More

    ಓದಿನತ್ತ ಅಲಸ್ಯ ಸಲ್ಲದು

    ಐಮಂಗಲ: ವಿದ್ಯಾರ್ಥಿ ಜೀವನ ಅಮೂಲ್ಯವಾದುದು. ಈ ಅವಧಿಯಲ್ಲಿ ಆಸಕ್ತಿಯಿಂದ ಅಭ್ಯಾಸ ಮಾಡಿ ಹೆಚ್ಚಿನ ಅಂಕ ಪಡೆಯಬೇಕು. ನಿಮ್ಮ ಶಾಲೆ, ಪಾಲಕರಿಗೆ ಹೆಸರು ತರಬೇಕು ಎಂದು ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ಹೇಳಿದರು.

    ಗ್ರಾಮದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ಬಳಿ ನಿರ್ಮಿಸುವ ಸಿಸಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭಾನವಾರ ಭೂಮಿಪೂಜೆ ನೆರವೇರಿಸಿದ ಬಳಿಕ ಮಾತನಾಡಿದರು.

    ಮಕ್ಕಳು ವಿದ್ಯಾಭ್ಯಾಸದಲ್ಲಿ ಎಂದಿಗೂ ಹಿಂದುಳಿಯಬಾರದು. ಓದಿನ ಬಗ್ಗೆ ಅಲಸ್ಯ ಬೇಡ. ಪರೀಕ್ಷೆಯಲ್ಲಿ ಪರಿಶ್ರಮದ ಬಗ್ಗೆ ನಂಬಿಕೆ ಇಟ್ಟು ಬೆರಯಬೇಕು. ಇಲ್ಲಿದಿದ್ದರೆ ಮುಂದೆ ನೀವು ಪಶ್ಚಾತಾಪ ಪಡಬೇಕಾಗುತ್ತದೆ ಎಂದು ಹೇಳಿದರು.

    ವಿವಿ ಸಾಗರದ ಬಹುಗ್ರಾಮ ಕುಡಿಯುವ ನೀರು ಯೋಜನೆಯಡಿ ಮುಂದಿನ ತಿಂಗಳಲ್ಲಿ ಸುತ್ತಲಿನ ಗ್ರಾಮಗಳಿಗೆ ನೀರು ಪೂರೈಸಲಾಗುವುದು. ಈ ಶಾಲೆಗೆ ಅಗತ್ಯವಿರುವ ಸೌಕರ್ಯ ಕಲ್ಪಿಸಲಾಗುವುದು ಎಂದು ತಿಳಿಸಿದರು.

    ಪ್ರಾಚಾರ್ಯ ರಮೇಶ್ ಮಾತನಾಡಿ, ವಸತಿ ಶಾಲೆಯಲ್ಲಿ ಕುಡಿವ ನೀರಿನ ಸಮಸ್ಯೆ ಇದ್ದು, ಇಲ್ಲಿ ಬಹು ಗ್ರಾಮ ಯೋಜನೆಯಡಿ ಹಾದು ಹೋಗಿರುವ ವಿವಿ ಸಾಗರದ ಪೈಪ್‌ಲೈನ್‌ನಿಂದ ಶಾಲೆಗೆ ಕುಡಿವ ನೀರು ಒದಗಿಸಬೇಕು ಎಂದು ಮನವಿ ಮಾಡಿದರು.

    ಜಿಲ್ಲಾ ಪಂಚಾಯಿತಿ ಸದಸ್ಯರಾದ ಟಿ.ಆರ್.ರಾಜೇಶ್ವರಿ, ಕೆ.ದ್ಯಾಮೇಗೌಡ, ತಾಲೂಕು ಪಂಚಾಯಿತಿ ಸದಸ್ಯ ಬಿ.ಕೆ.ತಿಪ್ಪೇಸ್ವಾಮಿ, ಎಇಇ ಶ್ರೀನಿವಾಸ್, ಮುಖಂಡರಾದ ಮಂಜಣ್ಣ, ಒ.ಜಿ.ಬಸವರಾಜ್, ಸಿ.ಪಾತಲಿಂಗಪ್ಪ, ಜಯಣ್ಣ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts