More

    ನಗರದಲ್ಲಿ ಭಾರಿ ಗಾಳಿ-ಮಳೆ

    ಬೆಳಗಾವಿ: ನಗರದಲ್ಲಿ ಗುರುವಾರ ಮಧ್ಯಾಹ್ನ 3.15ರ ವೇಳೆಗೆ ಭಾರಿ ಗಾಳಿ ಸಹಿತ ಮಳೆ ಸುರಿದಿದೆ.
    ಮುಕ್ಕಾಲು ಗಂಟೆಯಷ್ಟು ಕಾಲ ಸುರಿದ ಗಾಳಿ ಮಳೆಯಿಂದಾಗಿ ಹಳೇ ಪಿ.ಬಿ. ರಸ್ತೆಯ ಮಾಲಿನಿ ಸಿಟಿಯಲ್ಲಿ ನಿರ್ಮಿಸಿದ್ದ ತಾತ್ಕಾಲಿಕ ತರಕಾರಿ ಮಾರುಕಟ್ಟೆ ಸಂಪೂರ್ಣ ಹಾಳಾಗಿದೆ. ಕರೊನಾ ವೈರಸ್ ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ತಾತ್ಕಾಲಿಕವಾಗಿ ಸಗಟು ತರಕಾರಿ ಮಾರುಕಟ್ಟೆ ನಿರ್ಮಿಸಲಾಗಿತ್ತು. ಮಳೆಯಿಂದ ಮಾರುಕಟ್ಟೆಗೆ ಹಾನಿಯಾದ ಕಾರಣ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

    ಶಿವಬಸವ ನಗರದಲ್ಲಿ ಮರ ಬಿದ್ದು, ಕೆಲ ಹೊತ್ತು ಕರೊನಾ ವೈರಸ್ ಸೇವಾ ಸಿಬ್ಬಂದಿ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ರಸ್ತೆಯ ತಗ್ಗು- ಗುಂಡಿಗಳು ಮಳೆ ನೀರಿನಿಂದ ತುಂಬಿದ್ದವು. ಮಳೆ-ಗಾಳಿಯ ರಭಸಕ್ಕೆ ನಗರದ ಜನ ಕೆಲ ಹೊತ್ತು ಆತಂಕಗೊಂಡಿದ್ದರು. ಮಳೆ ನಿಂತಾಗ ನಿಟ್ಟುಸಿರು ಬಿಟ್ಟರು.

    ಬಾವನಸೌಂದತ್ತಿಯಲ್ಲಿ ಆಲಿಕಲ್ಲು ಮಳೆ: ಗುರುವಾರ ಸುರಿದ ಆಲಿಕಲ್ಲು ಸಹಿತ ಮಳೆಯಿಂದ ತರಕಾರಿ, ಕಬ್ಬು, ಮುಸುಕಿನ ಜೋಳ, ಜೋಳ, ಇನ್ನಿತರ ಬೆಳೆಗಳು ನೆಲಕಚ್ಚಿವೆ. ಬಾವನಸೌಂದತ್ತಿ ಸೇರಿ ದಿಗ್ಗೇವಾಡಿ, ಕಂಚಕರವಾಡಿ, ಜಲಾಲಪುರ, ಭೀರಡಿ, ಚಿಂಚಲಿ ಮತ್ತಿತರ ಕಡೆ ಬಿರುಗಾಳಿ ಸಹಿತ ಭಾರಿ ಮಳೆ ಸುರಿದಿದೆ.

    ಬೋರಗಾಂವ ವರದಿ: ಬುಧವಾರ ರಾತ್ರಿ ಪಟ್ಟಣದಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಕೆಲ ಮನೆಗಳ ಪತ್ರಾಸ್‌ಗಳು ಗಾಳಿಗೆ ಹಾರಿಹೋಗಿವೆ. ಕಬ್ಬು, ಬಾಳೆಗಿಡಗಳು ನೆಲಕ್ಕುರುಳಿವೆ. ಸ್ಥಳಕ್ಕೆ ಗ್ರಾಮ ಲೆಕ್ಕಾಧಿಕಾರಿ ಉಮೇಶ ಕೋಳಿ, ಪಟ್ಟಣ ಪಂಚಾಯಿತಿ ಅಧಿಕಾರಿ ಪೋಪಟ ಕುರಳೆ ಭೇಟಿ ನೀಡಿ ಹಾನಿ ಪರಿಶೀಲಿಸಿದ್ದಾರೆ.

    ತೆಲಸಂಗ ವರದಿ: ಗ್ರಾಮ ಸೇರಿ ಸುತ್ತಮುತ್ತಲ ಗ್ರಾಮಗಳಲ್ಲಿ ಉತ್ತಮ ಮಳೆಯಾಗಿದೆ. ಬಿರುಗಾಳಿ ಸಹಿತ ಮಳೆಯಿಂದಾಗಿ ಅನೇಕ ಮನೆಗಳ ಪತ್ರಾಸ್ ಹಾಗೂ ಅಂಗಡಿಗಳಿಗೆ ಹಾಕಲಾಗಿದ್ದ ಪತ್ರಾಸ್ ಹಾರಿಹೋಗಿದೆ. ಒಣದ್ರಾಕ್ಷಿ ತಯಾರಿಕೆಯ ಶೆಡ್‌ನಲ್ಲಿ ಸಂಗ್ರಹಿಸಿಟಿದ್ದ ದ್ರಾಕ್ಷಿ ರಕ್ಷಿಸಲು ರೈತರು ಪರದಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts