More

    ಈ ಜಾತ್ರೆಯಲ್ಲಿ ದೇವರಿಗೆ ಇದೇ ನೈವೇದ್ಯ, ತೀರ್ಥ, ಪ್ರಸಾದ ಎಲ್ಲವೂ..!

    ಬಾಗಲಕೋಟೆ: ಇದೊಂದು ವಿಚಿತ್ರ ಜಾತ್ರೆ. ಈ ಜಾತ್ರೆಯಲ್ಲಿ ಎಲ್ಲವೂ ಮದ್ಯಮಯ. ದೇವರ ಮೂರ್ತಿಗೆ ಎಣ್ಣೆಯೇ ನೈವೇದ್ಯ. ಭಟ್ಟಿ ಸಾರಾಯಿಯಿಂದ ಹಿಡಿದು ಫಾರಿನ್ ಡ್ರಿಂಕ್ಸ್​ವರೆಗೆ ಎಲ್ಲ ರೀತಿಯ ಮದ್ಯವನ್ನೂ ಭಕ್ತರು ತಂದು ಇಲ್ಲಿ ದೇವರಿಗೆ ಅರ್ಪಿಸುತ್ತಾರೆ.

    ಹೌದು, ಇದು ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ತಾಲೂಕಿನ ಲಿಂಗಾಪುರದ ಕನಕರಾಯ ಹಾಗೂ ಕೆಲವಡಿಯ ಲಕ್ಷ್ಮೀರಂಗನಾಥ ದೇಗುಲಗಳಲ್ಲಿ ನೂರಾರು ವರ್ಷಗಳಿಂದ ನಡೆದು ಬಂದಿರುವ ಸಂಪ್ರದಾಯ. ಇಲ್ಲಿಗೆ ಬರುವ ಭಕ್ತರು ಕೈಯಲ್ಲಿ ಮದ್ಯದ ಬಾಟಲಿ, ಪೊಟ್ಟಣ ಹಿಡಿದುಕೊಂಡು ಬಂದರೂ ಯಾರೂ ಏನೂ ಹೇಳುವುದಿಲ್ಲ.

    ಇದನ್ನೂ ಓದಿ: ಮುತ್ತಲ್ಲೂ ಮೋಸ: ಐನೂರಕ್ಕೂ ಹೆಚ್ಚು ಮಂದಿಗೆ ವಂಚನೆ

    ಭಕ್ತರು ಇದಕ್ಕೆ ಮದ್ಯ ಎನ್ನುವುದಿಲ್ಲ, ಅವರ ಪಾಲಿಗೆ ಇದು ತೀರ್ಥ. ಪ್ರತಿ ವರ್ಷ ಹೋಳಿ ಹುಣ್ಣಿಮೆ ಬಳಿಕ ಈ ಜಾತ್ರೆ ನಡೆಯುತ್ತದೆ. ಲಕ್ಷ್ಮೀರಂಗನಾಥ ಹಾಗೂ ಕನಕರಾಯ ಇಬ್ಬರೂ ಸಹೋದರ ದೇವರು. ಮೊದಲು ಕನಕರಾಯನಿಗೆ ಭಕ್ತರು ಎಣ್ಣೆ ನೈವೇದ್ಯ ಅರ್ಪಿಸಿ ಅಲ್ಲಿ ಉತ್ಸವ ಮಾಡುತ್ತಾರೆ. ಅದಾದ ಮರುದಿನ ಲಕ್ಷ್ಮೀ ರಂಗನಾಥ ಜಾತ್ರೆ. ನಿನ್ನೆ ಕನಕರಾಯನ ಜಾತ್ರೆ ಮುಗಿದಿದ್ದು, ಇಂದು ರಂಗನಾಥನ ಜಾತ್ರೆ ನಡೆಯಲಿದೆ. ಕಳೆದ ಎರಡು ವರ್ಷ ಕೋವಿಡ್‌ನಿಂದಾಗಿ ಈ ಜಾತ್ರೆ ಅದ್ಧೂರಿಯಾಗಿ ನಡೆದಿರಲಿಲ್ಲ. ಈ ವರ್ಷ ಮತ್ತೆ ಈ ಜಾತ್ರೆಗೆ ಕಳೆ ಬಂದಿದೆ.

    ಅಭಿಮಾನಿಗಳಲ್ಲಿ ಕ್ಷಮೆ ಕೋರಿದ್ರು ಜೇಮ್ಸ್ ನಿರ್ಮಾಪಕ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts