More

    ಜಿಲ್ಲೆಯಲ್ಲಿ ಮುಂದುವರೆದ ಮಳೆಯಾರ್ಭಟ


    ಯಾದಗಿರಿ: ಜಿಲ್ಲಾದ್ಯಂತ ಕಳೆದ 4 ದಿನಗಳಿಂದ ಮಳೆಯಾರ್ಭಟ ಮುಂದುವರೆದಿದ್ದು ಗುರುವಾರ ಇಡೀ ದಿನ ಜಿಟಿಜಿಟಿ ಮಳೆ ಸುರಿದಿದೆ. ಮಳೆಯಿಂದಾಗಿ ನಗರ ಜನಜೀವನ ಅಸ್ತವ್ಯಸ್ಥವಾದರೆ, ಗ್ರಾಮೀಣ ಭಾಗದ ರೈತಾಪಿ ವರ್ಗದಲ್ಲಿ ಮಂದಹಾಸ ಮೂಡಿಸಿದೆ.
    ಜು.19ರ ವರೆಗೆ ವಾಡಿಕೆ ಮಳೆ 167 ಮಿ.ಮೀಟರ್ ಇದ್ದು, ಇದರಲ್ಲಿ ವಾಸ್ತವಿಕವಾಗಿ 119 ಮಿ.ಮೀಟರ್ ಮಳೆ ಸುರಿದೆ. ಶೇ.-29 ಕೊರತೆಯಾಗಿದೆ. ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ರೈತರು ಬಿತ್ತನೆ ಕಾರ್ಯವನ್ನು ಮುಂದುವರೆಸಬಹುದು ಎಂದು ಜಂಟಿ ಕೃಷಿ ನಿದರ್ೇಶಕ ಅಬೀದ್ ಎಸ್.ಎಸ್., ತಿಳಿಸಿದ್ದಾರೆ.
    ಮುಖ್ಯವಾಗಿ ಹತ್ತಿ ಮತ್ತು ತೊಗರಿ ಬಿತ್ತನೆಯನ್ನು ಇದೇ ತಿಂಗಳು 2 ರಿಂದ 3 ದಿವಸಗಳಲ್ಲಿ ಮಾತ್ರ ಮಾಡಬೇಕು. ತಿಂಗಳ ನಂತರ ಊರಿದರೆ ರೋಗ ಮತ್ತು ಕೀಟ ಬಾಧೆ ಹೆಚ್ಚಾಗುವ ಸಂಭವ ಇರುತ್ತದೆ. ಮತ್ತು ಜಿಲ್ಲೆಯಲ್ಲಿ ಒಂದು ವಾರ ಮಳೆಯಾಗುವ ಮುನ್ಸೂಚನೆ ಇರುವುದರಿಂದ, ಜುಲೈ ಕೊನೆಯ ವಾರದಿಂದ ಆಗಸ್ಟ್ ಕೊನೆಯ ವಾರದವರೆಗೆ ಪಯರ್ಾಯ ಬೆಳೆಯಾಗಿ ಸಜ್ಜೆ ಮತ್ತು ಸೂರ್ಯಕಾಂತಿ ಬೆಳೆಗಳನ್ನು ಬಿತ್ತನೆ ಮಾಡಬಹುದು ಎಂದು ಸಲಹೆ ನೀಡಿದ್ದಾರೆ.
    ಜಿಲ್ಲೆಯಲ್ಲಿ ಈಗಾಗಲೇ ವಿವಿಧ ಬೆಳೆಗಳನ್ನು ಬಿತ್ತೆನೆ ಮಾಡಿರುವ ರೈತರು ಆಯಾ ಬೆಳೆಗಳಿಗೆ ಜು.31ರೊಳಗೆ ವಿಮೆ ಮಾಡಿಸಬಹುದು. ಸಮೀಪದ ರೈತ ಸಂಪರ್ಕ ಕೇಂದ್ರದ ಅಕಾರಿಗಳನ್ನು ಸಂಪಕರ್ಿಸಿ, ರಾಷ್ಟ್ರೀಕೃತ ಬ್ಯಾಂಕ್, ಸಾಮಾನ್ಯ ಸೇವಾ ಕೇಂದ್ರ (ಸಿಎಸ್ಸಿ) ಮತ್ತು ಗ್ರಾಮ್-ಒನ್ ಕೇಂದ್ರಗಳಲ್ಲಿ ಬೆಳೆ ವಿಮೆ ನೋಂದಾಯಿಸಬಹುದು. ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ರೈತರಿಂದಲೇ ಬೆಳೆ ಸಮೀಕ್ಷೆ ಮಾಡುವ ಮೊಬೈಲ್ ಆ್ಯಪ್ ಬಿಡುಗಡೆ ಮಾಡಲಾಗಿದೆ. ಮೊಬೈಲ್ ಪೋನ್ನಿನ ಪ್ಲೇ-ಸ್ಟೋರ್ನಿಂದ ಡೌನ್ಲೋಡ್ ಮಾಡಿ ತಮ್ಮ ಜಮೀನಿನಲ್ಲಿ ಬೆಳೆಯ ಮಾಹಿತಿಯನ್ನು ಅಪ್ಲೋಡ್ ಮಾಡುವಂತೆ ತಿಳಿಸಿದ್ದಾರೆ.

    ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿ ಯೋಜನೆಯಡಿ ಮುಂದಿನ ಕಂತುಗಳಲ್ಲಿ ಆಥರ್ಿಕ ನೆರವು ಪಡೆಯಲು ಇ-ಕೆವೈಸಿ ಮಾಡಿಸುವುದು ಅತ್ಯಂತ ಅವಶ್ಯಕ ಹಾಗೂ ಕಡ್ಡಾಯವಾಗಿದೆ. ಈ ಯೋಜನೆಯಡಿ 14ನೇ ಕಂತಿನ ಆಥರ್ಿಕ ನೆರವನ್ನು ಇ-ಕೆವೈಸಿ ಮಾಡಿಸಿದ ಹಾಗೂ ಬ್ಯಾಂಕ್ ಖಾತೆಗಳಿಗೆ ಆಧಾರ್ ಜೋಡಣೆ ಮಾಡಿಸಿದ ಅರ್ಹ ಫಲಾನುಭವಿಗಳಿಗೆ ಮಾತ್ರ ಬಿಡುಗಡೆ ಮಾಡಲಾಗುತ್ತದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts