More

    ಯಾರೊಂದಿಗೂ ಹಗೆತನ ಸಾಧಿಸಬೇಡಿ

    ಐಮಂಗಲ: ವಿದ್ಯಾರ್ಥಿಗಳು ಚಿಕ್ಕಂದಿನಿಂದಲೇ ಸನ್ನಡತೆ ರೂಢಿಸಿಕೊಂಡು ಸಹಪಾಠಿಗಳೊಂದಿಗೆ ಸ್ನೇಹದಿಂದ ಬಾಳಬೇಕು ಎಂದು ಐಮಂಗಲ ಠಾಣೆ ಎಎಸ್‌ಐ ಕೆ. ಪ್ರಾಣೇಶ್ ತಿಳಿಸಿದರು.

    ಹೋಬಳಿಯ ಗುಯಿಲಾಳು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ ಶುಕ್ರವಾರ ಸ್ವಚ್ಛತೆ, ಲೈಂಗಿಕ ಕಿರುಕುಳ, ಅಪರಾಧ ತಡೆ ಕುರಿತು ಉಪನ್ಯಾಸ ನೀಡಿದರು.

    ಚಿಕ್ಕಂದಿನಲ್ಲಿ ಒಡಮೂಡುವ ದ್ವೇಷ, ಅಸೂಯೆ ದೊಡ್ಡವರಾದಂತೆ ಹಗೆತನಕ್ಕೆ ತಿರುಗಿ ಅಪರಾಧ ಕೃತ್ಯಕ್ಕೆ ಪ್ರಚೋದನೆಯಾಗುತ್ತದೆ. ಹೀಗಾಗಿ ಸಣ್ಣವರಿದ್ದಾಗ ಆಟೋಟ ಪಾಠಗಳಲ್ಲಿ ಮಗ್ನರಾಗಿ ಕಾಲ ಕಳೆಯಬೇಕು. ಸ್ನೇಹಿತರೊಂದಿಗೆ ಉತ್ತಮ ಸಂಬಂಧ ಇರಿಸಿಕೊಳ್ಳಬೇಕು. ಯಾರನ್ನೂ ದ್ವೇಷಿಸಬಾರದು. ಆರೋಗ್ಯ, ಸ್ವಚ್ಛತೆ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಎಂದು ತಿಳಿಸಿದರು.

    ಅಪರಿಚಿತರೊಂದಿಗೆ ಹೆಚ್ಚು ಮಾತಾಡಬೇಡಿ. ಅವರು ಏನಾದರೂ ತಿನಿಸು ಕೊಟ್ಟರೆ ತಿರಸ್ಕರಿಸಿ. ಶಾಲೆಗೆ ಬರುವಾಗ ರಸ್ತೆ ನಿಯಮ ಪಾಲಿಸಿ. ಬರುವ ಹೋಗುವ ವಾಹನ ಗಮನಿಸಿ ರಸ್ತೆ ದಾಟಿ. ಯಾರಾದರೂ ಕಿಡಿಗೇಡಿಗಳು ಲೈಂಗಿಕ ಕಿರುಕುಳ ನೀಡುವುದು, ಕಿಚಾಯಿಸುವುದು ಮಾಡಿದರೆ ತಕ್ಷಣ ಪೊಲೀಸ್ ಠಾಣೆಗೆ ದೂರು ನೀಡಿ ಎಂದು ಕಿವಿಮಾತು ಹೇಳಿದರು.

    ಶಿಕ್ಷಕರಾದ ಜೆ.ಎಸ್. ರಾಜೇಶ್ವರಿ, ಎಂ. ಸಿದ್ದಮ್ಮ, ಜಿ.ಎನ್. ಸ್ವರೂಪ, ಪೊಲೀಸ್ ಸಿಬ್ಬಂದಿ ಸೈಯದ್ ಖಾಸಿಂ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts