More

    ಕಬಡ್ಡಿಯಲ್ಲಿ ಸಿಐಎಸ್‌ಎಫ್ ತಂಡ ಚಾಂಪಿಯನ್

    ಘಟಪ್ರಭಾ: ಸಮೀಪದ ಕೊಣ್ಣೂರ- ಮರಡಿಮಠದ ಶ್ರೀ ಕಾಡಸಿದ್ದೇಶ್ವರ ಜಾತ್ರೆ ಅಂಗವಾಗಿ ಕರ್ನಾಟಕ ಕಬಡ್ಡಿ ಅಮೆಚೂರ್ ಫೆಡರೇಷನ್ ಸಹಯೋಗದಲ್ಲಿ ಡಾ. ಪವಾಡೇಶ್ವರ ಸ್ವಾಮೀಜಿ ಸಾರಥ್ಯದಲ್ಲಿ ಸೋಮವಾರ ಆಯೋಜಿಸಿದ್ದ ಅಖಿಲ ಭಾರತ ಮಹಿಳಾ ಕಬಡ್ಡಿ ಪಂದ್ಯಾವಳಿ ಪ್ರೇಕ್ಷಕರನ್ನು ರಂಜಿಸಿತು.

    ಮರಡಿಮಠದ ಕಾಡಸಿದ್ದೇಶ್ವರ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ನಡೆದ ರಾಷ್ಟ್ರೀಯ ಮಹಿಳಾ ಕಬಡ್ಡಿ ಪಂದ್ಯಾವಳಿಯಲ್ಲಿ ದೇಶದ ಪ್ರತಿಷ್ಠಿತ 12 ಮಹಿಳಾ ಕಬಡ್ಡಿ ತಂಡಗಳು ಭಾಗವಹಿಸುವ ಮೂಲಕ ಒಟ್ಟು 34 ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು. ಸಿಐಎಸ್‌ಎಫ್ ಮತ್ತು ಈಸ್ಟರ್ನ್ ರೈಲ್ವೆ ಮಧ್ಯೆ ನಡೆದ ಫೈನಲ್ ಪಂದ್ಯದಲ್ಲಿ ಸಿಐಎಸ್‌ಎಫ್ ತಂಡ ಗೆಲುವು ಸಾಧಿಸಿತು.

    ರೈಲ್ವೇಸ್ ತಂಡ ದ್ವಿತೀಯ ಮತ್ತು ಚಿಂಚಲಿ ಜೈ ಮಹಾಕಾಳಿ ತಂಡ ತೃತೀಯ ಸ್ಥಾನ ಪಡೆದುಕೊಂಡವು. ವೈಯಕ್ತಿಕ ಸಾಧಕರು ಹಾಗು ವಿಜೇತ ತಂಡಗಳಿಗೆ ವಿವಿಧ ಮಠಾಧೀಶರು ಬಹುಮಾನ ಮತ್ತು ಪ್ರಶಸ್ತಿ ಪತ್ರ ವಿತರಿಸಿದರು. ಕಬಡ್ಡಿ ಪಂದ್ಯಾವಳಿ ನೋಡಲು ಸಾವಿರಾರು ಸಂಖ್ಯೆಯಲ್ಲಿ ಜನರು ಸೇರಿದ್ದರು. ಮಹಿಳಾ ಕಬಡ್ಡಿಗೆ ಇನ್ನಷ್ಟು ಉತ್ತೇಜನ ನೀಡಬೇಕೆಂಬ ಕಾರಣದಿಂದ ಶ್ರೀಗಳು ರಾಷ್ಟ್ರ ಮಟ್ಟದ ಕಬಡ್ಡಿ ಪಂದ್ಯಾವಳಿ ಹಮ್ಮಿಕೊಂಡು ಗ್ರಾಮೀಣ ಕ್ರೀಡೆ ಪ್ರೋತ್ಸಾಹಿಸುತ್ತಿದ್ದಾರೆ ಎಂದು ಸ್ಥಳಿಯ ಕ್ರೀಡಾ ಪ್ರೇಮಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts