More

    ಬೆಳಗಾವಿಯಲ್ಲಿ ಒಂದೇ ದಿನ 17 ಜನರಿಗೆ ಪಾಸಿಟಿವ್

    ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿ ಗುರುವಾರ ಒಂದೇ ದಿನ 17 ಜನರಿಗೆ ಕರೊನಾ ವೈರಸ್ ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ ಒಟ್ಟೂ 36ಕ್ಕೆ ಏರಿದೆ.

    ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಗ್ರಾಮದಲ್ಲಿ 5 ಮಹಿಳೆಯರು ಸೇರಿದಂತೆ 7 ಮಂದಿಯಲ್ಲಿ ಹಾಗೂ ಬಾಗೇವಾಡಿಯಲ್ಲಿ 1 ಪುರುಷನಿಗೆ ಸೋಂಕು ದೃಢಪಟ್ಟಿದೆ. ಚಿಕ್ಕೋಡಿಯಲ್ಲಿ 1, ರಾಯಭಾಗದಲ್ಲಿ 4 ಪುರುಷರಿಗೆ ವೈರಸ್ ಬಂದಿದೆ. ಅಲ್ಲದೆ, ಬೆಳಗಾವಿಯಲ್ಲಿ 1 ಮಹಿಳೆ ಸೇರಿ ಒಟ್ಟೂ 17 ಜನರಲ್ಲಿ ಸೋಂಕು ಪತ್ತೆಯಾಗಿದೆ. ಇವರೆಲ್ಲರೂ ದೆಹಲಿಯ ನಿಜಾಮುದ್ದೀನ್ ಪ್ರದೇಶದಲ್ಲಿನ ತಬ್ಲಿಘಿ ಜಮಾತ್ ಕೇಂದ್ರದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದವರು ಮತ್ತು ವಾಪಸ್ ಬಂದವರ ಜೊತೆ ಸಂಪರ್ಕ ಹೊಂದಿರುವುದು ಖಚಿತವಾಗಿದೆ.

    ರಾಯಬಾಗ ತಾಲೂಕಿನಲ್ಲಿ 7 ಜನರಲ್ಲಿ ಮೂವರು ಸೋಂಕಿತರು ಗೋವಾ, ಮಹಾರಾಷ್ಟ್ರದ ಮಿರಜ್ ಹಾಗೂ ವಿಜಯಪುರ ಜಿಲ್ಲೆ ಮೂಲದವರಾಗಿದ್ದಾರೆ. ಇವರು ಲಾಕ್‌ಡೌನ್ ಘೋಷಣೆಯಾದ ದಿನದಿಂದ ರಾಯಬಾಗ ತಾಲೂಕಿನಲ್ಲಿ ವಾಸಿಸುತ್ತಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts