More

    ಬಡವರ ಪರ ಯೋಜನೆಗಳ ಜಾರಿ ; ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ

    ಪಾವಗಡ: ತಾಲೂಕಿನಲ್ಲಿ ವಸತಿನಿಲಯಗಳು ಪ್ರಾರಂಭವಾಗಿದ್ದರಿಂದ 1600 ಮಕ್ಕಳಿಗೆ ಅನುಕೂಲವಾಗುತ್ತಿದೆ. ಸರ್ಕಾರದ ಮುಖ್ಯ ಆದ್ಯತೆ ಶಿಕ್ಷಣವಾಗಿದ್ದು, ಬಡವರ ಪರ ಯೋಜನೆಗಳನ್ನು ೋಷಣೆ ಮಾಡಲಾಗುತ್ತಿದೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.

    ಪಟ್ಟಣದಲ್ಲಿ ಸವಾಜ ಕಲ್ಯಾಣ ಇಲಾಖೆಯಿಂದ ಒಟ್ಟು 88 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗಿರುವ ಅಂಬೇಡ್ಕರ್ ಭವನ ಮತ್ತು ಸರ್ಕಾರಿ ಬಾಲಕರ ವಸತಿ ನಿಲಯದ 3 ಕಟ್ಟಡಗಳನ್ನು ಉದ್ಘಾಟಿಸಿ, 2 ಕಟ್ಟಡಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
    ಕರೊನಾ ಲಾಕ್‌ಡೌನ್‌ನಿಂದ ಪ್ರಗತಿ ಕುಂಠಿತವಾಗಿದ್ದರೂ, ರಾಜ್ಯ ಸರ್ಕಾರ ನಿಗದಿತ ಗುರಿಯ ಶೇ.90 ಸಾಧನೆ ವಾಡಿದೆ ಎಂದರು.

    939 ಕೋಟಿ ರೂಪಾಯಿ ವೆಚ್ಚದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆ 23 ಲಕ್ಷ ಎಸ್ಸಿ ಮತ್ತು ಎಸ್ಟಿ ವಿದ್ಯಾರ್ಥಿಗಳಿಗೆ ಸಮವಸ್ತ್ರ ಮತ್ತು ಸೈಕಲ್ ವಿತರಿಸಲಾಗಿದೆ. ಪಂಚಾಯತ್ ರಾಜ್ ಇಲಾಖೆಯಿಂದ 2,230 ಕೋಟಿ ರೂಪಾಯಿ ವೆಚ್ಚದಲ್ಲಿ ಶುದ್ಧ ಕುಡಿಯುವ ನೀರು, ನರೇಗಾ ಯೋಜನೆಯಲ್ಲಿ 6.11 ಲಕ್ಷ ಫಲಾನುಭವಿಗಳಿಗೆ ಸವಲತ್ತು ವಿತರಿಸಲಾಗಿದೆ. 25.36 ಲಕ್ಷ ಜನರಿಗೆ ಸಾವಾಜಿಕ ಭದ್ರತಾ ಯೋಜನೆಯಲ್ಲಿ 2,454 ಕೋಟಿ ರೂಪಾಯಿ ವಿತರಿಸಲಾಗಿದೆ. ಇಂಧನ ಇಲಾಖೆಯಲ್ಲಿ 2,183 ಕೋಟಿ ರೂಪಾಯಿಯನ್ನು ಎಸ್ಸಿ ಎಸ್ಟಿ ವಿದ್ಯುತ್ ಸೌಲಭ್ಯಕ್ಕಾಗಿ ನೀಡಲಾಗಿದೆ ಎಂದರು.

    ಎಸ್ಸಿ ಎಸ್ಟಿ ವಸತಿ ನಿಲಯಗಳ ನಿರ್ವಹಣೆ, ವಿದ್ಯಾರ್ಥಿ ವೇತನಕ್ಕಾಗಿ 5,607 ಕೋಟಿ ರೂಪಾಯಿ, ವಸತಿ ಯೋಜನೆಯಲ್ಲಿ 1219 ಕೋಟಿ ರೂ. ವೆಚ್ಚದಲ್ಲಿ 29,668 ಮನೆಗಳ ನಿರ್ವಾಣ ವಾಡಲಾಗಿದೆ. ಸಣ್ಣ ನೀರಾವರಿ, ನಗರಾಭಿವೃದ್ಧಿ ಮೂಲಸೌಕರ್ಯಗಳಿಗಾಗಿ 4,669 ಕೋಟಿ ಮೀಸಲಿಡಲಾಗಿದೆ ಎಂದರು.

    ಚಿತ್ರದುರ್ಗ ಸಂಸದ ಎ.ನಾರಾಯಣಸ್ವಾಮಿ, ವಾಜಿ ಶಾಸಕರಾದ ಕೆ.ಎಂ.ತಿಮ್ಮರಾಯಪ್ಪ, ಎಂಎಂಎಲ್‌ಸಿ ವೈ.ಎ.ನಾರಾಯಣಸ್ವಾಮಿ, ಜಿಪಂ ಉಪಾಧ್ಯಕ್ಷ ಶಾರದಾ ನರಸಿಂಹಮೂರ್ತಿ, ವಾಜಿ ಶಾಸಕರಾದ ಸೊವ್ಲಾನಾಯ್ಕ, ತಾಪಂ ಅಧ್ಯಕ್ಷ ಸೊಗಡು ವೆಂಕಟೇಶ್, ಜಿಲ್ಲಾಧಿಕಾರಿ ರಾಕೇಶ್ ಕುವಾರ್, ಜಿಪಂ ಸಿಇಒ ಶುಭಾ ಕಲ್ಯಾಣ್, ಮಧುಗಿರಿ ಉಪವಿಭಾಗಾಧಿಕಾರಿ ಡಾ.ನಂದಿನಿದೇವಿ, ತಹಸೀಲ್ದಾರ್ ವರದರಾಜು ಉಪಸ್ಥಿತರಿದ್ದರು.

    27,600 ಕೋಟಿ ರೂ. ಅನುದಾನ: 2020-21 ಸಾಲಿನಲ್ಲಿ ಎಸ್ಸಿ, ಎಸ್ಟಿ ಜನಾಂಗದ ಅಭಿವೃದ್ಧಿಗಾಗಿ 27,699 ಕೋಟಿ ರೂಪಾಯಿ ಮೀಸಲಿದ್ದು, ಈ ವರ್ಷದಲ್ಲಿ 27,600 ಕೋಟಿ ಈ ವರ್ಷ ಅನುದಾನ ಸಿಕ್ಕಿದೆ. ಎಲ್ಲ ಅನುದಾನ ಬಳಕೆ ವಾಡಿ ಪರಿಶಿಷ್ಠ ಜಾತಿ ಮತ್ತು ಪಂಗಡದ ಕಲ್ಯಾಣಕ್ಕಾಗಿ ಶ್ರಮಿಸಲಾಗುತ್ತದೆ. ಲೋಕೋಪಯೋಗಿ ಇಲಾಖೆಯ 28 ಜಿಲ್ಲಾ ಮುಖ್ಯರಸ್ತೆಗಳನ್ನು ಈ ವರ್ಷದಲ್ಲಿ ಮೇಲ್ದರ್ಜೆಗೆ ಏರಿಸಲಾಗುತ್ತದೆ. 1200ಕ್ಕೂ ಹೆಚ್ಚು ಹೊರಗುತ್ತಿಗೆ ಅಧಾರದಲ್ಲಿ ಇಂಜಿನಿಯರ್‌ಗಳನ್ನು ನೇಮಕ ವಾಡಿಕೊಳ್ಳಲಾಗುತ್ತದೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.

    ಇಲಾಖೆಗಳ ವಿಲೀನದಿಂದ ಸಂಪುಟ ಗಾತ್ರಕ್ಕೆ ಧಕ್ಕೆ ಇಲ್ಲ: ಸರ್ಕಾರದ ಕೆಲವು ಇಲಾಖೆಗಳ ವಿಲೀನದಿಂದ ಸಚಿವ ಸಂಪುಟ ಗಾತ್ರದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಎಂದು ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು. ಇಲಾಖೆಗಳನ್ನು ವಿಲೀನಗೊಳಿಸುವ ಚಿಂತನೆ ನಡೆದಿದೆ. ಇದರಿಂದ ನೌಕರರಿಗೆ ಯಾವುದೇ ತೊಂದರೆ ಇಲ್ಲ ಎಂದರು. ಕೆಲವು ಇಲಾಖೆಗಳಲ್ಲಿ ನೌಕರರಿದ್ದರೆ ಕೆಲಸವಿಲ್ಲ, ಕೆಲಸವಿರುವ ಕಡೆ ನೌಕರರಿಲ್ಲ. ಆದರೂ ಸರ್ಕಾರ ಸುಮಾರು 85 ಸಾವಿರ ಕೋಟಿ ರೂ. ವೇತನ, ವ್ಯವಸ್ಥೆ ನಿರ್ವಹಣೆಗೆ ಖರ್ಚು ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ತಾಲೂಕು ಮಟ್ಟದಲ್ಲಿರುವ ಸಣ್ಣಪುಟ್ಟ ಇಲಾಖೆಗಳನ್ನು ಜಿಲ್ಲಾ-ರಾಜ್ಯಮಟ್ಟದಲ್ಲಿ ಮಾತ್ರ ತರಬೇಕೇ, ಸಣ್ಣಪುಟ್ಟ 2-3 ಇಲಾಖೆಗಳಿಗೆ ವಿಲೀನಗೊಳಿಸಿ ಒಬ್ಬ ಅಧಿಕಾರಿಯನ್ನು ನೇಮಿಸಬೇಕೇ ಎಂದು ಆಲೋಚಿಸಲಾಗುತ್ತಿದೆ. ಇಲಾಖೆಗಳ ವಿಲೀನದಿಂದ ಸಚಿವ ಸಂಪುಟದ ಗಾತ್ರದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts