More

    ಪಾಕ್​ ಪ್ರಧಾನಿಗೆ ಉಗ್ರನೇ ಹೀರೋ; ಜಾಗತಿಕ ಭಯೋತ್ಪಾದಕನನ್ನು ಹುತಾತ್ಮ ಎಂದ ಇಮ್ರಾನ್​ ಖಾನ್​

    ಇಸ್ಲಾಮಾಬಾದ್​: ಪಾಕಿಸ್ತಾನ ಉಗ್ರರಿಗೆ ಸ್ವರ್ಗವಾಗಿದೆ ಎಂದು ಅಮೆರಿಕ ಘೋಷಿಸಿದ ಬೆನ್ನಲ್ಲೇ, ಪಾಕ್​ ಪ್ರಧಾನಿ ಇಮ್ರಾನ್​ ಖಾನ್​ ಅದಕ್ಕೆ ಸಮ್ಮತಿ ಸೂಚಿಸುವಂತೆಯೇ ನಡೆದುಕೊಂಡಿದ್ದಾರೆ.

    ಅಲ್​ಕೈದಾ ಮುಖ್ಯಸ್ಥ, ಜಾಗತಿಕ ಉಗ್ರ ಒಸಮಾ ಬಿನ್​ ಲಾಡೆನ್​ನನ್ನು ಸಂಸತ್​ ಕಲಾಪದಲ್ಲಿ ಹುತಾತ್ಮ ಎಂದು ಕರೆದಿದ್ದಾರೆ. ಭಯೋತ್ಪಾದನೆ ವಿರುದ್ಧ ಸಮರದಲ್ಲಿ ಪಾಕಿಸ್ತಾನ ಸಾವಿರಾರು ಜೀವಗಳನ್ನು ಕಳೆದುಕೊಂಡಿದೆ. ಹೀಗಿದ್ದರೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನವನ್ನು ಹೀಗಳೆಯಲಾಗುತ್ತಿದೆ ಎಂದೂ ಇಮ್ರಾನ್​ ಖಾನ್​ ನೋವು ತೋಡಿಕೊಂಡಿದ್ದಾರೆ.

    ಇದನ್ನೂ ಓದಿ: ಪರೀಕ್ಷೆ ಇರಲಿ; ಸಾರ್ವತ್ರಿಕ ಚುನಾವಣೆಯನ್ನೇ ನಡೆಸಲು ಮುಂದಾಗಿದೆ ಈ ದೇಶ 

    ಭಯೋತ್ಪಾದನೆ ವಿರುದ್ಧ ಸಮರದಲ್ಲಿ ನಾವು ಅಮೆರಿಕಕ್ಕೆ ನೆರವು ನೀಡಿದೆವು. ಅದರಿಂದಾಗಿಯೇ ಅವಮಾನ ಎದುರಿಸಬೇಕಾಯಿತು. ಅಫಘಾನಿಸ್ತಾನದಲ್ಲಿ ಅವರು ಯಶಸ್ವಿಯಾಗದಿದ್ದರೂ ಅದಕ್ಕೂ ಪಾಕಿಸ್ತಾನವನ್ನೇ ಹೊಣೆಯಾಗಿಸುತ್ತಾರೆ ಎಂದು ಇಮ್ರಾನ್​ ಹೇಳಿದ್ದಾರೆ.
    ಅಬೋಟಾಬಾದ್​ನಲ್ಲಿ ಅಮೆರಿಕದವರು ಒಸಾಮಾ ಬಿನ್​ ಲಾಡೆನ್​ನನ್ನು ಹುತಾತ್ಮರಾಗಿಸಿದರು. ಆ ಬಳಿಕ ಏನಾಯ್ತು? ಇಡೀ ಜಗತ್ತೇ ನಮ್ಮನ್ನು ನಿಂದಿಸಿತು. ನಮ್ಮ ಅನುಮತಿ ಇಲ್ಲದೇ, ನಮ್ಮ ನೆಲಕ್ಕೆ ಬಂದು ಹತ್ಯೆಗೈದದ್ದು ಭಾರಿ ಅವಮಾನದ ಸಂಗತಿ ಎಂದು ಇಮ್ರಾನ್​ ಉದಾಹರಣೆ ನೀಡಿದರು.

    ಇನ್ನೊಂದು ನಿದರ್ಶನದಲ್ಲಿ, ಪಾಕ್​ ನೆಲದಲ್ಲಿ ಡ್ರೋನ್​ ದಾಳಿ ನಡೆಸಿ ಮತ್ತೆ ಅವಮಾನಿಸಿದರು ಎಂದು ಇಮ್ರಾನ್​ ಹೇಳಿದರು. ಈ ವಿಡಿಯೋ ವೈರಲ್​ ಆಗುತ್ತಿದ್ದಂತೆ, ಪಾಕ್​ನ ಪ್ರತಿಪಕ್ಷಗಳು ಹಾಗೂ ನೆಟ್ಟಿಗರು ಇಮ್ರಾನ್​ ನಡೆಯನ್ನು ಖಂಡಿಸಿದ್ದಾರೆ.

    ಇದನ್ನೂ ಓದಿ: ಭಾರತದ್ದೇ ದಿಗ್ವಿಜಯ; ಗಲ್ವಾನ್​ನಿಂದ ಗೊಗ್ರಾವರೆಗೆ ವಾಸ್ತವ ಗಡಿರೇಖೆಯಿಂದ ಚೀನಿಯರನ್ನು ಹೊರಗಟ್ಟಿದ ಸೇನೆ

    ಒಸಮಾ ಬಿನ್​ ಲಾಡೆನ್​ ಪ್ರಧಾನಿಗಳ ಪಾಲಿಗೆ ಹಿರೋ ಆಗಿರಬಹುದು. ಆದರೆ, ದೇಶಕ್ಕಲ್ಲ ಎಂದು ಟೀಕಿಸಿದ್ದಾರೆ. ಒಸಮಾನನ್ನು ಈ ಹಿಂದೆಯೂ ಇಮ್ರಾನ್​ ಖಾನ್​ ಶ್ಲಾಘಿಸಿದ್ದರು. ತಮ್ಮ ಹೇಳಿಕೆಗೆ ಇಮ್ರಾನ್​ ಸ್ಪಷ್ಟನೆಯನ್ನೂ ನೀಡಿಲ್ಲ.

    ಕರೊನಾದಷ್ಟೇ ಮಾರಕವಾಗಿದ್ದ ಈ ಕಾಯಿಲೆ ಕೊನೆಗೂ ತೊಲಗಿದೆ…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts