More

    ಸರ್ಕಾರಿ ಶಾಲೆಯ ಗೋಡೆಗಳ ಮೇಲಿನ್ನು ಮಹಿಳಾ ಸಾಧಕಿಯರ ಚಿತ್ರಗಳು!; ರಾಜ್ಯವೊಂದರಿಂದ ಹೊರಬಿತ್ತು ಆದೇಶ..

    ಉತ್ತರಪ್ರದೇಶ: ಕರ್ನಾಟಕದಲ್ಲಿ ಹಿಜಾಬ್​-ಕೇಸರಿ ಸಂಘರ್ಷ, ಪಠ್ಯಪರಿಷ್ಕರಣೆ ವಿವಾದ ಮುಂತಾದ ವಿಚಾರಗಳಿಂದ ಶೈಕ್ಷಣಿಕ ವಾತಾವರಣ ಕದಡಿಹೋಗಿದ್ದರೆ ಇಲ್ಲೊಂದು ಕಡೆ ಸರ್ಕಾರಿ ಶಾಲೆಗಳ ಗೋಡೆಗಳ ಮೇಲೆ ಮಹಿಳಾ ಸಾಧಕಿಯರ ಚಿತ್ರಗಳನ್ನು ಪ್ರದರ್ಶಿಸುವ ಆದೇಶ ಮಾಡಲಾಗಿದೆ.

    ಅಂದರೆ ಸರ್ಕಾರಿ ಶಾಲೆಗಳ ಗೋಡೆಗಳ ಮೇಲೆ ರಾಣಿ ಲಕ್ಷ್ಮೀಬಾಯಿ, ಚಾಂದ್ ಬೀಬಿ, ಸಾವಿತ್ರಿ ಬಾಯಿ ಫುಲೆ, ಸರೋಜಿನಿ ನಾಯ್ಡು, ಲತಾ ಮಂಗೇಶ್ಕರ್, ಮದರ್ ತೆರೇಸಾ, ಸುಭದ್ರಾ ಕುಮಾರಿ ಚೌಹಾನ್, ಅಮೃತಾ ಪ್ರೀತಂ, ಮಹದೇವಿ ವರ್ಮಾ. ಕಲ್ಪನಾ ಚಾವ್ಲಾ, ಬೇಗಂ ಅಖ್ತರ್, ಮೇರಿ ಕೊಮ್ ಮುಂತಾದವರ ಚಿತ್ರಗಳು ಇನ್ನು ರಾರಾಜಿಸಲಿವೆ.

    ಇಂಥದ್ದೊಂದು ಆದೇಶವನ್ನು ಉತ್ತರ ಪ್ರದೇಶ ಸರ್ಕಾರ ಹೊರಡಿಸಿದೆ. ರಾಜ್ಯದ 75 ಜಿಲ್ಲೆಗಳ 1.54 ಲಕ್ಷ ಸರ್ಕಾರಿ ಶಾಲೆಗಳ ಗೋಡೆಗಳ ಮೇಲೆ ಮಹಿಳಾ ಸಾಧಕಿಯರ ಚಿತ್ರಗಳನ್ನು ಪ್ರದರ್ಶಿಸುವಂತೆ ಆದೇಶ ಹೊರಡಿಸಲಾಗಿದೆ. ಗೋಡೆಗಳ ಮೇಲೆ ಪೇಂಟ್ ಮಾಡುವ ಮೂಲಕ ಇಲ್ಲವೇ ಫ್ಲೆಕ್ಸ್ ಬಳಸುವ ಮೂಲಕ ಇದನ್ನು ಜಾರಿಗೆ ತರಬೇಕು. ಪ್ರತಿ ಚಿತ್ರದ ಕೆಳಗೆ ಅದಕ್ಕೆ ಸಂಬಂಧಿಸಿದ ಕಿರುಪರಿಚಯ ಇರಬೇಕು ಎಂದು ಆದೇಶ ಮಾಡಲಾಗಿದೆ.

    ಮಿಷನ್ ಶಕ್ತಿ ನಾಲ್ಕನೇ ಹಂತದ ಅಡಿ ಇದನ್ನು ಅಭಿಯಾನವಾಗಿ ಜಾರಿಗೊಳಿಸಲಿದ್ದು, ಈ ಮೂಲಕ ಮಕ್ಕಳಲ್ಲಿ ಮಹಿಳಾ ಸಾಧಕಿಯರ ಕುರಿತು ಅರಿವು ಮೂಡಿಸುವ ಜತೆಗೆ ಸ್ಫೂರ್ತಿ ತುಂಬಿಸುವ ಉದ್ದೇಶವನ್ನು ಹೊಂದಲಾಗಿದೆ ಎಂದು ಸರ್ಕಾರ ತಿಳಿಸಿದೆ. ಆಯಾ ಜಿಲ್ಲೆಯ ಸ್ಥಳೀಯ ಸಾಧಕ ಮಹಿಳೆಯರ ವಿಷಯಗಳನ್ನೂ ಸಂಬಂಧಿತ ಅಧಿಕಾರಿಗಳ ಅನುಮತಿ ಮೇರೆಗೆ ಬಳಸಬಹುದು ಎಂದೂ ಸರ್ಕಾರ ತಿಳಿಸಿದೆ.

    ಸಾಂಬಾರು ಪಾತ್ರೆಗೆ ಬಿದ್ದು ಬಿಸಿಯೂಟದ ಅಡುಗೆ ಸಹಾಯಕಿ ಸಾವು!

    ರಾಜ್ಯಸಭೆ ಅಡ್ಡಮತದಾನದ ಅಡ್ಡಪರಿಣಾಮ; ಕಾಂಗ್ರೆಸ್​ ಬಳಿಕ ಬಿಜೆಪಿಯಿಂದ ಶಾಸಕಿಯ ಉಚ್ಚಾಟನೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts