎಂದು ಹುಬ್ಬಳ್ಳಿ ಗಿರೀಶ ಆಶ್ರಮದ ಶ್ರೀ ಗೋಪಾಲ ಮಹಾರಾಜರು ಹೇಳಿದರು.


    ಭಾನುವಾರ ಉಪ್ಪಿನಬೆಟಗೇರಿಗೆ ಆಗಮಿಸಿದ ಇಂಚಗೇರಿ ಮಠಕ್ಕೆ ತೆರಳುವ ದಿಂಡಿ ಪಲ್ಲಕ್ಕಿ ಪಾದಯಾತ್ರಿಕರಿಗೆ ಸ್ವಾಗತ ಕೋರಿದ ನಂತರ ಶಂಕರ ಓರಣಕರ ನಿವಾಸದಲ್ಲಿ ಜರುಗಿದ ಧಾರ್ಮಿಕ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.


    ಕರ್ನಾಟಕ ಸೇರಿ ಮಹಾರಾಷ್ಟ್ರ ಹಾಗೂ ಇತರ ರಾಜ್ಯಗಳಲ್ಲಿ ಅಪಾರ ಸಂಖ್ಯೆಯ ಭಕ್ತರನ್ನು ಹೊಂದಿದ ಶ್ರೀ ಮಠವು, ಪೀಠಾಧಿಪತಿಗಳಾದ ಶ್ರೀ ರೇವಣಸಿದ್ಧೇಶ್ವರ ಮಹಾರಾಜರ ನೇತೃತ್ವದಲ್ಲಿ ಜಾತ್ಯತೀತ ಪರಂಪರೆಯನ್ನು ಉಳಿಸಿಕೊಂಡು ಬಂದಿದೆ. ಸಾಮೂಹಿಕ ಬೇಸಾಯ, ಸಹ ಪಂಕ್ತಿ ಭೋಜನ ಸೇರಿ ಅನೇಕ ಧಾರ್ಮಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆದುಕೊಂಡು ಬರುತ್ತಿವೆ ಎಂದರು.


    ಶಂಕ್ರೆಪ್ಪ ಮಹಾರಾಜರು ಮಾತನಾಡಿ, ಪ್ರತಿ ವರ್ಷದಂತೆ ಈ ಬಾರಿಯೂ ಕ್ಷೇತ್ರ ಇಂಚಗೇರಿ ಮಠದಲ್ಲಿ ಮೇ 29ರಿಂದ 31ರವರೆಗೆ ಜರುಗುವ ಮಾಧವಾನಂದ ಪ್ರಭುಜಿಯವರ ಪುಣ್ಯತಿಥಿ ಸಪ್ತಾಹದಲ್ಲಿ ಪಾಲ್ಗೊಳ್ಳಲೆಂದು ರಾಜ್ಯದ ವಿವಿಧ ಭಾಗದ ಸುಮಾರು 50ಕ್ಕೂ ಅಧಿಕ ಭಕ್ತರು ಇಂಚಗೇರಿ ಮಠಕ್ಕೆ ತೆರಳುತ್ತಿದ್ದಾರೆ ಎಂದರು. ನಾಗನೂರಿನ ರಾಮಣ್ಣ ಮಹಾರಾಜರು ಮಾತನಾಡಿದರು.


    ಶಿಕ್ಷಕ ಮಹಾಬಳೇಶ್ವರ ನವಲಗುಂದ, ಚಂದ್ರಶೇಖರ ಅರಳಿಕಟ್ಟಿ, ಶಂಕರ ಓರಣಕರ, ತುಕಾರಾಮ ಓರಣಕರ, ಲಕ್ಷ್ಮಣ ಮೇದಾರ, ಕಮಲಾಬಾಯಿ ಓರಣಕರ, ಆದಿತ್ಯ ಈಸರಗೊಂಡ, ಸಾವಿತ್ರಿ ಓರಣಕರ, ರೂಪಾ ಈಸರಗೊಂಡ, ರಮೇಶ ಓರಣಕರ, ಡಾ.ಡಿ.ಐ. ನದಾಫ್, ಸೂರಜ ಓರಣಕರ, ಅಸ್ಲಂ ಮುಲ್ಲಾ, ಚನಬಸಪ್ಪ ಕರೀಕಟ್ಟಿ ಸೇರಿದಂತೆ 50ಕ್ಕೂ ಅಧಿಕ ಪಾದಯಾತ್ರಿಕರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts