More

    ಮಕ್ಕಳು ಬೇಡ, ಪೊಲೀಸರೇ ಅಂತ್ಯಕ್ರಿಯೆ ನೆರವೇರಿಸಲಿ; ಡೆತ್​ನೋಟ್​ ಬರೆದಿಟ್ಟು ಪಯಣ ಮುಗಿಸಿದ ದಂಪತಿ

    ಚೆನ್ನೈ: ಮಗ ಚಿತೆಗೆ ಬೆಂಕಿಯಿಟ್ಟರೆ ಮೋಕ್ಷ ಎಂಬುದು ಸನಾತನ ನಂಬಿಕೆ. ಇದಕ್ಕಾಗಿಯೇ ವಂಶೋದ್ದಾರಕ, ಮಗನೊಬ್ಬ ಇರಲಿ ಎಂಬುದು ಬಹುತೇಕರ ಪಾಲಕರ ಆಸೆಯಾಗಿರುತ್ತದೆ.

    ಮೂರು ಗಂಡುಮಕ್ಕಳಿದ್ದರೂ ಕೂಡ ಮಕ್ಕಳು ಬೇಡ, ಪೊಲೀಸರೇ ನಮ್ಮ ಅಂತ್ಯಕ್ರಿಯೆ ನೆರವೇರಿಸಲಿ ಎಂದು ಎರಡು ಹಿರಿಯ ಜೀವಗಳು ಡೆತ್​ನೋಟ್​ ಬರೆದಿಟ್ಟು ಇಹಲೋಕ ತೊರೆದಿದ್ದಾರೆ.

    ಇದನ್ನೂ ಓದಿ; ಕರೊನಾ ಭಯವೇ ಇವರಿಗೆ ಬಂಡವಾಳ; ಮನೆಗೆ ಬರೋರ ಬಗ್ಗೆ ಇರಲಿ ಎಚ್ಚರ..! 

    ಸೆಂಬಿಯನ್​ ಪೊಲೀಸ್​ ಠಾಣೆ ಸಮೀಪದ ಪ್ರದೇಶದಲ್ಲಿ ಗುಣಶೇಖರನ್​ (65) ಸೆಲ್ವಿ (58) ನೆಲೆಸಿದ್ದರು. ಗುಣಶೇಖರನ್​ ಸಮೀಪದ ಟೆನಿಸ್​ ಕೋರ್ಟ್​ನಲ್ಲಿ ಸೆಕ್ಯುರಿಟಿಯಾಗಿದ್ದರು. ಆದರೆ, ಲಾಕ್​ಡೌನ್​ ಕಾರಣದಿಂದಾಗಿ ಕೆಲಸ ಕಳೆದುಕೊಂಡಿದ್ದರು.

    ಇವರ ಮೂರು ಮಕ್ಕಳಲ್ಲಿ ಇಬ್ಬರಿಗೆ ಮದುವೆಯಾಗಿದ್ದು, ನಗರದ ಇನ್ನೊಂದು ಭಾಗದಲ್ಲಿ ನೆಲೆಸಿದ್ದಾರೆ. ಮೂರನೆ ಮಗ ನಿರುದ್ಯೋಗಿಯಾಗಿದ್ದು, ಕುಡಿಯಲು ಇವರಿಂದಲೇ ಹಣ ಕಸಿದುಕೊಳ್ಳುತ್ತಿದ್ದ. ಆರ್ಥಿಕ ಸಂಕಷ್ಟದಿಂದ ಕಂಗೆಟ್ಟಿದ್ದ ದಂಪತಿ ಸಹಾಯಕ್ಕಾಗಿ ಮಕ್ಕಳ ಬಳಿ ಕೈಚಾಚಿದ್ದರು. ಯಾರೂ ನೆರವು ನೀಡದಿದ್ದಾಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಇದನ್ನೂ ಓದಿ; ಮಾತಿನಲ್ಲಿಯೇ ಪಾಲಿಕೆ ಅಧಿಕಾರಿಗಳ ಬೆವರಿಳಿಸಿದ ಬೀದಿಬದಿ ವ್ಯಾಪಾರಿ; ಅಸಡ್ಡೆ ಬೇಡ ಈಕೆ ಪಿಎಚ್​ಡಿ ಪದವೀಧರೆ..!

    ಮನೆಗೆ ಬಂದ ಪೊಲೀಸರಿಗೆ ದಂಪತಿಯ ಡೆತ್​ನೋಟ್​ ಸಿಕ್ಕಿದೆ. ನಮ್ಮ ಸಾವಿಗೆ ಯಾರೂ ಕಾರಣರಲ್ಲ, ಪೊಲೀಸರೇ ನಮ್ಮ ಅಂತ್ಯಕ್ರಿಯೆ ನೆರವೇರಿಸಲಿ. ಇದು ನಮ್ಮ ಕೊನೆಯಾಸೆ ದಯವಿಟ್ಟು ಪರಿಗಣಿಸಿ ಎಂದು ಅದರಲ್ಲಿ ಬರೆದಿಟ್ಟಿದ್ದರು. ಅವರ ಆಸೆಯಂತೆ ಪೊಲೀಸರೇ ಎಲ್ಲ ಗೌರವದೊಂದಿಗೆ ಅಂತಿಮ ವಿಧಿವಿಧಾನ ಮುಗಿಸಿದ್ದಾರೆ.

    ತುರ್ತು ಬಳಕೆಗೆ ಭಾರತದಲ್ಲಿ ರೆಡಿಯಾಗಿದೆ ಕರೊನಾ ಲಸಿಕೆ; ಏಷ್ಟಿರಲಿದೆ ಬೆಲೆ ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts