More

    ಮಳೆಯಲ್ಲೂ ಸಂಘಟನೆಗಳ ಧರಣಿ

    ಬೆಳಗಾವಿ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಮಳೆಯ ನಡುವೆಯೂ ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಜೀವದ ಹಂಗು ತೊರೆದು ಕರೊನಾ ಸೇನಾನಿಗಳಂತೆ ಕಾರ್ಯನಿರ್ವಹಿಸುತ್ತಿರುವ ಆಶಾ, ಅಂಗನವಾಡಿ ಕಾರ್ಯಕರ್ತೆಯರ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿ ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದ ವತಿಯಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.

    ಕರೊನಾ ನಿಯಂತ್ರಣಕ್ಕೆ ಹಗಲಿರುಳು ಶ್ರಮಿಸುತ್ತಿರುವ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಆರ್ಥಿಕ ಸಂಕಷ್ಟಕ್ಕೀಡಾಗಿದ್ದಾರೆ. ಸರ್ಕಾರ ಇವರಿಗೆ ಮಾಸಿಕ 15 ಸಾವಿರ ರೂ. ವೇತನದ ವಿಶೇಷ ಪ್ಯಾಕೇಜ್ ಘೋಷಿಸಬೇಕು. ಈಗಿರುವ ವೇತನದಲ್ಲಿ ಜೀವನ ಸಾಗಿಸುವುದು ದುಸ್ತರವಾಗಿದೆ. ಅದಕ್ಕಾಗಿ ಸರ್ಕಾರ ಅವರಿಗೆ ಆಹಾರ ಕಿಟ್ ಹಾಗೂ ವೇತನ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು. ಕರೊನಾ ಸಂದರ್ಭದಲ್ಲಿ ಶಿಕ್ಷಣ ಸಂಸ್ಥೆಗಳು ಆನ್‌ಲೈನ್ ಮೂಲಕ ಶಿಕ್ಷಣ ನೀಡುತ್ತಿವೆ.

    ಬಡಮಕ್ಕಳ ಬಳಿ ಲ್ಯಾಪ್‌ಟಾಪ್ ಇರದ ಕಾರಣ ಸಮಸ್ಯೆಯಾಗಿದೆ. ಸರ್ಕಾರ, ಬಡ ಮಕ್ಕಳನ್ನು ಗುರುತಿಸಿ ಉಚಿತ ಲ್ಯಾಪ್‌ಟಾಪ್ ನೀಡಬೇಕು. ಗುತ್ತಿಗೆ ಪೌರ ಕಾರ್ಮಿಕರನ್ನು ಕಾಯಂಗೊಳಿಸಬೇಕು. ವೃದ್ಧಾಪ್ಯ ವೇತನ ವಿಳಂಬ ಕುರಿತು ಅಧಿಕಾರಿಗಳು ಶೀಘ್ರ ಕ್ರಮಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು.

    ರಾಜು ಪಾಟೀಲ, ಕೆ.ಜಿ.ಪಾಟೀಲ, ಜ್ಯೋತಿಬಾ ಪಾಟೀಲ, ನಾರಾಯಣ ಬಿಸಗೊಪ್ಪಿ, ತುಕಾರಾಂ ಕಾಂಬಳೆ, ಸುರೇಂದ್ರ ತಾಳೂರಕರ್, ಸುರೇಂದ್ರ ಅನಗೋಳಕರ್ ಇತರರಿದ್ದರು. ಸಾಲ ಪಾವತಿಗೆ ಅವಕಾಶ ನೀಡಿ ಬೆಳಗಾವಿ: ನಾನಾ ಸಹಕಾರಿ ಸಂಘಗಳಿಂದ ಸಾಲ ಪಡೆದುಕೊಂಡ ಬಡವರು ಹಾಗೂ ನೇಕಾರ ಕಾರ್ಮಿಕರಿಗೆ ಸಾಲ ಮರು ಪಾವತಿಸಲು 6 ತಿಂಗಳು ಕಾಲಾವಕಾಶ ನೀಡುವಂತೆ ಆಗ್ರಹಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಜಿಲ್ಲಾ ನೇಕಾರರ ವೇದಿಕೆ ನೇತೃತ್ವದಲ್ಲಿ ಗುರುವಾರ
    ಪ್ರತಿಭಟನೆ ನಡೆಸಲಾಯಿತು.

    ಬಡ ಜನರು, ನೇಕಾರ ಕಾರ್ಮಿಕರು ಸಹಕಾರಿಗಳಲ್ಲಿ ಸಾಲ ಪಡೆದು ಕೊಂಡಿದ್ದಾರೆ. ಲಾಕ್‌ಡೌನ್‌ಗಿಂತ ಮೊದಲು ಕಾಲ, ಕಾಲಕ್ಕೆ ಸರಿಯಾಗಿ ಮಾಸಿಕ ಕಂತು ಪಾವತಿಸುತ್ತಿದ್ದರು. ಲಾಕ್‌ಡೌನ್‌ನಿಂದಾಗಿ ಸಾಲ ತೀರಿಸಲಾಗುತ್ತಿಲ್ಲ. ಇದನ್ನೇ ಮುಂದಿಟ್ಟುಕೊಂಡು ಕೆಲ ಸಹಕಾರಿಗಳು ಸಾಲ ವಸೂಲಿಗೆ ಬರುತ್ತಿವೆ. ಸಾಲ ಮರುಪಾವತಿಗೆ ಒತ್ತಡ ಹೇರುತ್ತಿವೆ. ಹೀಗಾಗಿ ಸಾಲ ವಸೂಲಿಗೆ ಒತ್ತಡ ಮಾಡುತ್ತಿರುವ ಸಂಸ್ಥೆಗಳ ಮೇಲೆ ಸೂಕ್ತ ಕ್ರಮಕೈಗೊಳ್ಳಬೇಕು.

    ಬಡವರು ಹಾಗೂ ನೇಕಾರ ಕಾರ್ಮಿಕರು ಪಡೆದ ಸಾಲದ ಬಡ್ಡಿಯನ್ನು ಮನ್ನಾ ಮಾಡಬೇಕು ಎಂದು ಮನವಿ ಮೂಲಕ ಆಗ್ರಹಿಸಿದರು. ಪರಶುರಾಮ ಢಗೆ, ಪಾಂಡುರಂಗ ದೋತರೆ,
    ರಾಘವೇಂದ್ರ ಭೋವಿ, ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts