More

    ಡ್ರಗ್ಸ್ ಆಯ್ತು.. ಇನ್ನು ಬೆಂಗಳೂರಿನಲ್ಲಿ ಹುಕ್ಕಾಬಾರ್‌ಗಳ ವಿರುದ್ಧ ಸಮರ!

    ಬೆಂಗಳೂರು: ರಾಜ್ಯದಲ್ಲಿ ಕಳೆದ ಕೆಲವು ತಿಂಗಳುಗಳಿಂದ ಡ್ರಗ್ಸ್ ಜಾಲದ ವಿರುದ್ಧ ತೀವ್ರ ಕ್ರಮಕ್ಕೆ ಮುಂದಾಗಿದ್ದ ಪೊಲೀಸರು ಇನ್ನು ಮುಂದೆ ರಾಜಧಾನಿಯಲ್ಲಿರುವ ಹುಕ್ಕಾ ಬಾರ್‌ಗಳ ಮೇಲೆ ಸಮರ ಸಾರಲಿದ್ದಾರೆ.

    ‘‘ಹುಕ್ಕಾ ಬಾರ್‌ಗಳನ್ನು ನಿಷೇಧಿಸುವ ಬಗ್ಗೆ ಗಂಭೀರ ಪರಿಶೀಲನೆ ನಡೆಸಿದ್ದೇವೆ. ಅಗತ್ಯವಾದರೆ ಇದಕ್ಕೆ ಸಂಬಂಧಿಸಿದಂತೆ ಹೊಸ ಕಾನೂನು ಕೂಡ ತರುತ್ತೇವೆ’’ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ವಿಧಾನಸಭೆಯಲ್ಲಿ ಮಂಗಳವಾರ ಕಾಂಗ್ರೆಸ್‌ನ ಸೌಮ್ಯ ರೆಡ್ಡಿ ಅವರ ಪ್ರಶ್ನೆಗೆ ಉತ್ತರಿಸುತ್ತ ತಿಳಿಸಿದ್ದಾರೆ.

    ‘‘ಬೆಂಗಳೂರು ಸೇರಿ ವಿವಿಧ ದೊಡ್ಡ ನಗರಗಳಲ್ಲಿ ಹುಕ್ಕಾ ಬಾರ್‌ಗಳು ಇವೆ. ಇವು ಸ್ಥಳೀಯ ಸಂಸ್ಥೆಗಳಿಂದ ಅನುಮತಿ ಪಡೆಯುತ್ತವೆ. ನಾವು ಆಗಿಂದಾಗ್ಗೆ ರೈಡ್ ಮಾಡುತ್ತೇವೆ, ಕೇಸ್ ಹಾಕುತ್ತೇವೆ. ಅದರಿಂದ ಏನೂ ಪ್ರಯೋಜನ ಆಗುತ್ತಿಲ್ಲ. ಹುಕ್ಕಾ ಬಾರ್ ಬಗ್ಗೆ ಯುವಕರು ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಬೇರೆ ರಾಜ್ಯಗಳಲ್ಲಿ ಕೈಗೊಂಡ ಕ್ರಮ ಅಧ್ಯಯನ ಮಾಡಿ, ಅವುಗಳನ್ನು ನಿಷೇಧಿಸಲು ಪರಿಶೀಲಿಸುತ್ತೇವೆ. ಇದಕ್ಕೆ ಬಿಬಿಎಂಪಿ ಸಹಕಾರ ಬೇಕಾಗುತ್ತದೆ. ಅವರ ಜತೆ ಚರ್ಚೆ ಮಾಡಿ ಕಾನೂನು ಜಾರಿ ಮಾಡುತ್ತೇವೆ’’ ಎಂದರು.

    ಇದನ್ನೂ ಓದಿ: ಸೆಕ್ಸ್​ ಮಾಡುವಾಗ ಉಸಿರುಗಟ್ಟಿ ಸತ್ತೇ ಹೋದಳು… ಬ್ಯಾಚಲರ್​ ಮನೆಯಲ್ಲಿ ವಿವಾಹಿತೆ ಸಾವು!

    ‘‘ಇದರ ಜತೆ ಡ್ರಗ್ಸ್ ವಿರುದ್ಧದ ಅಭಿಯಾನ ಮುಂದುವರಿಸುತ್ತೇವೆ, ಗೃಹ ಸಚಿವನಾಗಿ ನಾನು ಎಲ್ಲಿಯವರೆಗೆ ಇರುತ್ತೇನೋ ಅಲ್ಲಿಯವರೆಗೆ ನಿರಂತರವಾಗಿ ನಡೆಸುತ್ತೇನೆ. ಈ ಜಾಲದಲ್ಲಿ ಸಿಕ್ಕಿಬಿದ್ದವರು ಎಷ್ಟೇ ಪ್ರಭಾವಿ ಆಗಿದ್ದರೂ ಕ್ಷಮೆ ಇಲ್ಲ. ಎಷ್ಟೋ ವರ್ಷದ ಜಿಡ್ಡು ತೆಗೆಯಬೇಕಾಗಿದೆ. ಡ್ರಗ್ಸ್ ಈಗ ಔಷಧ ಅಂಗಡಿಯಲ್ಲಿ ಸಿಗುವ ವಸ್ತುವಂತಾಗಿದೆ. ಮಾದಕ ವಸ್ತು ಸೇವನೆ ಮಾಡುವವರನ್ನು ಕೇವಲ ಜೈಲಿಗೆ ಕಳಿಸಲು ಆಗಲ್ಲ. ಅವರಿಗೆ ಪುನರ್ವಸತಿ ಮಾಡಬೇಕು, ಕೌನ್ಸೆಲಿಂಗ್ ಮಾಡಬೇಕು, ಸೂಕ್ತ ಚಿಕಿತ್ಸೆ ನೀಡಬೇಕು. ಹೀಗಾಗಿ ಪುನರ್ವಸತಿ ಕೇಂದ್ರ ಹೆಚ್ಚು ಮಾಡುತ್ತೇವೆ’’ ಎಂದರು.

    ಇದಕ್ಕೆ ಮುನ್ನ ಮಾತನಾಡಿದ ಕಾಂಗ್ರೆಸ್‌ನ ಸೌಮ್ಯ ರೆಡ್ಡಿ, ‘‘ಡ್ರಗ್ಸ್ ವಿರುದ್ಧದ ಕಾರ್ಯಾಚರಣೆ ಕೇವಲ ಅವರೆಕಾಯಿ ಸೀಸನ್, ಮಾವಿನಹಣ್ಣಿನ ಸೀಸನ್ ರೀತಿ ಆಗಬಾರದು. ನಿರಂತರವಾಗಿ ನಡೆಯಬೇಕು ಎಂದು ಆಗ್ರಹಿಸಿದರು. ಇದಕ್ಕುತ್ತರಿಸಿದ ಸಚಿವರು, ‘‘ಇಷ್ಟು ದಿನ ಕೇಸ್ ಹಾಕಿ ಮುಗಿಸುತ್ತಿದ್ದವು, ಸಣ್ಣ ದಂಡ ಹಾಕಿ ಬಿಡುವ ಕೆಲಸ ಆಗುತ್ತಿತ್ತು, ತೀವ್ರ ಕ್ರಮ ಕೈಗೊಳ್ಳಲು ಕಾನೂನು ತೊಡಕು ಇದೆ. ಅದನ್ನು ನಿವಾರಿಸುತ್ತಿದ್ದೇವೆ. ಸಿಂಥೆಟಿಕ್ ಡ್ರಗ್ ಬರುತ್ತಿದೆ, ಕ್ಯಾಪ್ಸುಲ್, ಚಾಕೊಲೇಟ್ ರೂಪದಲ್ಲೂ ಬರುತ್ತಿದೆ. ವಿದೇಶದಿಂದ, ಪೋಸ್ಟ್‌ನಲ್ಲೂ ಬರುತ್ತಿದೆ. ನಾವು ಕೇವಲ ದಾಳಿ ಮಾಡುವುದಕ್ಕೆ ಸೀಮಿತವಾಗದೆ ಅದರ ಮೂಲವನ್ನು ಹುಡುಕುತ್ತಿದ್ದೇವೆ, ತರಿಸುವವರ ವಿರುದ್ಧ ಕ್ರಮಕೈಗೊಳ್ಳುತ್ತಿದ್ದು, ಡಾರ್ಕ್‌ ವೆಬ್ ಕ್ರ್ಯಾಕ್​ ಮಾಡಿದ್ದೇವೆ’’ ಎಂದು ಹೇಳಿದರು.

    ಬಾಳೆಹಣ್ಣಿನ ಗಾತ್ರ ನೋಡಿಯೇ ಮಾರುಹೋದ ಮಹಿಳೆ!

    ಕೋವಿಡ್​ನ ಈ ಹೊಸ ವೈರಸ್ ಇನ್ನೂ ಅಪಾಯಕಾರಿ; ಇದು ರೂಪಾಂತರಿಯ ರೂಪಾಂತರಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts