More

    ವಾರದ ಸಂತೆಗೆ ಅವಕಾಶ ನೀಡಲು ಆಗ್ರಹ

    ಶಿಗ್ಗಾಂವಿ: ವಾರದ ಸಂತೆ ನಡೆಸಲು ಅನುಮತಿ ನೀಡುವಂತೆ ಆಗ್ರಹಿಸಿ ವ್ಯಾಪಾರಸ್ಥರು ಹಾಗೂ ರೈತರು ತಹಸೀಲ್ದಾರ್ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.

    ಸವಣೂರ ಸೇರಿ ತಾಲೂಕಿನ ಬಂಕಾಪುರ, ದುಂಡಸಿ, ಹುಲಗೂರ, ತಡಸ ಸೇರಿ ತಾಲೂಕಿನ ಬಹುತೇಕ ಪಟ್ಟಣಗಳಲ್ಲಿ ಸಂತೆ ನಡೆದರೂ ಕ್ರಮ ಕೈಗೊಳ್ಳದ ತಹಸೀಲ್ದಾರರು ಶಿಗ್ಗಾಂವಿ ಸಂತೆಯನ್ನು ಮಾತ್ರ ಬಂದ್ ಮಾಡಿಸಿ ವಾರದ ಸಂತೆ ವಿಚಾರದಲ್ಲಿ ಇಬ್ಬಗೆ ನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದರು.

    ತಹಸೀಲ್ದಾರ್ ಪ್ರಕಾಶ ಕುದರಿ ಪ್ರತಿಕ್ರಿಯಿಸಿ, ಸರ್ಕಾರದ ಆದೇಶದ ಮೇರೆಗೆ ಈ ಹಿಂದಿನ ಲಾಕ್​ಡೌನ್ ಮಾರ್ಗಸೂಚಿಯನ್ನು ಯಥಾವತ್ತಾಗಿ ನ. 30 ವರೆಗೆ ವಿಸ್ತರಿಸಲು ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ. ಆದ್ದರಿಂದ ಸರ್ಕಾರದ ಮುಂದಿನ ಆದೇಶ ಬರುವವರೆಗೂ ವಾರದ ಸಂತೆಗೆ ಅನುಮತಿ ನೀಡುವುದಿಲ್ಲ. ನಾನು ಸರ್ಕಾರದ ನಿಯಮ ಪಾಲನೆ ಮಾಡುತ್ತಿದ್ದೇನೆ. ಈ ಬಗ್ಗೆ ನಿಮಗೆ ಅಸಮಾಧಾನ ಇದ್ದರೆ ನೀವು ನ್ಯಾಯಾಲಯದ ಮೊರೆ ಹೋಗಿ ಎಂದರು.

    ಕೆಲ ಕಾಲ ಅಲ್ಲಿಯೇ ಪ್ರತಿಭಟನೆ ನಡೆಸಿದ ಸಾರ್ವಜನಿಕರು ಸಂತೆ ಮೈದಾನಕ್ಕೆ ಬಂದು ಸಂತೆ ಹಚ್ಚಲು ಮುಂದಾದರು. ಆದರೆ, ಪೊಲೀಸರು ಅದಕ್ಕೆ ಅವಕಾಶ ನೀಡದೆ ಸಂತೆ ಮೈದಾನದಲ್ಲಿ ಜಮಾವಣೆಯಾಗಿದ್ದ ರೈತರ ಮತ್ತು ವ್ಯಾಪಾರಸ್ಥರ ವಾಹನಗಳನ್ನು ತೆರವುಗೊಳಿಸಿದರು. ಸಂಜೆಯವರೆಗೂ ಸಂತೆ ಮೈದಾನಕ್ಕೆ ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts