More

    ಶಿಕ್ಷಣದಲ್ಲಿ ಜಾನಪದ ಕಲೆ ಅನುಷ್ಠಾನ : ಸರ್ಕಾರದ ಕ್ರಮಕ್ಕೆ ಟಿ. ತಿಮ್ಮೇಗೌಡ ಹರ್ಷ

    ರಾಮನಗರ: ಜಾನಪದ ಕಲೆಗಳನ್ನು ಶಿಕ್ಷಣ ವ್ಯವಸ್ಥೆಯಲ್ಲಿ ಅನುಷ್ಠಾನಗೊಳಿಸಲು ಮುಂದಾಗಿರುವ ಸರ್ಕಾರದ ಕ್ರಮಕ್ಕೆ ಕರ್ನಾಟಕ ಜಾನಪದ ಪರಿಷತ್ತು ಅಧ್ಯಕ್ಷ ಟಿ. ತಿಮ್ಮೇಗೌಡ ಹರ್ಷ ವ್ಯಕ್ತಪಡಿಸಿದರು.
    ಜಾನಪದ ಲೋಕದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ವಾತನಾಡಿ, ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ವಯ ಪಠ್ಯಕ್ರಮದಲ್ಲಿ ಜಾನಪದವನ್ನು ಬೋಧನಾ ವಿಷಯವಾಗಿ ಸೇರಿಸಲು ಪರಿಷತ್ತಿನ ಸಹಕಾರವನ್ನು ಕೇಳಿದ್ದು ಈ ನಿಟ್ಟಿನಲ್ಲಿ ಪರಿಷತ್ತು ಕಾರ್ಯಪ್ರವೃತ್ತವಾಗಿದೆ. 2021-22ನೇ ಸಾಲಿನಿಂದ ಜಾನಪದ ಡಿಪ್ಲೊವಾ ಮತ್ತು ಸರ್ಟಿಫಿಕೇಟ್ ಕೋರ್ಸ್‌ಗಳಿಗೆ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ವಾನ್ಯತೆ ನೀಡಿದೆ ಎಂದರು.
    ಕರ್ನಾಟಕ ಜಾನಪದ ಪರಿಷತ್ತು ಜಾನಪದ ಸಂಗೀತ ಸಾಹಿತ್ಯ ಮತ್ತು ಸಂಸ್ಕ್ಪ್ರತಿಯನ್ನು ಉಳಿಸುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸುತ್ತಿರುವುದನ್ನು ಗುರುತಿಸಿರುವ ಲಂಡನ್‌ನ  Quality Management System ISO ವಾನ್ಯತೆ ನೀಡಲಾಗಿದ್ದು, ಇದು ಕರ್ನಾಟಕದ ಸಾಂಸ್ಕ್ಪ್ರತಿಕ ಚರಿತ್ರೆಯಲ್ಲಿ ಒಂದು ಹೊಸ ಮೈಲಿಗಲ್ಲು ಎಂದರು.

    25ರಂದು ಪ್ರವಾಸೋದ್ಯಮ ದಿನಾಚರಣೆ: ಜ.25ರಂದು ಜಾನಪದ ಲೋಕದಲ್ಲಿ ರಾಷ್ಟ್ರೀಯ ಪ್ರವಾಸೋದ್ಯಮ ದಿನಾಚರಣೆ ಆಚರಿಸುತ್ತಿದ್ದು, ಅಂದು ಸ್ವಾತಂತ್ರ್ಯ ಹೋರಾಟದ ಅವಧಿಯಲ್ಲಿ ರಾಮನಗರ ಜಿಲ್ಲೆಗೆ ಮಹಾತ್ಮ ಗಾಂಧಿಯವರ ಭೇಟಿ ಕುರಿತು ಉಪನ್ಯಾಸ, ಭಾರತ ಸ್ವಾತಂತ್ರ್ಯ ಸಂಗ್ರಾಮಕ್ಕೆ ಕರ್ನಾಟಕದ ಕೊಡುಗೆ ಕುರಿತು ವಿದ್ಯಾರ್ಥಿಗಳಿಗೆ ರಸಪ್ರಶ್ನೆ, ರಾಷ್ಟ್ರೀಯ ಪ್ರವಾಸೋದ್ಯಮ ದಿನದ ಅಂಗವಾಗಿ ದೇಶೀಯ ಆಹಾರ ಮೇಳವನ್ನು ಆಯೋಜಿಸಲಾಗಿದೆ. ಕನ್ನಡ ನಾಡಿನ ನೆಲದ ಸಂಸ್ಕ್ಪ್ರತಿಯನ್ನು ಸಂರಕ್ಷಿಸುತ್ತಿರುವ ಬನ್ನಿ ಜಾನಪದ, ಬುಡಕಟ್ಟು, ಗ್ರಾಮೀಣ, ಸಮುದಾಯ ಆಧಾರಿತ ಪ್ರವಾಸೋದ್ಯಮವನ್ನು ಜನಪ್ರಿಯಗೊಳಿಸುವ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ತಿಮ್ಮೇಗೌಡ ತಿಳಿಸಿದರು.

    ‘ಶಾಲಾ ಕಾಲೇಜುಗಳ ಕಡೆ ಜಾನಪದದ ನಡೆ’ ಎಂಬ ಹೊಸ ಶೀರ್ಷಿಕೆಯಡಿ ಜಾನಪದದ ಬಗ್ಗೆ ಅರಿವು ಮೂಡಿಸಲು ನಮ್ಮ ತಂಡ ಶಾಲಾಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಜಾನಪದದ ಬಗ್ಗೆ ಅರಿವು ನೀಡುತ್ತದೆ. ಪ್ರತಿ ತಿಂಗಳು ಎರಡನೇ ಶನಿವಾರ ನಡೆಯುತ್ತಿರುವ ಲೋಕಸಿರಿ ತಿಂಗಳ ಅತಿಥಿ ಕಾರ್ಯಕ್ರಮಕ್ಕೆ ಒಬ್ಬರು ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳನ್ನು ಆಹ್ವಾನಿಸಲಾಗುತ್ತಿದೆ. ಎಚ್.ಎಲ್.ನಾಗೇಗೌಡರಿಗೆ ಬೆನ್ನೆಲುಬಾಗಿ ನಿಂತವರು ಹಿಂದಿನ ಅಧ್ಯಕ್ಷರಾಗಿದ್ದ ನಾಡೋಜ ಜಿ. ನಾರಾಯಣ. ಅವರ ಅವಧಿಯಲ್ಲಿ ಪರಿಷತ್ತಿಗೆ ಅನುದಾನ ಹೆಚ್ಚಾಗಿ ಆರ್ಥಿಕ ಭದ್ರತೆ ಒದಗಿ ಬಂದಿತು. ಸರ್ಕಾರದಿಂದ ಹೆಚ್ಚಿನ ಅನುದಾನ ಬರುತ್ತಿದ್ದು ಜಾನಪದ ಲೋಕದ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದರು.

    ನಾಲ್ಕು ಫೆಲೋಷಿಪ್‌: ರಾಮನಗರ ಜಿಲ್ಲಾ ಜಾನಪದ ಕಲಾವಿದರ ಕೈಪಿಡಿ ಈ ಬಾರಿಯ ಲೋಕೋತ್ಸವಕ್ಕೆ ಹೊರಬರುತ್ತಿದೆ. ರಾಜ್ಯಾದ್ಯಂತ 28 ಜಿಲ್ಲೆಗಳಲ್ಲಿ ಜಾನಪದ ಪರಿಷತ್ತಿನ ಜಿಲ್ಲಾ ಟಕಗಳು ಸಕ್ರಿಯವಾಗಿ ಕೆಲಸ ನಿರ್ವಹಿಸುತ್ತಿವೆ. ಯುವ ಜನರಿಗೆ ಕಲೆಗಳ ಬಗ್ಗೆ ಆಸಕ್ತಿ ಮೂಡಿಸಲು ಈಗಿನ ಅಧ್ಯಕ್ಷರ ದತ್ತಿಯಿಂದ ಕಲೆಗಳ ಉತ್ಸವ ನಡೆಸಲಾಗುತ್ತಿದೆ.
    ನಾಡೋಜ ಎಚ್.ಎಲ್ ನಾಗೇಗೌಡ ಸಂಶೋಧನಾ ಕೇಂದ್ರದ ವತಿಯಿಂದ ಈ ಬಾರಿ ಜಾನಪದ ವಿಷಯಕ್ಕೆ ಸಂಬಂಧಿಸಿದಂತೆ ನಾಲ್ಕು ಫೆಲೋಷಿಪ್‌ಗಳನ್ನು ನೀಡಲಾಗುತ್ತಿದೆ ಎಂದು ತಿಮ್ಮೇಗೌಡ ತಿಳಿಸಿದರು.

    ವಿವಿಧ ಕಾರ್ಯಕ್ರಮ: ಪ್ರತಿವರ್ಷ ಜನವರಿಯಲ್ಲಿ ಸಂಕ್ರಾಂತಿ ಸಂಭ್ರಮ, ದಿವಂಗತ ನಂಜರಾಜ್ ಸ್ಮರಣಾರ್ಥ ಜನಪದ ಗೀತಗಾಯನ ಸ್ಪರ್ಧೆ, ಫೆಬ್ರವರಿಯಲ್ಲಿ ಲೋಕೋತ್ಸ್ಸವ, ಜುಲೈನಲ್ಲಿ ಗಾಳಿಪಟ ಉತ್ಸವ, ಆಗಸ್ಟ್‌ನಲ್ಲಿ ಸ್ವಾತಂತ್ರ್ಯ ದಿನಾಚರಣೆ ಮತ್ತು ವಿಶ್ವ ಜಾನಪದ ದಿನ, ಸೆಪ್ಟೆಂಬರ್‌ನಲ್ಲಿ ಸಂಸ್ಥಾಪಕರ ನೆನಪಿನ ಕಾರ್ಯಕ್ರಮ, ಅಕ್ಟೋಬರ್‌ನಲ್ಲಿ ದಸರಾ ಉತ್ಸವ ಹಾಗೂ ನಾಡೋಜ ಜಿ. ನಾರಾಯಣ ಸ್ಮರಣಾರ್ಥ ಗ್ರಾಮೀಣ ಕ್ರೀಡಾಕೂಟ ನಡೆಯುತ್ತವೆ ಎಂದರು.
    ಇದೇ ಸಂದರ್ಭದಲ್ಲಿ ಕರ್ನಾಟಕ ಜಾನಪದ ಪರಿಷತ್ತು ಮತ್ತು ಜಾನಪದ ಲೋಕ ಕುರಿತ ವಾಹಿತಿಯುಳ್ಳ ಚಿತ್ರಸಹಿತ ಕರಪತ್ರ ಬಿಡುಗಡೆ ಮಾಡಲಾಯಿತು.

    ಪ್ರತಿ ವರ್ಷ ಫೆಬ್ರವರಿ ತಿಂಗಳಿನಲ್ಲಿ ಲೋಕೋತ್ಸವ ಕಾರ್ಯಕ್ರಮವನ್ನು ಜಾನಪದ ಲೋಕದಲ್ಲಿ ಹಮ್ಮಿಕೊಳ್ಳಲಾಗುತ್ತಿತ್ತು. ಆದರೆ ಈ ವರ್ಷ ಕರೋನಾ 3ನೇ ಅಲೆ ವ್ಯಾಪಿಸುತ್ತಿರುವ ಕಾರಣ ಜನರ ಆರೋಗ್ಯದ ದೃಷ್ಟಿಯಿಂದ ಇನ್ನೂ ಲೋಕೋತ್ಸವ ನಡೆಸುವ ಬಗ್ಗೆ ಅಂತಿಮ ತೀರ್ವಾನ ಕೈಗೊಂಡಿಲ್ಲ. ಒಂದು ವೇಳೆ ಸೊಂಕು ಕ್ಷೀಣಿಸಿ ಸೊಂಕು ಕಡಿಮೆಯಾದರೆ ಮನ್ನೆಚ್ಚರಿಕೆ, ಆರೋಗ್ಯ ಇಲಾಖೆ ನಿಯಮ ಪಾಲಿಸಿ ಸರ್ಕಾರದ ಜಿಲ್ಲಾಡಳಿತದ ಅನುಮತಿ ಪಡೆದು ಲೊಕೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು.
    ಟಿ. ತಿಮ್ಮೇಗೌಡ, ಕರ್ನಾಟಕ ಜಾನಪದ ಪರಿಷತ್ತು ಅಧ್ಯಕ್ಷ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts