More

    ಈ ದೇಶದಲ್ಲಿ ಇಂದಿನಿಂದ ಸಾರ್ವಜನಿಕ ಸಾರಿಗೆಗೆ ಹಣ ತೆರಬೇಕಾಗಿಲ್ಲ: ಪ್ರಪಂಚದಲ್ಲೇ ಮೊದಲ ಪ್ರಯತ್ನ

    ಲಕ್ಸೆಂಬರ್ಗ್​: ನಗರ ವಾಸಿಗಳಿಗೆ ಯಾವುದೇ ಸಮಸ್ಯೆಯಾದರೂ ಬಗೆಹರಿಯಬಹುದು, ಆದರೆ ಟ್ರಾಫಿಕ್​ನದ್ದಲ್ಲ. ಟ್ರಾಫಿಕ್​ನಲ್ಲಿ ಗಂಟೆಗಟ್ಟಲೆ ಕಾಯದ ದಿನವೇ ಇಲ್ಲ ಎನ್ನುವಂತಾಗಿದೆ ಯಾಂತ್ರಿಕ ಮನುಷ್ಯನ ಬದುಕು. ಲಕ್ಸೆಂಬರ್ಗ್​ ದೇಶ ಈ ಟ್ರಾಫಿಕ್​ ಸಮಸ್ಯೆಯಿಂದ ದೂರಾಗಲು ಹೊಸ ಯೋಜನೆಯೊಂದನ್ನು ಜಾರಿಗೆ ತಂದಿದೆ. ಇಂದಿನಿಂದ ಅಲ್ಲಿನ ಎಲ್ಲ ಸಾರ್ವಜನಿಕ ಸಾರಿಗೆ ಸೌಲಭ್ಯವೂ ಉಚಿತವಾಗಿ ಸೇವೆ ಸಲ್ಲಿಸಲಿದೆ.

    2018ರಲ್ಲಿ ಲಕ್ಸೆಂಬರ್ಗ್​ನಲ್ಲಿ ನಡೆಸಲಾದ ಸಮೀಕ್ಷೆಯ ವರದಿ ಅಲ್ಲಿನ ಸರ್ಕಾರಕ್ಕೆ ದೊಡ್ಡ ತಲೆ ನೋವನ್ನು ತಂದಿಟ್ಟಿತ್ತು. ಅಲ್ಲಿನ ಜನರು ಸಾರ್ವಜನಿಕ ಸಾರಿಗೆಯತ್ತ ಮುಖ ಮಾಡದೆ ಸ್ವಂತ ಕಾರುಗಳಲ್ಲೇ ಹೆಚ್ಚಿನ ಸಂಚಾರ ನಡೆಸುತ್ತಿರುವುದು ಸಮೀಕ್ಷೆಯ ವರದಿಯಿಂದ ತಿಳಿದುಬಂದಿತ್ತು. ಶೇ.32 ಜನರು ಬಸ್​ ಬಳಸುತ್ತಿದ್ದರೆ ಶೇ.19 ಜನರು ರೈಲಿನಲ್ಲಿ ಸಂಚಾರ ಮಾಡುತ್ತಿದ್ದರು. ಉಳಿದ ಶೇ.49 ಜನರು ಅವರವರ ಸ್ವಂತ ವಾಹನದಲ್ಲಿಯೇ ಸಂಚಾರ ಮಾಡುತ್ತಿದ್ದರು. ಇದರಿಂದಾಗಿ ಹೆಚ್ಚಿನ ಟ್ರಾಫಿಕ್​ ಸಮಸ್ಯೆ ಉಂಟಾಗಿದೆ ಎಂದು ಅರಿತ ಸರ್ಕಾರ ನೂತನ ಯೋಜನೆಯೊಂದಕ್ಕೆ ಕೈ ಹಾಕಿತು. ಎಲ್ಲಾ ಸಾರ್ವಜನಿಕ ಸಾರಿಗೆಯನ್ನು ಉಚಿತವಾಗಿಸಿ, ಜನರನ್ನು ಖಾಸಗಿ ವಾಹನಳಿಂದ ಸಾರ್ವಜನಿಕ ಸಾರಿಗೆಯತ್ತ ವಾಲಿಸಬೇಕು ಎಂದು ತೀರ್ಮಾನಿಸಿತು.

    ಇಂದಿನಿಂದ (ಫೆ.29) ದೇಶದಲ್ಲಿ ಪ್ರತಿ ಸಾರ್ವಜನಿಕ ಸಾರಿಗೆಯೂ ಉಚಿತವಾಗಿ ಸೇವೆ ಸಲ್ಲಿಸಲಿವೆ. ರಾತ್ರಿ ವೇಳೆ ಸಂಚರಿಸುವ ಕೆಲ ಬಸ್ಸುಗಳು ಮತ್ತು ರೈಲಿನ ಕ್ಲಾಸ್​ 1 ಟಿಕೆಟ್​ಗಳು ಹೊರೆತುಪಡಿಸಿ ಬೇರೆಲ್ಲಾ ಸಾರ್ವಜನಿಕ ಸಾರಿಗೆಯೂ ಉಚಿತವಾಗಿರಲಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts