More

    ಗದಗ ಐಎಂಎ ನೂತನ ಪದಾಧಿಕಾರಿಗಳಿಗೆ ಪದಗ್ರಹಣ ಸಮಾರಂಭ !ಗದಗ ಐಎಂಎ ರಾಜ್ಯಕ್ಕೆ ಮಾದರಿ: ಡಾ. ಯೋಗಾನಂದ ರೆಡ್ಡಿ

    ವಿಜಯವಾಣಿ ಸುದ್ದಿಜಾಲ ಗದಗ
    ಗದುಗಿನ ಭಾರತೀಯ ವೈದ್ಯಕಿಯ ಸಂಸ್ಥೆಯು ಸಂಟನೆ, ಸೇವೆ, ಕಾರ್ಯ ಚಟುವಟಿಕೆಗಳಿಂದಾಗಿ ರಾಜ್ಯದಲ್ಲಿಯೇ ಮಾದರಿಯಾಗಿದೆ ಎಂದು ರಾಜ್ಯ ಐಎಂಎ ನಿಕಟಪೂರ್ವ ಅಧ್ಯ, ಐಎಂಎಯ ಕೆ.ಎಸ್​.ಎಸ್​.ಎಸ್​ನ ಚೇರಮನ್​ ಡಾ. ವೈ. ಸಿ. ಯೋಗಾನಂದ ರೆಡ್ಡಿ ಹೇಳಿದರು.

    ಮಂಗಳವಾರ ಗದಗ ಐಎಂಎ ಸಭಾಂಗಣದಲ್ಲಿ ನೂತನ ಪದಾಧಿಕಾರಿಗಳಿಗೆ ಪದಗ್ರಹಣ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ಗದುಗಿನ ನಿಪುಣ ಮತ್ತು ಕ್ರಿಯಾಶೀಲ ವೈದ್ಯರ ತಂಡವು ಐಎಂಎ ಸಂಟನೆಯನ್ನು ಅತ್ಯಂತ ರಚನಾತ್ಮಕವಾಗಿ ಕಟ್ಟಿದ್ದಾರೆ. ವೈದ್ಯ ನಾಯಕರು ಮತ್ತು ಅವರ ಅನುಯಾಯಿಗಳಲ್ಲಿ ಪರಸ್ಪರ ಗೌರವ, ಹೊಂದಾಣಿಕೆ, ಸಹಕಾರ ಮನೋಭಾವನೆ ಇರುವುದರಿಂದಲೇ ಇದೆಲ್ಲವೂ ಸಾಧ್ಯವಾಗಿದೆ. ಕಲಿಕೆಯೊಂದಿಗೆ ನಾಯಕತ್ವದ ಗುಣಗಳನ್ನು ಅನುಯಾಯಿಗಳಲ್ಲಿ ರೂಢಿಸುವಲ್ಲಿ ಹಿರಿಯ ವೈದ್ಯರು ಮಾರ್ಗದರ್ಶನ ನೀಡುತ್ತಿದ್ದಾರೆ ಎಂದರು.


    ರಾಜ್ಯ ಐಎಂಎ ಅಧ್ಯ ಡಾ. ಶಿವಕುಮಾರ ಲಕ್ಕೋಳ ಮಾತನಾಡಿ ರಚನಾತ್ಮಕ ಕಾರ್ಯಚಟುವಟಿಕೆಗಳ ಮೂಲಕ ಸಂದ ಹಿರಿಮೆಯನ್ನು ಹೆಚ್ಚಿಸಬೇಕು ಎಂದರು. ಗದಗ ಐಎಂಎ ನೂತನ ಅಧ್ಯರಾಗಿ ಡಾ. ಜಿ. ಎಸ್​.ಪಲ್ಲೇದ, ಕಾರ್ಯದಶಿರ್ ಡಾ.ಚಂದ್ರಶೇಖರ ಆರ್​. ಬಳ್ಳಾರಿ, ಖಜಾಂಚಿ ಡಾ. ಪ್ರತಿಕ ಖೋನಾ, ಮಹಿಳಾ ವಿಭಾಗದ ಅಧ್ಯೆ ಡಾ. ಸೋನಿಯಾ ಕರೂರ, ಕಾರ್ಯದಶಿರ್ ಡಾ.ರಾಧಿಕಾ ಬಳ್ಳಾರಿ ಅವರಿಗೆ ಅಧಿಕಾರ ಹಸ್ತಾಂತರ ಮಾಡಲಾಯಿತು,
    ಡಾ. ವಿ .ಎಸ್​. ಹೊಸಮಠ, ಡಾ. ಸಲೀಂ ಜಮಾದಾರ, ಡಾ. ಶೃತಿಭಾವಿ ಪಾಟೀಲ, ಡಾ. ಗಂಗಾ ಅಳ್ಳೊಳ್ಳಿ, ಐಎಂಎ ಹಿರಿಯ, ಕಿರಿಯ ವೈದ್ಯರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts