More

    ಕಾಯಕದಲ್ಲಿ ತೊಡಗಿದರೆ ಬದುಕು ಸದೃಢ

    ಬೈಲಹೊಂಗಲ: ದೇವಸ್ಥಾನದಲ್ಲಿ ಜರುಗುವ ಧಾರ್ಮಿಕ ಕೈಂಕರ್ಯಗಳು ಶಾಂತಿಯುತ ಜೀವನಕ್ಕೆ ದಾರಿಯಾಗಿವೆ ಎಂದು ಧಾರವಾಡ ಮನಸೂರ ಮಠದ ಡಾ.ಬಸವರಾಜ ದೇವರು ಹೇಳಿದರು.

    ಸಮೀಪದ ಬೂದಿಹಾಳ ಗ್ರಾಮದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಬೀರೇಶ್ವರ ಮೂರ್ತಿ ಪ್ರತಿಷ್ಠಾಪನೆ, ದೇವಸ್ಥಾನ ಕಳಸಾರೋಹಣ ಹಾಗೂ ಉದ್ಘಾಟನೆ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಕಾಯಕದಲ್ಲಿ ತೊಡಗಿದಾಗ ಮಾತ್ರ ನಮ್ಮ ಬದುಕು ಸದೃಢಗೊಳ್ಳಲಿದೆ ಎಂದರು.

    ದೊಡವಾಡ ಹಿರೇಮಠದ ಜಡಿಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಹಿಂದು ಪರಂಪರೆಯಲ್ಲಿ ದೇವಸ್ಥಾನಗಳಿಗೆ ಪವಿತ್ರ ಸ್ಥಾನ ನೀಡಲಾಗಿದ್ದು, ಎಲ್ಲರೂ ಒಗ್ಗೂಡಿ ಬೀರೇಶ್ವರ ದೇವಸ್ಥಾನ ನಿರ್ಮಿಸಿದ್ದು ಸಂತಸದ ವಿಷಯ ಎಂದರು.

    ಅರಬಾವಿ ದುರದುಂಡೇಶ್ವರ ಸಿದ್ಧಸಂಸ್ಥಾನ ಮಠದ ಜಗದ್ಗುರು ಗುರುಬಸವಲಿಂಗ ಸ್ವಾಮೀಜಿ ಮೂರ್ತಿ ಪ್ರಾಣ ಪ್ರತಿಷ್ಠಾಪಿಸಿದರು. ಏಣಗಿ ಹೂಲಿ ಬಂಗಾರಜ್ಜನ ಮಠದ ವಿರೂಪಾಕ್ಷ ಸ್ವಾಮೀಜಿ, ಚನ್ನಬಸಯ್ಯ ಮಠದ ಸಾನ್ನಿಧ್ಯ ವಹಿಸಿದ್ದರು.

    ಬೀರೇಶ್ವರ ಸೇವಾ ಸಮಿತಿ ಅಧ್ಯಕ್ಷ ದುಂಡೇಶ ಗರಗದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

    ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ, ಕಾಂಗ್ರೆಸ್ ಮುಖಂಡ ಬಸವರಾಜ ಕೌಜಲಗಿ, ಜೆಡಿಎಸ್ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ, ವಿಜಯಕುಮಾರ ದಳವಾಯಿ, ವಿಜಯಕುಮಾರ ಎಂ., ರುದ್ರಯ್ಯ ರೊಟ್ಟಯ್ಯನವರ, ಬಸವರಾಜ ಬಿಲ್ಲಶಿವನ್ನವರ, ಬಾಬು ಹುದ್ದಾರ, ಡಾ. ದೇವೆಂದ್ರ ಗರಗದ, ಚನ್ನಬಸಪ್ಪ ಮೊಕಾಶಿ, ಅಜ್ಜಪ್ಪ ದೊಡ್ಡಕುರಬರ, ಜನಕರಾಜ ಪಾಟೀಲ, ರಾಜಶೇಖರ ಮಠದ, ಬಸಪ್ಪ ಚಚಡಿ, ಚನ್ನಬಸಪ್ಪ ಸೊಗಲದ, ಪಾಂಡುರಂಗ ಹೊಸೂರ ಇತರರಿದ್ದರು. ಅನ್ನಪ್ರಸಾದ ಜರುಗಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts