More

    ‘ಮರಕ್ಕೆ ಹೆಣ್ಣು ಹುಲಿಯ ಭಾವನಾತ್ಮಕ ಅಪ್ಪುಗೆ…’: ಪ್ರಶಸ್ತಿ ವಿಜೇತ ಅದ್ಭುತ ಫೋಟೋ ಇದು

    ಒಂದು ಹೆಣ್ಣು ಹುಲಿ ಮರವೊಂದನ್ನು ತುಂಬ ಆತ್ಮೀಯತೆಯಿಂದ ಅಪ್ಪಿಕೊಂಡಿರುವ ಫೋಟೋಕ್ಕೆ ವಿಶ್ವದ ಪ್ರತಿಷ್ಠಿತ ಛಾಯಾಗ್ರಹಣ ಪ್ರಶಸ್ತಿ ಲಭಿಸಿದೆ. ಈ ಫೋಟೋ ದೂರದ ಸೈಬೀರಿಯನ್​ ಕಾಡಿನಲ್ಲಿ ಕ್ಲಿಕ್ಕಿಸಿದ್ದು.

    ರಷ್ಯಾದ ಖ್ಯಾತ ಫೋಟೋಗ್ರಾಫರ್ ಸೆರ್ಗೆ ಗೋರ್ಷ್ಕೋವ್ ಎಂಬುವರು ಈ ಫೋಟೋ ತೆಗೆದಿದ್ದಾರೆ. ಹುಲಿ ಮರವನ್ನು ಬಿಗಿದಪ್ಪುವ ಕ್ಷಣದ ಫೋಟೋ ಕ್ಲಿಕ್ಕಿಸಲು 11 ತಿಂಗಳು ಶ್ರಮ ಪಟ್ಟಿದ್ದಾರೆ. ಹಿಡನ್​ ಕ್ಯಾಮರಾಗಳನ್ನಿಟ್ಟು, ತಾಳ್ಮೆಯಿಂದ ಕಾದು ಅದ್ಭುತ ಫೋಟೋ ಕ್ಲಿಕ್ಕಿಸಿರುವ ಅವರೀಗ 2020ರ ಅತ್ಯುನ್ನತ ವೈಲ್ಡ್​ಲೈಫ್​ ಫೋಟೋಗ್ರಾಫರ್​ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಲಂಡನ್​​ನ ನ್ಯಾಚುರಲ್​ ಹಿಸ್ಟರಿ ಮ್ಯೂಸಿಯಂನಲ್ಲಿ ನಡೆದ ಸಮಾರಂಭದಲ್ಲಿ ಡಚೆಸ್ ಆಫ್ ಕೇಂಬ್ರಿಜ್ ಅವರಿಂದ ಗೋರ್ಷ್ಕೋವ್ ಈ ಗೌರವಕ್ಕೆ ಪಾತ್ರರಾಗಿದ್ದಾರೆ.

    ಹುಲಿಯ ಭಾವನಾತ್ಮಕ ಅಪ್ಪುಗೆಯ ಚಿತ್ರವನ್ನು ನಿರ್ಣಾಯಕ ಸಮಿತಿಯ ಅಧ್ಯಕ್ಷರಾದ ರೋಜ್​ ಕಿಡ್ಮನ್​ ಕಾಕ್ಸ್​ ಅವರು, ಇದೊಂದು ಮಾಂತ್ರಿಕ ಕಾಡಿನಲ್ಲಿನ ನಿಕಟವಾದ ಕ್ಷಣವೊಂದರ ವಿಶಿಷ್ಟ ನೋಟ ಎಂದು ವರ್ಣಿಸಿದ್ದಾರೆ. ಇದೊಂದು ಫೋಟೋ ನೂರು ಕತೆ ಹೇಳುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. (ಏಜೆನ್ಸೀಸ್)

    ‘ಇಲ್ಲಿರುವ ತರುಣರು..ಸುಂದರ ಮಹಿಳೆಯರನ್ನು ಚುಂಬಿಸಬೇಕು ಎನ್ನಿಸುತ್ತಿದೆ’ ಎಂದ್ರು ಡೊನಾಲ್ಡ್ ಟ್ರಂಪ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts