ಕೊಪ್ಪ: ಎಂ.ಎಸ್.ದ್ಯಾವೇಗೌಡ ಸ್ಮಾರಕ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಭಾನುವಾರ ತಹಸೀಲ್ದಾರ್ ಮಂಜುಳಾ ಬಿ.ಹೆಗಡಾಳ ಅವರು ಪಲ್ಸ್ ಪೋಲಿಯೋಗೆ ಚಾಲನೆ ನೀಡಿದರು.
ತಾಲೂಕಿನಲ್ಲಿ 5 ವರ್ಷದೊಳಗಿನ 5,481 ಮಕ್ಕಳು ಇದ್ದು, 98 ಪೋಲಿಯೋ ಬೂತ್ ಸ್ಥಾಪಿಸಲಾಗಿದೆ. 428 ವ್ಯಾಕ್ಸಿನೇಟರ್‌ಗಳ ಮೂಲಕ ಲಸಿಕೆ ಹಾಕಲಾಗುತ್ತಿದೆ. 21 ಮಂದಿ ಮೇಲ್ವಿಚಾರಕರು ಕಾರ್ಯನಿರ್ವಹಿಸಿದರು. ತಾಲೂಕು ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಧಿಕಾರಿ ಡಾ. ಸಂದೀಪ್, ಪಂಚಾಯಿತಿ ಸದಸ್ಯರಾದ ಮೈತ್ರಾ ಗಣೇಶ್, ಗಾಯತ್ರಿ ಎ.ಶೆಟ್ಟಿ, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಸುಧಾಕರ್ ಇದ್ದರು.