More

    ಬೆಳಗಾವಿಯಲ್ಲಿ ಕರೊನಾ ವೈರಸ್‌ಗೆ ನಾಲ್ವರು ಬಲಿ

    ಬೆಳಗಾವಿ: ಜಿಲ್ಲೆಯಲ್ಲಿ ಕರೊನಾ ವೈರಸ್‌ಗೆ ಸೋಮವಾರ ಮತ್ತೆ ನಾಲ್ವರು ಬಲಿಯಾಗಿದ್ದಾರೆ. ಸೋಂಕಿಗೆ ಮೃತಪಟ್ಟವರ ಸಂಖ್ಯೆ ಒಟ್ಟಾರೆ 241ಕ್ಕೆ ಏರಿಕೆಯಾಗಿದೆ. ಬೆಳಗಾವಿ ನಗರದ ಮಾದ್ವಾ ರಸ್ತೆ ಮಾರ್ಗದ 72 ವರ್ಷದ ವೃದ್ಧ, ಬೆಳಗಾವಿ ತಾಲೂಕಿನ ಗೊಂಡವಾಡದ 60 ವರ್ಷದ ವೃದ್ಧ, ಗೋಕಾಕ ತಾಲೂಕಿನ 75 ವರ್ಷದ ವೃದ್ಧ ಹಾಗೂ ಬೈಲಹೊಂಗಲ ತಾಲೂಕಿನ 35 ವರ್ಷದ ಪುರುಷ ವೈರಸ್‌ಗೆ ಅಸುನೀಗಿದ್ದಾರೆ.

    ಜಿಲ್ಲೆಯಲ್ಲಿ ಸೋಮವಾರ ಮತ್ತೆ 167 ಜನರಿಗೆ ಕರೊನಾ ಸೋಂಕು ತಗುಲಿದೆ. ಚಿಕ್ಕೋಡಿ ತಾಲೂಕಿನಲ್ಲಿ 52, ಗೋಕಾಕ 26, ರಾಯಬಾಗ 24, ಬೆಳಗಾವಿ ನಗರ ಮತ್ತು ತಾಲೂಕಿನಲ್ಲಿ 23, ಸವದತ್ತಿ 20, ಖಾನಾಪುರ 12, ಹುಕ್ಕೇರಿ 5, ಅಥಣಿ 4, ಬೈಲಹೊಂಗಲ ತಾಲೂಕಿನಲ್ಲಿ 1 ಪ್ರಕರಣ ಪತ್ತೆಯಾಗಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 16,549ಕ್ಕೆ ಏರಿಕೆಯಾಗಿದೆ.

    252 ಜನರ ವರದಿ ಬಾಕಿ: 252 ಶಂಕಿತರ ಗಂಟಲು ದ್ರವದ ಮಾದರಿ ಪರೀಕ್ಷಾ ವರದಿ ಬಾಕಿಯಿದೆ. ಕರೊನಾ ವೈರಸ್‌ಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಇಲ್ಲಿಯವರೆಗೆ 1,23,871 ಜನರ ಮೇಲೆ ನಿಗಾ ವಹಿಸಲಾಗಿದೆ.

    27,688 ಜನರು 14 ದಿನ ಮನೆಯಲ್ಲಿ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. 31,085 ಜನ 14 ದಿನಗಳ ಕ್ವಾರಂಟೈನ್ ಪೂರ್ಣಗೊಳಿಸಿದ್ದಾರೆ. 65,098 ಜನ 28 ದಿನಗಳ ಕ್ವಾರಂಟೈನ್ ಪೂರ್ಣಗೊಳಿಸಿದ್ದಾರೆ. 1,22,575 ಜನರ ಗಂಟಲು ದ್ರವದ ಮಾದರಿಯನ್ನು ಸಂಗ್ರಹಿಸಲಾಗಿದೆ. 1,04,750 ಮಾದರಿಗಳು ನೆಗೆಟಿವ್ ಬಂದಿವೆ. 2,702 ಸಕ್ರಿಯ ಪ್ರಕರಣಗಳಿವೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts