More

    ನೌಕರರ ಸಮಸ್ಯೆ ಪರಿಹರಿಸಲು ಪ್ರಯತ್ನ

    ಜೇವರ್ಗಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ಸರ್ಕಾರಿ ನೌಕರರ ಪರವಾಗಿದ್ದು, ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಶ್ರಮಿಸುತ್ತಿದೆ. ೭ನೇ ವೇತನ ಜಾರಿಗೆ ತರುವ ನಿಟ್ಟಿನಲ್ಲಿ ಸರ್ಕಾರದ ಮೇಲೆ ಒತ್ತಡ ಹಾಕಲಾಗುವುದು ಎಂದು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಅಧ್ಯಕ್ಷ ಡಾ.ಅಜಯಸಿಂಗ್ ಹೇಳಿದರು.

    ಭೂತಪೂರ ಕಲ್ಯಾಣ ಮಂಟಪದಲ್ಲಿ ಸರ್ಕಾರಿ ನೌಕರರ ಸಂಘದಿಂದ ಸೋಮವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ, ಉತ್ತಮ ಸೇವಾ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿ, ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ಜೇವರ್ಗಿಯಲ್ಲಿ ಹಮ್ಮಿಕೊಂಡಿರುವುದು ಶ್ಲಾಘನೀಯ. ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಅವರು ನೌಕರರ ಎಳಿಗೆಗಾಗಿ ಶ್ರಮಿಸುತ್ತಿದ್ದಾರೆ. ವೇತನ, ತುಟ್ಟಿ ಭತ್ಯೆ ಹೆಚ್ಚಳಕ್ಕಾಗಿ ಈಗಾಗಲೇ ಸಿಎಂಗೆ ಮನವಿ ಸಲ್ಲಿಸಿದ್ದಾರೆ ಎಂದರು.

    ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎನ್. ಷಡಾಕ್ಷರಿ ಮಾತನಾಡಿ, ರಾಜ್ಯ ಸರ್ಕಾರಿ ನೌಕರರು ಸರ್ಕಾರದ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸಬೇಕು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಬೇಕು. ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಉನ್ನತ ಹುದ್ದೆ ಅಲಂಕರಿಸಬೇಕು. ಕೋವಿಡ್ ಸಂದರ್ಭದಲ್ಲಿ ನೌಕರರು ತಮ್ಮ ಸಂಬಳದಿAದ ೪೦೦ ಕೋಟಿ ರೂ. ಸರ್ಕಾರಕ್ಕೆ ನೀಡಿದ್ದಾರೆ ಎಂದು ತಿಳಿಸಿದರು.

    ಸೊನ್ನದ ಶ್ರೀ ಡಾ.ಶಿವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

    ತಹಸೀಲ್ದಾರ್ ಮಲ್ಲಣ್ಣ ಯಲಗೋಡ, ತಾಪಂ ಇಒ ಅಬ್ದುಲ್ ನಬಿ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ರಾಜು ಲೇಂಗಟಿ, ತಾಲೂಕು ಅಧ್ಯಕ್ಷ ಗುಡುಲಾಲ್ ಶೇಖ್, ಪ್ರಮುಖರಾದ ಡಾ. ಸಿದ್ದು ಪಾಟೀಲ್, ವೀರಣ್ಣ ಬೊಮ್ಮನಳ್ಳಿ, ಪೀರಪ್ಪ ಜಮಾದಾರ, ಬಸವರಾಜ ತೇಲ್ಕರ್, ವೀರಣ್ಣ ಹಾಲಶೆಟ್ಟಿ, ರುದ್ರಪ್ಪ ಚಟ್ನಳ್ಳಿ, ಅನಂತರೆಡ್ಡಿ ಚಾಮನಾಳ, ಡಿ.ಬಿ. ಪಾಟೀಲ್, ಗುರುಶಾಂತಪ್ಪ ಚಿಂಚೋಳಿ, ಶಂಬಣ್ಣ ಹೂಗಾರ, ಎಸ್.ಎಸ್. ಮಾಲಿಬಿರಾದಾರ, ಸೂರ್ಯಕಾಂತ ದ್ಯಾಮಗೊಂಡ, ಡಾ.ಶೋಭಾ ಸಜ್ಜನ್, ಭೀಮಸೇನ ಕುಲಕರ್ಣಿ, ಸುಮಂಗಲಾ ಹೂಗಾರ, ನಾನಾಗೌಡ ಕೂಡಿ, ಶಿವಾನಂದ ದಾನಮ್ಮಗುಡಿ, ಕಾಸಯ್ಯ ಗುತ್ತೇದಾರ್, ಮಹಾಂತಗೌಡ ಪಾಟೀಲ್, ಮರೆಪ್ಪ ಮೂಲಿಮನಿ, ಹಣಮಂತರಾಯ ಗೊಳಸಾರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts