More

    ಬೆಳೆಗೆ ತಕ್ಕ ಸಾಲ ಪಡೆಯಿರಿ

    ಐಮಂಗಲ: ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರಿಗೆ ಕೃಷಿ ಸಾಲ ಪಡೆಯಲು ಅವಕಾಶವಿದೆ ಎಂದು ಸಿಂಡಿಕೇಟ್ ಬ್ಯಾಂಕ್ ವ್ಯವಸ್ಥಾಪಕ ಸಿ.ಎಚ್.ಶಿವಸತ್ಯವರ್ಧನ್ ತಿಳಿಸಿದರು.

    ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಗ್ರಾಮದ ಸಿಂಡಿಕೇಟ್ ಬ್ಯಾಂಕ್ ಆವರಣದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಮೂರು ಕಂತುಗಳ ಮೂಲಕ ಆರು ಸಾವಿರ ಪಡೆಯುತ್ತಿರುವ ರೈತರು ಹಾಗೂ ಯಾವುದೇ ಬ್ಯಾಂಕ್‌ನಲ್ಲಿ ಕೃಷಿ ಸಾಲ ಪಡೆಯದವರು ಈ ಯೋಜನೆಯಡಿ ಬೆಳೆ ಸಾಲ ಪಡೆಯಲು ಅರ್ಹರಿರುತ್ತಾರೆ ಎಂದರು.

    ಯೋಜನೆಗೆ ಅರ್ಜಿ ಹಾಕಿದ ನಂತರ ಅವುಗಳ ಪರಿಶೀಲನೆ ಮಾಡಿ ಜಮೀನಿನಲ್ಲಿ ಹಾಕಲಾಗಿರುವ ಬೆಳೆಗಳಿಗೆ ಅನುಗುಣವಾಗಿ ಮಾರ್ಗದರ್ಶಿ ಬ್ಯಾಂಕ್ ನಿಗದಿಪಡಿಸಿದಂತೆ ಎಕರೆವಾರು ಸಾಲ ನೀಡಲಾಗುತ್ತದೆ. ಇದು ಪ್ರತಿ ವರ್ಷವೂ ಬದಲಾವಣೆಯಾಗುತ್ತದೆ ಎಂದು ತಿಳಿಸಿದರು.

    ರೈತರು ಪಡೆವ ಸಾಲಕ್ಕೆ ಶೇ.4ರಷ್ಟು ಬಡ್ಡಿ ದರವಿದ್ದು, ಕೇಂದ್ರ ಸರ್ಕಾರ ಶೇ.3ರಷ್ಟು, ರಾಜ್ಯ ಸರ್ಕಾರ ಶೇ.1ರಷ್ಟು ಪಾವತಿಸುವ ಹಣ ನೇರ ಸಾಲ ಖಾತೆಗೆ ಜಮೆಯಾಗುತ್ತದೆ. ಈಗಾಗಲೇ ಕೃಷಿ ಸಾಲ ಪಡೆದವರು ಹಳೇ ಸಾಲ ತೀರಿಸಿ ಈ ಯೋಜನೆಯ ಪ್ರಯೋಜನ ಪಡೆಯಬಹುದು ಎಂದರು.

    ಬ್ಯಾಂಕ್ ಸಿಬ್ಬಂದಿಗಳಾದ ರಾಧಮ್ಮ, ಸರೋಜಮ್ಮ, ಭಾಗ್ಯಲಕ್ಷ್ಮಿ, ಜಿ.ರವಿಕುಮಾರ್, ನಿತಿನ್ ಚೌಹಾಣ್, ವಾಸುದೇವ್, ಮುರಳಿ, ತೇಜಸ್ವಿನಿ, ಸಹಾಯಕ ಕೃಷಿ ಅಧಿಕಾರಿ ಬ್ಯಾಂಕ್ ಮಿತ್ರರಾದ ಕೆ.ಜಿನೇಂದ್ರಕುಮಾರ್, ತಿಮ್ಮಣ್ಣ, ಶ್ರೀಧರ, ಸಿದ್ದಪ್ಪ, ರೈತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts