More

    ರೈತರಿಂದ ನೇರವಾಗಿ ಹತ್ತಿ ಖರೀದಿ

    ಕೆಂಭಾವಿ: ಈ ಬಾರಿ ಸರ್ಕಾರ ರೈತರಿಂದ ನೇರವಾಗಿ ಬೆಂಬಲ ಬೆಲೆ ನೀಡಿ ಹತ್ತಿ ಖರೀದಿ ಮಾಡುತ್ತಿದ್ದು, ಈ ಭಾಗದ ರೈತರು ಇದರ ಲಾಭ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಹೇಳಿದರು.

    ಹದನೂರ ಗ್ರಾಮದಲ್ಲಿ ಶನಿವಾರ ಖಾಸಗಿ ಹತ್ತಿ ಕಾರ್ಖಾನೆಯಲ್ಲಿ ಆರಂಭವಾದ ಹತ್ತಿ ಮಾರಾಟ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, ಕಲಬುರಗಿ, ರಾಯಚೂರು, ಯಾದಗಿರಿ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದಾದ ಹತ್ತಿ, ಮಾರಾಟ ಮಾಡಲು ಪ್ರತಿ ವರ್ಷ ರೈತರು ಹರ ಸಾಹಸ ಪಡುತ್ತಿದ್ದರು. ರೈತರ ಹಿತದೃಷ್ಟಿಯಿಂದ ಹಲವು ಖಾಸಗಿ ಕಾರ್ಖಾನೆಗಳ ಜತೆ ಸರ್ಕಾರ ಕೈಜೋಡಿಸಿ ಬೆಂಬಲ ಬೆಲೆ ನೀಡಿ ಹತ್ತಿ ಖರೀದಿಗೆ ಅನುಮತಿ ನೀಡಲಾಗಿದೆ ಎಂದು ಹೇಳಿದರು.

    ಭಿ.ಗುಡಿ, ಗೋಗಿ, ಹದನೂರ ಸೇರಿ ಜಿಲ್ಲೆಯಲ್ಲಿ ಹಲವು ಖಾಸಗಿ ಹತ್ತಿ ಕಾರ್ಖಾನೆಗಳಲ್ಲಿ ರೈತರಿಂದ ನೇರವಾಗಿ ಹತ್ತಿ ಖರೀದಿಗೆ ವ್ಯವಸ್ಥೆ ಮಾಡಿದ್ದು ರೈತರು ಇದರ ಲಾಭ ಪಡೆಯುವಂತೆ ಹೇಳಿದರು.

    ಗ್ರಾಪಂ ಉಪಾಧ್ಯಕ್ಷ ಪ್ರಶಾಂತಗೌಡ, ರಾಮನಗೌಡ ಹದನೂರ, ಶಿವಮಹಾಂತ ಚಂದಾಪುರ, ಎಂ. ಎಸ್. ಪಟ್ಟಣಶೆಟ್ಟಿ, ಗೌಡಪ್ಪಗೌಡ ವಣಕ್ಯಾಳ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts