ಕೆರೂರ: ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಅವರ ಆಡಳಿತ ಅವಽಯಲ್ಲಿ ಮಂಜೂರಾಗಿದ್ದ ಪಟ್ಟಣದ ಸಂಚಾರಿ ನ್ಯಾಯಾಲಯವನ್ನು ಹೈಕೋರ್ಟ್ ನ್ಯಾಯಮೂರ್ತಿ ಅಶೋಕ ಎಸ್.ಕಿಣಗಿ ಅವರು ಶನಿವಾರ ಉದ್ಘಾಟಿಸಿದರು.
ಉದ್ಘಾಟನೆ ಸಮಾರಂಭದ ಮುಖ್ಯ ಅತಿಥಿಗಳಾಗಿ ಹೈಕೋರ್ಟ್ ನ್ಯಾಯಮೂರ್ತಿಗಳಾದ ಸಂಜೀವಕುಮಾರ ಹಂಚಾಟೆ, ರಾಜೇಂದ್ರ ಬದಾಮಿಕರ, ಬಾಗಲಕೋಟೆ ಜಿಲ್ಲಾ ಪ್ರಧಾನ ಸತ್ರ ನ್ಯಾಯಾಧೀಶ ದೇಶಪಾಂಡೆ ಜಿ.ಎಸ್ ಹಾಗೂ ಬಾದಾಮಿ ಹಿರಿಯ ಸಿವಿಲ್ ನ್ಯಾಯಧೀಶ ವಿ.ಹನುಮಂತಪ್ಪ, ಕಿರಿಯ ನ್ಯಾಯಾಧೀಶೆ ಕೆ.ಭವ್ಯ ಆಗಮಿಸಿದ್ದರು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತ ಹಿಂಭಾಗದ ಸರ್ಕಾರಿ ಪ್ರಾಥಮಿಕ ಶಾಲೆಯ (ನಡುವಿನ ಶಾಲೆ) ನವೀಕರಣಗೊಂಡ ಕಟ್ಟಡದಲ್ಲಿ ಸಂಚಾರಿ ನ್ಯಾಯಾಲಯ ಉದ್ಘಾಟಿಸಲಾಯಿತು.
ನ್ಯಾಯವಾದಿಗಳಾದ ಎಂ.ಡಿ.ಕಿರಗಿ, ಎಚ್.ಬಿ.ಪ್ರಭಾಕರ, ಜಿ.ಎಸ್.ಗುರುನಗೌಡರ, ರಾಜು ಕಕರಡ್ಡಿ, ಕಿರಣ ಪವಾಡಶೆಟ್ಟರ, ಎಸ್.ಆರ್.ದೇಸಾಯಿ, ರಾಚಪ್ಪ ಬನ್ನಿದಿನ್ನಿ, ವೈ.ಸಿ.ಕಾಂಬಳೆ, ಪುಲಿಕೇಶಿ ಸೂಳಿಕೇರಿ, ಬಸವರಾಜ ಕಲೂತಿ, ನಂಜುಂಡಿ ಸಾಲಿಮಠ, ಸರಸ್ವತಿ ಪಾಟೀಲ, ಅನಸೂಯಾ ಗದಗಿಮಠ, ಸ್ಥಳೀಯ ಪ್ರಮುಖರಾದ ದಾನಪ್ಪ ಕಿರಗಿ, ಅಶೋಕ ಜಿಗಳೂರ, ಡಾ.ಎಂ.ಜಿ.ಕಿತ್ತಲಿ, ರಂಗನಾಥ ದೇಸಾಯಿ, ರಾಮಣ್ಣ ಕಟ್ಟಿಮನಿ, ಪರಶುರಾಮ ಮಲ್ಲಾಡದ ಇತರರಿದ್ದರು.
