More

    ಬಿಸಿಯೂಟದಲ್ಲಿ ಸಿಕ್ತು ಹುಳ: ಅನ್ನ-ಸಾಂಬಾರಿನಲ್ಲಿ ಮೇಲೆಯೇ ಹರಿದಾಡುತ್ತಿದ್ದರೂ ತಿನ್ನಿ ಎಂದು ಮಕ್ಕಳಿಗೆ ಒತ್ತಾಯಿಸಿದ ಶಿಕ್ಷಕರಿಗೆ ಪೋಷಕರಿಂದ ಕ್ಲಾಸ್​​

    ವಿಜಯನಗರ: ಶಾಲಾ ಮಕ್ಕಳಿಗೆ ಉತ್ತಮ ಪೌಷ್ಟಿಕಾಂಶ ಒದಗಿಸುವ ದೃಷ್ಟಿಯಿಂದ ಸರ್ಕಾರ ಜಾರಿಗೊಳಿಸಿರುವ ಬಿಸಿಯೂಟ ಯೋಜನೆಯಲ್ಲಿ ಆಗ್ಗಾಗ್ಗೆ ಆರೋಪಗಳು ಕೇಳಿ ಬರುತ್ತಲೇ ಇದ್ದು, ಈವರೆಗೂ ಪೂರ್ಣ ಮಟ್ಟಿಗೆ ಸುಧಾರಣೆಯಾಗಿಲ್ಲ ಎಂಬುದಕ್ಕೆ ಇಲ್ಲೊಂದು ಘಟನೆ ಸಾಕ್ಷಿಯಾಗಿದೆ.

    ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ದೇವಲಾಪುರ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ನೀಡಲಾಗಿರುವ ಬಿಸಿಯೂಟದಲ್ಲಿ ಹುಳಗಳು ಪತ್ತೆಯಾಗಿದ್ದು, ಇದು ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ.

    ತಟ್ಟೆಯಲ್ಲಿ ಹಾಕಿದ ಅನ್ನ-ಸಾಂಬಾರಿನಲ್ಲಿ ಹುಳ ಮೇಲೆ ಕಾಣುತ್ತಿದ್ದರೂ, ಮಕ್ಕಳಿಗೆ ಊಟ ಮಾಡಿ ಎಂದು ಶಿಕ್ಷಕರು ಒತ್ತಾಯಿಸಿದ್ದಾರೆ ಎಂದು ಆರೋಪಿಸಿದ ಪೋಷಕರು ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

    ಇದೇ ವಿಚಾರವಾಗಿ ಪೋಷಕರು ಹಾಗೂ ಶಿಕ್ಷಕರ ನಡುವೆ ಕೆಲಕಾಲ ವಾಗ್ವಾದ ಉಂಟಾಯಿತು. ಮಧ್ಯಪ್ರವೇಶಿಸಿದ ಪೊಲೀಸರು ಪರಿಸ್ಥಿತಿಯನ್ನು ಶಾಂತಗೊಳಿಸಿದರು. ಅಲ್ಲದೇ ಶುಚಿತ್ವ ಕಾಪಾಡಲು ಶಿಕ್ಷಕರಿಗೆ ತಾಕೀತು ಮಾಡಿದ್ದಾರೆ. (ದಿಗ್ವಿಜಯ ನ್ಯೂಸ್​)

    ವಿಶ್ವದ ಶ್ರೀಮಂತ ಹಳ್ಳಿಗಳಲ್ಲಿ ಭಾರತದ ಈ ಗ್ರಾಮಕ್ಕಿದೆ ಸ್ಥಾನ: ಪ್ರತಿಯೊಬ್ಬರ ಖಾತೆಯಲ್ಲಿದೆ 15 ಲಕ್ಷ ರೂ.ಹಣ!

    ಹೆಚ್ಚಾಯ್ತು ಪುಂಡರ ಹಾವಳಿ,ಮಧ್ಯರಾತ್ರಿ ಬಿಯರ್ ಬಾಟಲಿಯಿಂದ ಬೇಕರಿ ಮಾಲೀಕನ ಮೇಲೆ ಹಲ್ಲೆ: ದೃಶ್ಯ ಸಿಸಿಟಿವಿಯಲ್ಲಿ ಸೆರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts