More

    ತಿಪ್ಪೆಗುಂಡಿಯಲ್ಲಿ ನವಜಾತ ಶಿಶು ಪತ್ತೆ

    ಹಾನಗಲ್ಲ: ತಾಲೂಕಿನ ಕಂಚಿನೆಗಳೂರ ಗ್ರಾಮದಲ್ಲಿ ಇತ್ತೀಚೆಗೆ ಯಾರೋ ಅಪರಿಚಿತರು ತಿಪ್ಪೆಗುಂಡಿಯಲ್ಲಿ ಒಂದು ದಿನದ ನವಜಾತ ಗಂಡು ಶಿಶು ಎಸೆದು ಹೋಗುವ ಮೂಲಕ ಅಮಾನವೀಯತೆ ಮೆರೆದಿದ್ದಾರೆ.
    ವಿಷಯ ತಿಳಿದ ಸಮುದಾಯ ಆರೋಗ್ಯ ತಜ್ಞರು ಹಾನಗಲ್ಲ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದರು. ನಂತರ ದತ್ತು ಕೇಂದ್ರದ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಮಗುವನ್ನು ವಶಕ್ಕೆ ಪಡೆದರು. ವೈದ್ಯರ ಸಲಹೆ ಮೇರೆಗೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
    ಮಗುವಿನ ಜೈವಿಕ ಪಾಲಕರಿಗೆ ಮಾನವಿಯತೆಯ ಆಧಾರದ ಮೇಲೆ ಮತ್ತೊಮ್ಮೆ ಮಗುವನ್ನು ಮರಳಿ ಪಡೆಯಲು ಕೊನೆಯ ಅವಕಾಶ ಇದೆ. ಈ ಪ್ರಕಟಣೆಯ 60 ದಿನಗೊಳಗಾಗಿ ಮಗುವಿನ ಜೈವಿಕ ಪಾಲಕರಿಗೆ ಮಗು ಪಡೆಯಲು ಕೊನೆಯ ಅವಕಾಶವಿದೆ. ಸೂಕ್ತ ದಾಖಲಾತಿಯೊಂದಿಗೆ ಸ್ಪಂದನಾ ವಿಶೇಷ ದತ್ತು ಸಂಸ್ಥೆ ಹಾವೇರಿ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾವೇರಿ ಕಚೇರಿಗೆ ಬರದೇ ಇದ್ದಲ್ಲಿ ಮಗುವಿನ ಮುಂದಿನ ಭವಿಷ್ಯದ ಹಿತದೃಷ್ಠಿಯಿಂದ ಮಗುವನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯಲ್ಲಿ ಪರಿತ್ಯಕ್ತ ಮಗುವೆಂದು ಎಂದು ಪರಿಗಣಿಸಿ ಕಾನೂನಿನ್ವಯ ದತ್ತು ಪ್ರಕ್ರಿಯೆಗೆ ಒಳಪಡಿಸಲಾಗುವುದು ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಅನ್ನಪೂರ್ಣ ಸಂಗಳದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts