More

  ನದಿಯಲ್ಲಿ ಮುಳುಗಿ ಇಬ್ಬರು ಸಾವು

  ಸವದತ್ತಿ: ತಾಲೂಕಿನ ಒಡಕಹೊಳಿ ಗ್ರಾಮದ ತಟದ ಕುಮಾರೇಶ್ವರ ಮಠದ ಬಳಿಯ ಮಲಪ್ರಭಾ ನದಿಯಲ್ಲಿ ಬುಧವಾರ ಸಂಕ್ರಾಂತಿ ಹಬ್ಬದ ದಿನದಂದು ಈಜಲು ಹೋಗಿದ್ದ ಇಬ್ಬರು ಯುವಕರು ಮೃತಪಟ್ಟಿದ್ದಾರೆ.
  ಕರೀಕಟ್ಟಿ ಗ್ರಾಮದ ಶಿವಪುತ್ರಪ್ಪ ಉಪ್ಪಾರ (21) ಹಾಗೂ ಮರೇವಾಡ ಗ್ರಾಮದ ರಾಜೇಸಾಬ್ ಮಕ್ತುಮಸಾಬ ಕರೀಕಟ್ಟಿ (36) ಮೃತ ವ್ಯಕ್ತಿಗಳು.

  ಹಬ್ಬವನ್ನು ಸಂಭ್ರಮಿಸಲು ಕುಟುಂಬಸ್ಥರು, ಗೆಳೆಯರೊಂದಿಗೆ ಒಡಕಹೊಳಿ ಗ್ರಾಮದ ಮಲಪ್ರಭಾ ನದಿಗೆ ತೆರಳಿದ್ದರು. ನದಿಯಲ್ಲಿ ಸ್ನಾನ ಮಾಡುವ ವೇಳೆ ನೀರಿನ ಆಳ ತಿಳಿಯದೇ ಮುಳುಗಿ ಮೃತಪಟ್ಟಿದ್ದಾರೆ. ಅಗ್ನಿ ಶಾಮಕದಳ ಅಧಿಕಾರಿ ಎಂ.ಕೆ.ಕಲಾದಗಿ ಹಾಗೂ ಸಿಬ್ಬಂದಿ ಎರಡೂವರೆ ಗಂಟೆಗಳ ಕಾಲ ನದಿಯಲ್ಲಿ ಶೋಧ ಕಾರ್ಯ ನಡೆಸಿ ಇಬ್ಬರ ಶವಗಳನ್ನೂ ಹೊರ ತೆಗೆದಿದ್ದಾರೆ. ಸವದತ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts