More

    ಜಿಲ್ಲೆಯಲ್ಲಿ 39.47 ಲಕ್ಷ ಮತದಾರರು – ಜಿಲ್ಲಾಧಿಕಾರಿ ನಿತೇಶ್ ಪಾಟೀಲ

    ಬೆಳಗಾವಿ: ಸಾವಿರಕ್ಕಿಂತ ಅಧಿಕ ಮತದಾರರಿರುವ 5 ಆಕ್ಜಿಲರಿ ಮತಗಟ್ಟೆಗಳು ಸೇರಿ ಜಿಲ್ಲೆಯಲ್ಲಿ ಒಟ್ಟಾರೆ 4,439 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ. ಮಾರ್ಗಸೂಚಿ ಪ್ರಕಾರ ಕ್ರಿಟಿಕಲ್, ದುರ್ಬಲ ವರ್ಗದ ಮತಗಟ್ಟೆಗಳನ್ನು ಗುರುತಿಸಲಾಗಿರುತ್ತದೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.

    ಜಿಲ್ಲೆಗೆ ಆಗಮಿಸಿರುವ ಎಲ್ಲ ಸಾಮಾನ್ಯ ವೀಕ್ಷಕರ ಸಮ್ಮುಖದಲ್ಲಿ ವಿಟಿಯು ಸೆನೆಟ್ ಸಭಾಂಗಣದಲ್ಲಿ ಭಾನುವಾರ ನಡೆದ ಮತಗಟ್ಟೆ ಸಿಬ್ಬಂದಿ (ಪೋಲಿಂಗ್ ಪಾರ್ಟಿ) ರ‌್ಯಾಂಡಮೈಜೇಷನ್ ಪ್ರಕ್ರಿಯೆ ವೇಳೆ ಮಾತನಾಡಿದರು. ಏ.20ಕ್ಕೆ ಕೊನೆಗೊಂಡಂತೆ 39,47,150 ಮತದಾರರಿದ್ದಾರೆ.

    ಮತದಾರರ ಅಂತಿಮ ಪಟ್ಟಿ ಸದ್ಯದಲ್ಲಿಯೇ ಪ್ರಕಟಿಸಲಾಗುವುದು ಎಂದರು. ಶೇ.15 ವೆಬ್ ಕಾಸ್ಟಿಂಗ್ ಮಾಡಲಾಗಿದ್ದು, ಅಲ್ಲದೇ 500 ಹೆಚ್ಚುವರಿ ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗುತ್ತಿದೆ. ಪ್ರತಿ ಮತಕ್ಷೇತ್ರಗಳಲ್ಲಿ ಸಖಿ ಮತಗಟ್ಟೆಗಳು, ವಿಕಲಚೇತನರು ಮತ್ತು ಸಂಪೂರ್ಣ ಮಹಿಳೆಯರೇ ನಿರ್ವಹಿಸಲಿರುವ ವಿಶೇಷ ಮತಗಟ್ಟೆಗಳನ್ನು ಕೂಡ ಸ್ಥಾಪಿಸಲಾಗುವುದು ಎಂದರು.

    ಪೊಲೀಸ್ ಆಯುಕ್ತ ಡಾ.ಎಂ.ಬಿ.ಬೋರಲಿಂಗಯ್ಯ ಮಾತನಾಡಿ, ಭದ್ರತೆಗೆ ಸಂಬಂಧಿಸಿದಂತೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಈಗಾಗಲೇ ಪ್ಯಾರಾ ಮಿಲಿಟರಿ ಪಡೆಯು ಪ್ರತಿಯೊಂದು ಮತಕ್ಷೇತ್ರಗಳಲ್ಲಿ ಸಂಚರಿಸಿ ಜನರ ವಿಶ್ವಾಸ ಗಳಿಸುವ ಕೆಲಸ ಮಾಡಿದೆ ಎಂದರು.
    ಪೊಲೀಸ್ ವೀಕ್ಷಕ ದಿನೇಶ್‌ಕುಮಾರ್ ಯಾದವ, ಶೇಮುಷಿ, ಎಸ್ಪಿ ಡಾ.ಸಂಜೀವ ಪಾಟೀಲ, ಅಪರ ಜಿಲ್ಲಾಧಿಕಾರಿ ಕೆ.ಟಿ. ಶಾಂತಲಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts