ನವದೆಹಲಿ: ಇನ್ನೇನು ಕರೊನಾದ ಅಬ್ಬರ ತಗ್ಗಿತು ಎಂದಾಗಲೆಲ್ಲ ಕೋವಿಡ್-19 ವೈರಸ್ ಕುರಿತ ಮತ್ತಷ್ಟು ಆತಂಕಕಾರಿ ಸುದ್ದಿ ಮುನ್ನಲೆಗೆ ಬರುತ್ತಿರುವುದು ಈಗಾಗಲೇ ನಡೆದಿದೆ. ಇದೀಗ ಅಂಥದ್ದೇ ಒಂದು ವಿಚಾರ ಹೊರಬಿದ್ದಿದ್ದು, ಕರೊನಾ ಕುರಿತ ಆತಂಕ ಹೆಚ್ಚಿಸುವಂಥ ವಿಷಯವೊಂದು ಬಹಿರಂಗಗೊಂಡಿದೆ.
ಕರೊನಾ ಹಾವಳಿ ಇನ್ನೇನು ಕಡಿಮೆಯಾಯಿತು ಎಂಬಷ್ಟರಲ್ಲಿಯೇ ಬ್ರಿಟನ್ನಲ್ಲಿ ಕರೊನಾದ ರೂಪಾಂತರಗೊಂಡ ವೈರಸ್ ಪತ್ತೆಯಾಗಿತ್ತು. ಮಾತ್ರವಲ್ಲ, ರೂಪಾಂತರಗೊಂಡ ಈ ವೈರಸ್ ಹೆಚ್ಚು ವೇಗವಾಗಿ ಹಬ್ಬಲಿದ್ದು, ಅಧಿಕ ಸೋಂಕನ್ನು ಹೊಂದಿದೆ ಎಂದೂ ಹೇಳಲಾಗಿತ್ತು. ಅಲ್ಲದೆ ಬ್ರಿಟನ್ನಿಂದ ಭಾರತಕ್ಕೆ ಮರಳಿದವರಲ್ಲೂ ಈ ರೂಪಾಂತರಿ ವೈರಸ್ ಪತ್ತೆಯಾಗಿತ್ತು.
ಆದರೆ ಇದೀಗ ಈ ರೂಪಾಂತರಿಯ ವೈರಸ್ ಕೂಡ ರೂಪಾಂತರಗೊಂಡಿದ್ದು, ಈ ಹಿಂದಿನದ್ದಕ್ಕಿಂತಲೂ ಹೆಚ್ಚು ಅಪಾಯಕಾರಿಯಾಗಿ ಪರಿಣಮಿಸಿದೆ ಎಂಬ ವಿಷಯ ಹೊರಬಿದ್ದಿದೆ. ಇ484ಕೆ ಎನ್ನಲಾದ ಈ ರೂಪಾಂತರಕ್ಕೊಳಗಾಗಿರುವ ವೈರಸ್ ಬ್ರಿಟನ್ನಲ್ಲಿ ಪತ್ತೆಯಾಗಿದೆ. ದಕ್ಷಿಣ ಆಫ್ರಿಕ, ಬ್ರೆಜಿಲ್ಗಳಲ್ಲಿ ಈ ಹೊಸ ವೈರಸ್ ಈಗಾಗಲೇ ಕಾಣಿಸಿಕೊಂಡಿದೆ. ಸೋಂಕು ವ್ಯಾಪಿಸುವಲ್ಲಿ ಈ ಹಿಂದಿನ ವೈರಸ್ಗಳಿಗಿಂತ ಇದು ಹೆಚ್ಚು ತೀವ್ರವಾಗಿರುವುದರಿಂದ, ಇದೇನಾದರೂ ಜಗತ್ತಿನಾದ್ಯಂತ ವ್ಯಾಪಿಸಿದರೆ ಹೆಚ್ಚಿನ ಅಪಾಯ ಸಂಭವಿಸಲಿದೆ ಎಂದು ವೈರಸ್ ಎಕ್ಸ್ಪರ್ಟ್ ಡಾ.ಜುಲಿಯನ್ ಟಾಂಗ್ ಬಿಬಿಸಿಗೆ ತಿಳಿಸಿದ್ದಾರೆ.
ಈ ಬ್ಯಾಂಕ್ ಉದ್ಯೋಗಿಗಳು ಇನ್ನು ಪರ್ಮನೆಂಟ್ ಮನೆಯಲ್ಲೇ..?!; ಬ್ಯಾಂಕ್ ಆಫ್ ಬರೋಡದಿಂದ ಹೊಸ ಪ್ಲ್ಯಾನ್…