More

    ಹಿರೇಬನ್ನಿಮಟ್ಟಿಯಲ್ಲಿ ಹಾವು ಕಚ್ಚಿ ಮಹಿಳೆ ಸಾವು

    ಹೂವಿನಹಡಗಲಿ: ತಾಲೂಕಿನ ಹಿರೇಬನ್ನಿಮಟ್ಟಿ ಗ್ರಾಮದ ಮಹಿಳೆಗೆ ಹಾವು ಕಚ್ಚಿ ಚಿಕಿತ್ಸೆ ದೊರಕದೆ ಸಾವನಪ್ಪಿರುವ ಘಟನೆ ಭಾನುವಾರ ನಡೆದಿದೆ.

    ಈರಣ್ಣ ಕಂಚಿಕೇರಿ ಎಂಬುವವರ ಜಮೀನಿನಲ್ಲಿ ಘಟನೆ

    ಹಿರೇಬನ್ನಿಮಟ್ಟಿ ಗ್ರಾಮದ ಈರಣ್ಣ ಕಂಚಿಕೇರಿ ಎಂಬುವವರ ಜಮೀನಿನಲ್ಲಿ ಗ್ರಾಮದ ವೀಣಾ ಲಿಂಗನಗೌಡ್ರು 26 ವರ್ಷದ ಮಹಿಳೆ ಭಾನುವಾರ ಮೆಕ್ಕೆಜೋಳದ ತೆನೆ ಮುರಿಯುತ್ತಿರುವ ಸಂದರ್ಭದಲ್ಲಿ ಕಾಲಿಗೆ ಹಾವು ಕಚ್ಚಿದೆ. ಸ್ಥಳದಲ್ಲಿದ್ದವರು ಕೂಡಲೇ ಮಹಿಳೆಯನ್ನು ಹೊಳಲು ಗ್ರಾಮದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಆಲ್ಲಿ ಸೂಕ್ತವಾದ ಚಿಕಿತ್ಸೆ ಸಲಕರಣೆ ಮತ್ತು ವೈದ್ಯರು ಇಲ್ಲದ ಕಾರಣ ಮಹಿಳೆಯನ್ನು ಹಾವೇರಿ ಜಿಲ್ಲೆಯ ಗುತ್ತಲ ಗ್ರಾಮದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವಾಗ ಮಾರ್ಗ ಮಧ್ಯದಲ್ಲಿಯೇ ಮಹಿಳೆ ಮೃತಪಟ್ಟಿದ್ದಾಳೆ.

    ಇದನ್ನೂ ಓದಿ: ಸೋಮಸಾಗರ ಗ್ರಾಮದಲ್ಲಿ ಹಾವು ಕಚ್ಚಿ ಮಹಿಳೆ ಸಾವು

    ಹೊಳಲು ಸರ್ಕಾರಿ ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ

    ಹೊಳಲು ಸರ್ಕಾರಿ ಆಸ್ಪತ್ರೆಯಲ್ಲಿ ಸಿಬ್ಬಂದಿಗಳು ಇಲ್ಲದೆ ರೋಗಿಗಳು ಪರದಾಡುವಂತಾಗಿದೆ. ಕೆಲ ಸಂದರ್ಭದಲ್ಲಿ ಸೂಕ್ತ ಚಿಕಿತ್ಸೆ ದೊರಕದೆ ಅನೇಕರು ದೂರದ ಊರುಗಳಿಗೆ ತೆರಳುವಂತಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತ ಪಡಿಸಿದರು. ಮೃತ ಮಹಿಳೆಗೆ ಪತಿ ನಾಗರಾಜ ಲಿಂಗನಗೌಡ್ರ 4 ಮತ್ತು 2 ವರ್ಷದ ಇಬ್ಬರು ಹೆಣ್ಣು ಮಕ್ಕಳು ಹಾಗೂ 3 ವರ್ಷದ ಗಂಡು ಮಗು ಇದ್ದಾರೆ. ಈ ಕುರಿತು ಹಿರೇಹಡಗಲಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts