ಕೋವಿಡ್​ನ ಈ ಹೊಸ ವೈರಸ್ ಇನ್ನೂ ಅಪಾಯಕಾರಿ; ಇದು ರೂಪಾಂತರಿಯ ರೂಪಾಂತರಿ!

ನವದೆಹಲಿ: ಇನ್ನೇನು ಕರೊನಾದ ಅಬ್ಬರ ತಗ್ಗಿತು ಎಂದಾಗಲೆಲ್ಲ ಕೋವಿಡ್-19 ವೈರಸ್​ ಕುರಿತ ಮತ್ತಷ್ಟು ಆತಂಕಕಾರಿ ಸುದ್ದಿ ಮುನ್ನಲೆಗೆ ಬರುತ್ತಿರುವುದು ಈಗಾಗಲೇ ನಡೆದಿದೆ. ಇದೀಗ ಅಂಥದ್ದೇ ಒಂದು ವಿಚಾರ ಹೊರಬಿದ್ದಿದ್ದು, ಕರೊನಾ ಕುರಿತ ಆತಂಕ ಹೆಚ್ಚಿಸುವಂಥ ವಿಷಯವೊಂದು ಬಹಿರಂಗಗೊಂಡಿದೆ. ಕರೊನಾ ಹಾವಳಿ ಇನ್ನೇನು ಕಡಿಮೆಯಾಯಿತು ಎಂಬಷ್ಟರಲ್ಲಿಯೇ ಬ್ರಿಟನ್​ನಲ್ಲಿ ಕರೊನಾದ ರೂಪಾಂತರಗೊಂಡ ವೈರಸ್ ಪತ್ತೆಯಾಗಿತ್ತು. ಮಾತ್ರವಲ್ಲ, ರೂಪಾಂತರಗೊಂಡ ಈ ವೈರಸ್​ ಹೆಚ್ಚು ವೇಗವಾಗಿ ಹಬ್ಬಲಿದ್ದು, ಅಧಿಕ ಸೋಂಕನ್ನು ಹೊಂದಿದೆ ಎಂದೂ ಹೇಳಲಾಗಿತ್ತು. ಅಲ್ಲದೆ ಬ್ರಿಟನ್​ನಿಂದ ಭಾರತಕ್ಕೆ ಮರಳಿದವರಲ್ಲೂ ಈ ರೂಪಾಂತರಿ … Continue reading ಕೋವಿಡ್​ನ ಈ ಹೊಸ ವೈರಸ್ ಇನ್ನೂ ಅಪಾಯಕಾರಿ; ಇದು ರೂಪಾಂತರಿಯ ರೂಪಾಂತರಿ!