More

    ಬಾಣಂತಿ ಸಾವಿನ ಹೊಣೆ ಜಿಲ್ಲಾಡಳಿತ ಹೊರುತ್ತಾ ? ; ಡಿಎಚ್‌ಒ ಸಲೀಂಗೆ ಕಮಲಾಪುರ ನಿವಾಸಿಗಳ ತರಾಟೆ

    ಕಮಲಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಮರ್ಪಕ ಚಿಕಿತ್ಸೆ ದೊರೆಯುತ್ತಿಲ್ಲ. ಎರಡು ವಾರಗಳ ಹಿಂದೆ ಬಾಣಂತಿ ಸ್ಥಿತಿ ಗಂಭೀರವಾಗಿದ್ದರಿಂದ ಹೊಸಪೇಟೆಗೆ ಸಾಗಿಸುವ ಮಾರ್ಗದಲ್ಲಿ ತಾಯಿ, ಮಗು ಮೃತಪಟ್ಟಿತು. ಅದಕ್ಕೆ ಜಿಲ್ಲಾಡಳಿತ ಹೊಣೆಯಾಗುತ್ತಾ ಎಂದು ಸ್ಥಳೀಯರ ಪ್ರಶ್ನೆ ಡಿಎಚ್ ಒ ಡಾ.ಸಲೀಂ ಅವರನ್ನು ಪೇಚಿಗೆ ಸಿಲುಕಿಸಿತು.

    ತಾಲೂಕಿನ ಕಮಲಾಪುರದಲ್ಲಿ ಬುಧವಾರ ಆಯೋಜಿಸಿದ್ದ ‘ನಮ್ಮ ಕ್ಲಿನಿಕ್’ ಉದ್ಘಾಟನೆ ಬಳಿಕ ಮಾತನಾಡಿದ ಸ್ಥಳೀಯ ನಿವಾಸಿ ಕೋಟಲ್ ವೀರೇಶ ಮತ್ತು ಪುರಸಭೆ ಸದಸ್ಯ ಗೋಪಾಲ್ ಅಧಿಕಾರಿಗಳ ಎದುರು ಪ್ರಾಥಮಿಕ ಆರೋಗ್ಯ ಕೇಂದ್ರದ ಅವ್ಯವಸ್ಥೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.

    ಕಮಲಾಪುರದಲ್ಲಿ ಸಕಾಲಕ್ಕೆ ಆಂಬುಲೆನ್ಸ್ ಸಿಗುತ್ತಿಲ್ಲ. ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಾವು ಕಡಿತಕ್ಕೂ ಇಂಜೆಕ್ಷನ್ ಇರಲ್ಲ. ಜನರಿಗೆ ಸರ್ಮಪಕವಾಗಿ ಆರೋಗ್ಯ ಸೇವೆ ದೊರೆಯದೇ ರೋಗಿಗಳು ನರಳುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೆಮ್ಮು, ನೆಗಡಿ, ಜ್ವರದ ಚಿಕಿತ್ಸಾ ಕೇಂದ್ರವಾಗಿದೆ. ನಾಯಿ ಕಡಿತ, ಹಾವು ಕಡಿತಕ್ಕೆ ಇಂಜೆಕ್ಷನ್ ದೊರೆಯುತ್ತಿಲ್ಲ. ಪ್ರತಿಯೊಂದಕ್ಕೂ ಹೊಸಪೇಟೆಗೆ ಹೋಗುವಂತಾಗಿದೆ. ವಿಜಯನಗರ ಜಿಲ್ಲೆ ಯಾಗಿದ್ದರೂ, ಗಂಭೀರ ಕಾಯಿಲೆಗಳಿಗೆ ಬಳ್ಳಾರಿ, ಕೊಪ್ಪಳ, ಹುಬ್ಬಳ್ಳಿ ಶಿಫಾರಸು ಮಾಡುತ್ತಿದ್ದಾರೆ. ಜಿಲ್ಲೆಯಾಗಿ ಪ್ರಯೋಜನವೇನು ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಅದಕ್ಕೆ ಪ್ರತಿಕ್ರಿಯಿಸಿದ ಡಿಎಚ್‌ಒ ಡಾ.ಸಲೀಂ, ನಾಯಿ, ಹಾವು ಕಡಿತಕ್ಕೆ ಬಳ್ಳಾರಿಯಲ್ಲಿ ಚುಚ್ಚು ಮದ್ದು ದಾಸ್ತಾನು ಇದೆ. ಮೂರ್ನಾಲ್ಕು ದಿನಗಳಲ್ಲಿ ಒದಗಿಸಲಾಗುವುದು. ಕಮಲಾಪುರ, ಗಾದಿಗನೂರು ಮತ್ತು ಮರಿಯಮ್ಮನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಅಂಬುಲೆನ್ಸ್‌ಗೆ ಚಾಲಕರಿಲ್ಲ. ವೈದ್ಯಕೀಯ ಸಿಬ್ಬಂದಿ ಕೊರತೆಯೂ ಇದೆ. ಹೊಸದಾಗಿ ಜಿಲ್ಲಾ ಆಸ್ಪತ್ರೆ ಮಂಜೂರಾಗಿದ್ದು, ಮೆಡಿಕಲ್ ಕಾಲೇಜು ಕೂಡಾ ಬರಲಿದೆ. ಹಂತಹಂತವಾಗಿ ಸಮಸ್ಯೆ ಬಗೆಹರಿಯಲಿದೆ ಎಂದು ಭರವಸೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts